ಸುಂಟಿಕೊಪ್ಪ, ಫೆ.17: ಕಳೆದ 24 ವರ್ಷಗಳಲ್ಲಿ ಕೇಂದ್ರದಲ್ಲಿ ಆಡಳಿತ ನಡೆಸಿದ ಸರಕಾರಗಳು 12 ಕೋಟಿ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ಜನತೆಗೆ ಕಲ್ಪಿಸಿದ್ದು, ನಾಲ್ಕುವರೆ ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರ 13 ಕೋಟಿ ಜನರಿಗೆ ಗ್ಯಾಸ್ ಸಿಲಿಂಡರ್ ಒದಗಿಸಿದ್ದಾರೆ ಎಂದು ಮೈಸೂರು ಕೊಡಗು ಕ್ಷೇತ್ರದ ಸಂಸದ ಪ್ರತಾಪಸಿಂಹ ಹೇಳಿದರು.ಇಲ್ಲಿನ ಗುಂಡುಗುಟ್ಟಿ ಮಂಜುನಾಥಯ್ಯ ಸಹಕಾರ ಭವನದಲ್ಲಿ ಕೊಡಗು ಇಂಡೇನ್ ಸರ್ವಿಸಸ್ ವತಿಯಿಂದ ಬಡ ಮಹಿಳೆಯರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಉಜ್ವಲ ಯೋಜನೆಯಡಿ ಎಲ್ಪಿಜಿ ಗ್ಯಾಸ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವದೇ ಜಾತಿ ಮತ ಧರ್ಮ ಬೇಧವಿಲ್ಲದೆ ಬಡ ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ಅನಿಲ ನೀಡಲಾಗುತ್ತಿದೆ ಇದರ ಸದುಪಯೋಗಪಡಿಸಿಕೊಳ್ಳಬೇಕು 2020ನೇ ಇಸವಿಯಲ್ಲಿ ಭಾರತೀಯರ ಪ್ರತಿ ಕುಟುಂಬದವರಿಗೂ ಗ್ಯಾಸ್ ತಲುಪಿಸಲಿದ್ದೇವೆ ಎಂದರು.ಯಾರ ಮನೆಯಲ್ಲಿ ವಿದ್ಯುತ್ ಇಲ್ಲವೋ, ಅವರು ಗ್ರಾ.ಪಂ. ಪಿಡಿಓಗೆ ಅರ್ಜಿ ನೀಡಿದರೆ ಕೇಂದ್ರ ಸರಕಾರದಿಂದ ವಿದ್ಯುತ್ ಅನ್ನು ಉಚಿತವಾಗಿ ಒದಗಿಸಲಾಗುವದು. ಹಾಗೆಯೇ ಬಿಪಿಎಲ್ ಕಾರ್ಡುದಾರರಿಗೆ ಕೇಂದ್ರ ಸರಕಾರದ ಆರೋಗ್ಯ ಸೇವೆಯಿಂದ ‘ಆಯುಷ್ಮಾನ್ ಭಾರತ್’ ಕಾರ್ಡು ಲಭ್ಯವಿದ್ದು, ಪ್ರತಿ ಕುಟುಂಬಕ್ಕೆ 1 ವರ್ಷದಲ್ಲಿ 5 ಲಕ್ಷದವರೆಗೆ ಆರೋಗ್ಯ ಚಿಕಿತ್ಸೆ ಲಭ್ಯವಿದೆ. ಇದರ ಪ್ರಯೋಜನ ಪಡೆಯುವ ಮೂಲಕ ಕೆಲಸ ಮಾಡುವ ಸದೃಢ ಸರಕಾರಕ್ಕೆ ಜನರು ಮುಂದಿನ ಚುನಾವಣೆಯಲ್ಲಿ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಕೇಂದ್ರದ ಉಜ್ವಲ ಗ್ಯಾಸ್ ಯೋಜನೆ ಪ್ರತೀ ಬಡ ಕುಟುಂಬಕ್ಕೂ ಲಭ್ಯವಾಗಬೇಕಾಗಿದೆ. ಸೂಕ್ತ ದಾಖಲೆ ಸಲ್ಲಿಸಿದರೆ ಪಡೆಯಬಹುದು; ಇದರ ಪ್ರಯೋಜನ ಪಡೆದವರು ಗ್ಯಾಸ್ ದೊರೆಯದ ಅಕ್ಕ ಪಕ್ಕದ ಕುಟುಂಬ ಸದಸ್ಯರಿಗೂ ಮಾಹಿತಿ ನೀಡಿ, ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.
