ವೀರಾಜಪೇಟೆ, ಫೆ. 17: ಅಮ್ಮತ್ತಿ ಬಳಿಯ ಬಿಳುಗುಂದ ನಲ್ವತ್ತೊಕ್ಕಲು ಬೋಂದ ಈಶ್ವರ ದೇವರ ವಾರ್ಷಿಕ ಉತ್ಸವವು ತಾ.18 ಹಾಗೂ 19ರಂದು ನಡೆಯಲಿದೆ.

ತಾ:18ರಂದು ರಾತ್ರಿ ದೇವರ ನೃತ್ಯ, ಮಹಾಪೂಜಾ ಸೇವೆ, ಅನ್ನದಾನ ತಾ. 19ರಂದು ಬೆಳಗ್ಗಿನ ಜಾವ 5 ಗಂಟೆಗೆ ಇರುಬೊಳಕ್, ಗಣಪತಿ ಹೋಮ, ಮಧ್ಯಾಹ್ನ 12 ಗಂಟೆಗೆ ದೇವರ ನರ್ತನ, ಮಹಾಪೂಜೆ, ರಾತ್ರಿ ದೇವರ ಜಳಕ, ದೇವರ ನೃತ್ಯ ವಿಶೇಷ ಪೂಜಾ ಸೇವೆ ನಡೆಯಲಿದೆ. ನಂತರ ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.