ಶನಿವಾರಸಂತೆ, ಫೆ. 17: ಪಟ್ಟಣದ ವಿಘ್ನೇಶ್ವರ ಬಾಲಿಕಾ ಪದವಿಪೂರ್ವ ಕಾಲೇಜಿನಲ್ಲಿ ಹಾಸನದ ಶಿವಪ್ರಸಾದ್ ನೇತ್ರಾಲಯದ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು.
ಡಾ. ಸಿ. ಶಿವಪ್ರಸಾದ್ ಅವರ ಮಾರ್ಗದರ್ಶನದಲ್ಲಿ ವೈದ್ಯರಾದ ನಂದೀಶ್ ಮತ್ತು ಮಂಜುನಾಥ್ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ, ಶಿಕ್ಷಕರು, ಉಪನ್ಯಾಸಕರಿಗೆ ಹಾಗೂ ಸಾರ್ವಜನಿಕರಿಗೆ ಕಣ್ಣಿನ ತಪಾಸಣೆ ನಡೆಸಿದರು. ಔಷಧೋಪಚಾರದೊಂದಿಗೆ ಸೂಕ್ತ ಮಾರ್ಗದರ್ಶನ ನೀಡಿದರು.
ಶಿಕ್ಷಕರಾದ ಕೆ.ಪಿ. ಜಯಕುಮಾರ್, ವಿಶ್ವನಾಥ್, ಶ್ರೀಕಲಾ, ಸುಚಿತ್ರಾ, ಸವಿತಾ, ಸಂದೇಶ್, ಅಂಜನಪ್ಪ, ಜಹೀರ್ ಶಿಬಿರದ ಯಶಸ್ಸಿಗೆ ಸಹಕರಿಸಿದರು.