ಕಾಶ್ಮೀರದ ಪೈಶಾಚಿಕ ಧಾಳಿಗೆ ಪ್ರತ್ಯುತ್ತರವಾಗಿ ಇಡೀ ದೇಶವೇ ಒಕ್ಕೊರಲಿನಿಂದ ಖಂಡಿಸುತ್ತಿದೆ ಹಾಗೂ ಅವಕಾಶ ಸಿಕ್ಕಲ್ಲಿ ಇಡೀ ಪಾಕಿಸ್ತಾನವನ್ನೇ ಕ್ಷಣಮಾತ್ರದಲ್ಲಿ ಕಾಲಡಿಯಲ್ಲಿಟ್ಟು ಹೊಸಕಿ ಹಾಕಿಬಿಡೋ ರಣೋತ್ಸಾಹದಲ್ಲಿದೆ. ಅದು ಸಹಜ ಕೂಡಾ. ಆದರೆ ನಿಜಕ್ಕೂ ಇದು ಪಾಕಿಸ್ತಾನ ಮಾಡಿದ ಕೃತ್ಯವಾ...?
ಊಹೂಂ....ಇದು ಪಾಕಿಸ್ತಾನವಲ್ಲ ಪಾಕಿಸ್ತಾನದ ನೆರಳಲ್ಲಿ ಕುಳಿತು ನಮ್ಮ ಹೆಮ್ಮೆಯ ಭಾರತೀಯ ನಾಗರಿಕರಾಗಿದ್ದೂ ಧರ್ಮೋನ್ಮತ್ತರಾಗಿ ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರೋ, ಭಾರತದಿಂದ ಬೇರ್ಪಟ್ಟು ಪಾಕಿಸ್ತಾನದೊಂದಿಗೆ ಕೈಜೋಡಿಸಿರೋ, ಉಂಡ ಮನೆಗೆ ಎರಡು ಬಗೆಯೋ ನರಕದಲ್ಲೂ ನೆಲೆಸಲೂ ನಾಲಾಯಕ್ಕುಗಳಾಗಿರೋ ನಮ್ಮದೇ ನೆಲದಲ್ಲಿನ ವಿಷಜಂತುಗಳಿಗಿಂತಲೂ ಅಪಾಯಕಾರಿಯಾದ ಮೂಲಭೂತವಾದಿಗಳ ಕೃತ್ಯವಿದು.
ಅತ್ಯಂತ ಬಿಗಿ ಭದ್ರ್ರತೆಯಲ್ಲಿ ಸಾಗುವ ಕನ್ವೋಯ್ ಮಾರ್ಗ ಸಂಪೂರ್ಣ ಸಂರಕ್ಷಿತವಾಗಿರುತ್ತದೆ. ಸೇನೆಯ ವತಿಯಿಂದ ಅನುಮಾನಾಸ್ಪದವಾಗಿ ಕಂಡುಬರೋ ಯಾವದೇ ವಾಹನ ಅಥವಾ ವ್ಯಕ್ತಿಯನ್ನು ಹೊಡೆದುರುಳಿಸಲಾಗುತ್ತದೆ ಮರು ಮಾತಿಲ್ಲದೆ. ಕಿಲೋಮೀಟರುಗಳಷ್ಟು ದೂರದವರೆಗೆ ಇಡೀ ಹೈವೇಯನ್ನೇ ಸೀಝ್ ಮಾಡಲಾಗಿರುತ್ತದೆ. ಸಣ್ಣದೊಂದು ಕನ್ವೋಯಿ ಸಾಗುವಾಗಲೂ ಇಷ್ಟೊಂದು ನಿಗಾವಹಿಸುವಾಗ ಇದು ಸರಿಸುಮಾರು 80 ವೆಹಿಕಲ್ಗಳಲ್ಲಿ ಬರೋಬ್ಬರಿ ಎರಡೂವರೆ ಸಾವಿರಕ್ಕೂ ಅಧಿಕ ಸೈನಿಕರು ಸಾಗುತ್ತಿರೋ ಬೃಹತ್ ಸಾಗರದಂತಹ ಯಾತ್ರೆ. ಹೇಗಿರಬಹುದೋ ಮುಂಜಾಗ್ರತಾ ಭದ್ರತಾ ವ್ಯವಸ್ಥೆ ಊಹಿಸಿಕೊಳ್ಳಿ. ಹಾಗಿದ್ದೂ ಅಷ್ಟೊಂದು ಕಟ್ಟೆಚ್ಚರದ ನಡುವಲ್ಲೂ ಕಾರೊಂದರಲ್ಲಿ ಕ್ವಿಂಟಾಲ್ ಗಟ್ಟಲೆ ಬಾಂಬುಗಳನ್ನು ಹೇರಿಕೊಂಡು ಬಂದು ಅನಾಯಾಸವಾಗಿ ಇಂತಹದ್ದೊಂದು ಭೀಕರ ಧಾಳಿ ಮಾಡಲಾಗಿದೆ.