(ಮೊದಲ ಪುಟದಿಂದ) ಸುಂಟಿಕೊಪ್ಪ ಪೊಲೀಸ್ ಠಾಣಾಧಿ ಕಾರಿ ಜಯರಾಂ ಮಾತನಾಡಿ 10 ವರ್ಷದ ಹಿಂದೆ ಗ್ಯಾಸ್ ಸಿಲಿಂಡರ್ ಸೌಲಭ್ಯ ಪಡೆಯಲು ಹರಸಾಹಸ ಪಡಬೇಕಾಗಿತ್ತು. ಈಗ ಕೇಂದ್ರ ಸರಕಾರ ಸಡಿಲ ನೀತಿಯಿಂದ ಬಡವರಿಗೆ ಉಜ್ವಲವಾಗಿ ಲಭಿಸುತ್ತಿದೆ ಇದನ್ನು ದುರುಪಯೋಗ ಪಡಿಸಬಾರದು. ಸಬ್ಸಿಡಿ ನೇರವಾಗಿ ಗ್ಯಾಸ್ ಸಿಲಿಂಡರ್ ಪಡೆದವರ ಖಾತೆಗೆ ಬರುವದರಿಂದ ಲೋಪವಾಗುತ್ತಿಲ್ಲ ಎಂದೂ ಹೇಳಿದರು.
ಕೊಡಗು ಇಂಡೇನ್ ಗ್ಯಾಸ್ ಸರ್ವಿಸಸ್ನ ಚೈತ್ರಾ ಭಾರತೀಶ್, ತಾ.ಪಂ. ಸದಸ್ಯರುಗಳಾದ ಓಡಿಯಪ್ಪನ ವಿವiಲಾವತಿ ಸುದೀಶ್, ಗ್ರಾ.ಪಂ. ಸದಸ್ಯರಾದ ಸಿ.ಚಂದ್ರ, ಬಿ.ಎಂ. ಸುರೇಶ್, ಪಟ್ಟೆಮನೆ ಗಿರಿಜಾ ಉದಯಕುಮಾರ್, ವಿಎಸ್ಎಸ್ಎನ್ ಅಧ್ಯಕ್ಷ ಎನ್.ಸಿ. ಪೊನ್ನಪ್ಪ, ನಿರ್ದೇಶಕಿ ಲೀಲಾ ಮೇದಪ್ಪ, ಮಾಜಿ ಅಧ್ಯಕ್ಷೆ ಬಿ.ಐ. ಭವಾನಿ, ಕಂಬಿಬಾಣೆ ಮಾಜಿ ಅಧ್ಯಕ್ಷ ಡಾ. ಶಶಿಕಾಂತರೈ, ಕೆದಕಲ್ ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ಸೋಮಯ್ಯ, ತಾ.ಪಂ. ಮಾಜಿ ಉಪಾಧ್ಯಕ್ಷ ಶಂಕರ ನಾರಾಯಣ, ಉದ್ಯಮಿ ಎಸ್.ಜಿ. ಶ್ರೀನಿವಾಸ್ ಬಿ.ಕೆ. ಪ್ರಶಾಂತ್, ಬಿ.ಕೆ.ಮೋಹನ್ ಹಾಗೂ ನಾಗೇಶ್ ಪೂಜಾರಿ ಹಾಗೂ ಬಿಜೆಪಿ ಕಾರ್ಯಕರ್ತರು, ಫಲಾನುಭವಿಗಳು ಇದ್ದರು. ಇದೇ ಸಂದರ್ಭ ಉಜ್ವಲ ಯೋಜನೆಯಾಡಿ 162 ಮಂದಿ ಫಲಾನುಭವಿಗಳಿಗೆ ಗ್ಯಾಸ್ ವಿತರಿಸಿದರು.