ಸುಂಟಿಕೊಪ್ಪ, ಫೆ. 17: ಇಲ್ಲಿನ ಬ್ಲೂ ಬಾಯ್ಸ್ ಯುವಕ ಸಂಘದ 2019-2020ರ ಸಾಲಿನ ನೂತನ ಅಧ್ಯಕ್ಷರಾಗಿ ಎನ್.ಎಸ್. ಆದಿಶೇಷ ಅವರು ಆಯ್ಕೆಯಾಗಿದ್ದಾರೆ. ಇಲ್ಲಿನ ಪರವೀಕ್ಷಣಾ ಮಂದಿರದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸರ್ವಾನುಮತದಿಂದ ಆರಿಸಲಾಯಿತು. ಉಪಾಧ್ಯಕ್ಷರಾಗಿ ಎಂ.ಎಸ್. ರವಿ, ಕಾರ್ಯದರ್ಶಿಯಾಗಿ ನÀರಸಿಂಹ, ಖಜಾಂಚಿಯಾಗಿ ಕೆ.ಕೆ. ವಾಸುದೇವ, ಕ್ರೀಡಾ ಕಾರ್ಯದರ್ಶಿಯಾಗಿ ಸೂರ್ಯಕುಮಾರ್, ಗೌರವ ಅಧ್ಯಕ್ಷರುಗಳಾಗಿ ಎ. ಶ್ರೀದರಕುಮಾರ್, ಬಿ.ಬಿ. ಮೋಣಪ್ಪ ಪೂಜಾರಿ, ನಿರ್ದೇಶಕರಾಗಿ ಬಿ.ಕೆ. ಪ್ರಶಾಂತ್, ಆಲಿಕುಟ್ಟಿ, ಟಿ.ವಿ. ಪ್ರಸನ್ನ, ಬಿ.ಕೆ. ಶಶಿಕುಮಾರ್ ರೈ. ಶೈಲೇಂದ್ರ, ಪುರುಶು, ದೇವಿಪ್ರಸಾದ್, ಜಯಣ್ಣ, ಜಾನ್, ಟಿ.ಆರ್. ಸುರೇಶ್ ಆಯ್ಕೆಯಾಗಿದ್ದಾರೆ.