ಮಡಿಕೇರಿ, ಫೆ. 17: ಕಡಿಯತ್ತೂರು ಗ್ರಾಮದ ಭಗವತಿ ದೇವರ ಹಬ್ಬವು ತಾ. 20 ರಿಂದ 22 ರವರೆಗೆ ನಡೆಯಲಿದೆ. ತಾ. 20 ರಂದು ಬೆಳಿಗ್ಗೆ ಎತ್ತ್‍ಪೋರಾಟ, ಸಂಜೆ ದೇವರ ತೆರೆ, 21 ಕ್ಕೆ ಸಂಜೆ 9 ಗಂಟೆಯಿಂದ ಬೆಳಿಗ್ಗೆವರೆಗೆ ದೇವರ ಕೋಲಗಳು, 22ಕ್ಕೆ 9 ಗಂಟೆಯಿಂದ ವಿಷ್ಣುಮೂರ್ತಿ ಕೋಲ (ಮೇಲೇರಿ) ಹಾಗೂ ಗುಳಿಗ ತೆರೆ ನಡೆಯಲಿದೆ.