ಅಷ್ಟಕ್ಕೂ ಧಾಳಿ ಪಾಕಿಸ್ತಾದ ಯಾವದೋ ಗಡಿಯಿಂದ ಆಕಾಶ ಮಾರ್ಗವಾಗಿ ಬಂದಿಳಿದ ಮಿಸೈಲ್ ಮಾಡಿದ್ದಲ್ಲ. ಎದುರಿಗಿರುವವನ ಬಿಸಿ ಉಸಿರೂ ಅನುಭವಕ್ಕೆ ಬರುವಷ್ಟು ಹತ್ತಿರದಲ್ಲಿ ನಿಂತು ಉಡಾಯಿಸಲಾಗಿರೋದು ಎಂಬದನ್ನು ಜಸ್ಟ್ ಇಮ್ಯಾಜಿನ್.
ಆದಿಲ್-ಅಹಮ್ಮದ್-ದಾರ್
(21 ವರ್ಷ)
ಪುಲ್ವಾಮಾ ಜಿಲ್ಲೆಯ ಕಾಕ್ಪುರದ ಸಮೀಪದಲ್ಲಿರೋ ಗಂಡಿಭಾಗ್ ಎಂಬಲ್ಲಿ (ಘಟನಾ ಸ್ಥಳಕ್ಕೂ ಈ ಊರಿಗೂ ಅಂತರ ಕೇವಲ 10 ಕಿ.ಮೀ.) ಪುಟ್ಟದೊಂದು ಅಂಗಡಿಯಿಟ್ಟುಕೊಂಡು ಜೀವನ ನಡೆಸುತ್ತಿರೋ ಗುಲಾಮ್ ಹಸನ್ ದಾರ್ ಎಂಬಾತನ ಐದು ಮಕ್ಕಳಲ್ಲೊಬ್ಬ.
ಎಸ್ಎಸ್ಎಲ್ಸಿ ವರೆಗೆ ಹೇಗೋ ಓದಿಕೊಂಡವನಿಗೆ ಸಾಕೆನಿಸಿ ಸಮೀಪದ ಸಾಮಿಲ್ ಒಂದರಲ್ಲಿ ಕೆಲಸಕ್ಕಿದ್ದ. ಭಾರತ ಹಾಗೂ ಭಾರತೀಯರೆಂದರೆ ಶತ್ರುಗಳೆಂದೇ ಭಾವಿಸುತ್ತಾ ಬಂದವನಿಗೆ ಟೆರರಿಸ್ಟುಗಳೆಲ್ಲಾ ಫಿಲ್ಮ್ ಹೀರೋಗಳಂತೆ ಕಾಣಿಸತೊಡಗಿದ್ದರು. ಅದೂ ಅಲ್ಲದೆ ಆ ಸಮಯದಲ್ಲಿ ಕಣಿವೆಯ ತುಂಬೆಲ್ಲಾ ಬುರ್ಹಾನ್ ವಾನಿಯೆಂಬ ಉಗ್ರನೊಬ್ಬ ಯುವಕರ ಕಣ್ಣಲ್ಲಿ ಮಹಾಯೋಧನಾಗಿ ನೆಲೆಯೂರತೊಡಗಿದ್ದ. ಪ್ರತಿಯೊಬ್ಬರ ಮಾತಲ್ಲೂ ಆತನ ಗುಣಗಾನ ಎಗ್ಗಿಲ್ಲದೆ ಸಾಗಿತ್ತಲ್ಲ ಅದು ಇವನೊಳಗೊಂದು ಹೊಸ ಬಯಕೆಯೊಂದನ್ನು ಹುಟ್ಟುಹಾಕಲಾರಂಭಿಸಿತ್ತು.
