ಶನಿವಾರಸಂತೆ, ಫೆ. 17: ಸಮೀಪದ ಕೊಡ್ಲಿಪೇಟೆ ಕಲ್ಲುಮಠದ ಎಸ್.ಕೆ.ಎಸ್. ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮಾರ್ಷಲ್ ಆಟ್ರ್ಸ್ ಮತ್ತು ಯೋಗ ಸಂಸ್ಥೆ ವತಿಯಿಂದ ಮೈಸೂರಿನ ಶಿಕ್ಷಕರ ಭವನದಲ್ಲಿ ನಡೆದ 8ನೇ ರಾಜ್ಯಮಟ್ಟದ ಕರಾಟೆ ಮತ್ತು ಯೋಗ ಟೂರ್ನಿಯಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ, ಕಂಚಿನ ಪದಕ ಪಡೆದಿದ್ದಾರೆ. ವಿದ್ಯಾರ್ಥಿಗಳಾದ ಕುನಾಲ್, ಹರ್ಷಿತ್, ಆಯುಷ್ ಡಿಂಪಲ್, ಮಂಜುನಾಥ್, ಜೀಸು, ಶ್ರೇಯಸ್, ದೀಪ್, ಮೊ. ಬುರ್ಹನ್, ಶಾಶ್ವತ್ ದೀಪ್, ತರುಣ್, ಶಮಂತ್, ಧನುಷ್, ಕೃತಿಕಾ, ಜಾಯ್ಸ್, ಪ್ಯಾಟ್ರಿಕ್, ಪಂಚಾಕ್ಷರಿ, ಮೊ. ಕಲಂದರ್, ವಂಶಿತ್ ಗೌಡ, ಭುವನ್, ಕೀರ್ತನ್, ಜಗತಿ, ಜಾನು, ಯಶಸ್ ಭಾಗವಹಿಸಿ ಪ್ರಶಸ್ತಿ, ಪದಕಗಳನ್ನು ಪಡೆದಿರುತ್ತಾರೆ. ಕರಾಟೆ ಮಾಸ್ಟರ್ ಅರುಣ್ ತರಬೇತಿ ನೀಡಿದ್ದಾರೆ.