ವೀರಾಜಪೇಟೆ, ಫೆ. 17: ರೋಟರಿ ಕ್ಲಬ್ ವೀರಾಜಪೇಟೆ ಹಾಗೂ ಮೈಸೂರು ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಶಿಬಿರದ ಉದ್ಘಾಟನೆಯನ್ನು ಡಾ. ಪಿ.ಕೆ. ಉತ್ತಪ್ಪ ನೆರವೇರಿಸಿದರು. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ. ತಜ್ಞ ವೈದ್ಯ ಡಾ. ಎಸ್.ವಿ. ನರಸಿಂಹನ್ ಹಾಗೂ ರೋಟರಿ ಕ್ಲಬ್ ಅಧ್ಯಕ್ಷ ಎಂ.ಎಸ್. ರವಿ, ಸದಸ್ಯರಾದ ಎ.ಎಸ್. ಮಾಚಯ್ಯ, ಎಂ.ಎಂ. ಪೂವಣ್ಣ, ಮೋಹನ್ ಅಯ್ಯಪ್ಪ, ಎನ್.ಎಸ್. ನಾಣಯ್ಯ, ಭರತ್‍ರಾಂ ರೈ, ಸುನಿಲ್ ನಾಣಯ್ಯ, ಮೈಸೂರಿನ ಡಾ. ಜಗದೀಶ್ ಹಾಗೂ ಇತರ ವೈದ್ಯರು ಭಾಗವಹಿಸಿದ್ದರು. 60ಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.