ಆಗ ಹುಡುಗನೊಳಗೇ ಭ್ರೂಣಾವಸ್ಥೆಯಲ್ಲಿದ್ದ ರಾಕ್ಷಸನೊಬ್ಬನ ಜನನಕ್ಕೆ ಕ್ಷಣಗಣನೆ ಶುರುವಾಗಿತ್ತು.
ಈತನ ಕಸಿನ್ ಆಲ್ರೆಡೀ ಆ ಗ್ಯಾಂಗನ್ನು ಸೇರಿಕೊಂಡಾಗಿತ್ತು, ಇನ್ನೇನು ಈತ ಅದರೊಳಗೆ ಕಾಲಿಡಬೇಕು ಅಷ್ಟರಲ್ಲಿ ಸೇನೆಯ ಗುಂಡಿಗೆ ಬಲಿಯಾಗಿಬಿಟ್ಟಿದ್ದ ಬುರ್ಹಾನ್ ವಾನಿ.
ಆಗ ಕಣಿವೆಯ ಉದ್ದಗಲಕ್ಕೂ ಶುರುವಾದ ಭಾರತ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವನಿಗೆ ಜೊತೆಯಾದವನು ಝಾಕಿರ್ ರಶೀದ್ ಭಟ್ ಅಲಿಯಾಸ್ ಝಾಕಿರ್ ಮೂಸಾ.
ಈತನೂ ಕಾಶ್ಮೀರಿಯೇ. ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಕಮಾಂಡರ್ ಆಗಿದ್ದವನು ಆಲ್ ಖೈದಾದ ಅಂಗವಾದ ಗಜûವತ್-ಉಲ್-ಹಿಂದ್ ಎಂಬ ಸಂಘಟನೆಯೊಂದನ್ನು ಹುಟ್ಟು ಹಾಕಿ ಭಾರತವನ್ನು ಇಸ್ಲಾಮಿಕ್ ಸ್ಟೇಟ್ ಮಾಡುವ ಪಣತೊಟ್ಟು ಐಸಿಸ್ ನೊಂದಿಗೆ ಬೆರೆತು ಹೋರಾಡುತ್ತಿದ್ದ ಈತ ಬುರ್ಹಾನ್ ವಾನಿ ಹಾಗೂ ಆತನ ತಂಡದಲ್ಲಿದ್ದ ಸಬ್ಜರ್ ಅಹಮದ್, ವಸೀಮ್ ಮಲ್ಲಾ, ನಸೀರ್ ಅಹ್ಮದ್, ಅಫಾತುಲ್ಲ, ಆದಿಲ್ ಅಹ್ಮದ್, ಸದ್ದಾಮ್, ವಸೀಮ್ ಅಹ್ಮದ್, ಅನೀಸ್ ಸೇರಿದಂತೆ ಅಷ್ಟೂ ಯುವ ಟೆರರಿಸ್ಟುಗಳನ್ನು ತಯಾರಿಸಿದ ಮೂಲಗುರು.
ಸರಿಯಾದ ವ್ಯಕ್ತಿಯ ಕೈಗೇ ಸಿಕ್ಕಿದ್ದ ಆದಿಲ್ ಅಹಮದ್
ಎರಡು ವರ್ಷ ಗಜûವತ್-ಉಲ್-ಹಿಂದ್ನಲ್ಲೇ ಇದ್ದ ಆದಿಲ್ ಅಹ್ಮದ್, ಅಫ್ಘಾನಿಸ್ತಾನದಿಂದ ಸೇನೆಯನ್ನು ಹಿಂಪಡೆಯುವದಾಗಿ ಅಮೇರಿಕಾ ಘೋಷಿಸಿದ್ದೇ ಇದು ನಮ್ಮ ಗೆಲವು ಅಂತ ಸಂಭ್ರಮಾಚರಣೆಗೆ ತೊಡಗಿದ್ದ ಮಸೂದ್ ಅಜûರ್ ನ ಜೈಶ್-ಎ- ಮೊಹಮ್ಮದ್ ಮೇಲ್ಯಾಕೋ ಆಕರ್ಷಿತನಾಗಿ ಏನಾದ್ರೂ ಆಗೋದಿದ್ರೆ ಅದು ಇವ್ರಿಂದಾನೇ ಎಂದೆನಿಸಿ ಕಳೆದ ವರ್ಷವಷ್ಟೇ ಅದನ್ನು ಸೇರಿಕೊಂಡಿದ್ದ.
ಈತನೇ ಪುಲ್ವಾಮದಲ್ಲಿ ನಡೆದ ಭೀಕರ ಹತ್ಯಾಕಾಂಡದ ಪ್ರಮುಖ ಆರೋಪಿ. ಈತ ಪಾಕಿಸ್ತಾನಿಯಲ್ಲ ಅಪ್ಪಟ ಭಾರತೀಯ ಮುಸ್ಲಿಂ. ಘಟನಾ ಸ್ಥಳದಿಂದ ಕೇವಲ ಹತ್ತು ಕಿ.ಮೀ. ದೂರದ ಊರಿನವನು. ಈತನಷ್ಟೇ ಅಲ್ಲ ಮೇಲೆ ಹೆಸರಿಸಿದ ಅಷ್ಟೂ ಜನರೂ ಭಾರತೀಯರೇ ಆಗಿದ್ದು ಭಾರತದಿಂದ ಬೇರೆಯಾಗಿ ಪಾಕಿಸ್ತಾನದೊಂದಿಗೆ ಬೆರೆಯೋ ಮನಸ್ಥಿತಿ ಹೊಂದಿದ್ದ/ಹೊಂದಿರೋ “ಅಮಾಯಕ” ಮತಾಂಧರು.
ಈಗ ಹೇಳಿ... ಯುದ್ಧವಾಗಬೇಕಿರೋದು, ನಿರ್ನಾಮವಾಗಬೇಕಿರೋದು ಪಾಕಿಸ್ತಾನದ್ದೋ ಅಥವಾ ನಮ್ಮೊಂದಿಗೇ ಇದ್ದು ನಮಗೇ ಎರಡು ಬಗೆಯುತ್ತಿರೋ ಇಂತಹ ನೀಚ ಭಾರತೀಯ ಮತಾಂಧ ಮನಸ್ಥಿತಿಗಳದ್ದೋ?
ಒಂದ್ ತಿಳ್ಕೊಳೀ... ಪಾಕಿಸ್ತಾನ ನಾಶವಾದ್ರೇನಾಯ್ತು, ಒಂದೇ ರಾತ್ರಿಯಲ್ಲಿ ಅಂತಹ ಹತ್ತು ಪಾಕಿಸ್ತಾನ ಕಟ್ಟಬಲ್ಲ ಹೀನ ಸುಳಿಗಳು ನಮ್ಮಲ್ಲೇ ನೆಲೆಸಿರೋವಾಗ, ಧರ್ಮದ ಅಫೀಮು ಉಣಬಡಿಸೋ ವ್ಯವಸ್ಥೆಗಳು ಕ್ರಿಯಾಶೀಲವಾಗಿರುವಾಗ, ಅಂತಹ ಸಂಘಟನೆಗಳನ್ನೂ ಬೆಂಬಲಿಸೋ ದೊಡ್ಡ ವರ್ಗವೇ ನಮ್ಮ ಸುತ್ತ ಆವರಿಸಿಕೊಂಡಿರುವಾಗ ಪಾಕಿಸ್ತಾನದ ನಾಶವೆಂಬದು ಕೇವಲ ನಮ್ಮ ಸ್ವಯಂ ತೃಪ್ತಿಗಷ್ಟೇ ಸೀಮಿತವಾಗಬಲ್ಲದೇ ಹೊರತು ಯಾವದೇ ಪರಿಹಾರವನ್ನಂತೂ ಒದಗಿಸಲಾಗದು.
ಮೊದಲು ಇಂತಹ ಪಾರ್ಥೇನಿಯಂಗಳನ್ನು ಸಾರಾಸಗಟಾಗಿ ಕಿತ್ತೆಸೆಯಬೇಕಿದೆ ಆಗಷ್ಟೇ ಶಾಂತಿ ಸಾಧ್ಯ.
- ಸುಧೀರ್ ಸಾಗರ್.