ಮಡಿಕೇರಿ, ಫೆ. 17: ಕೊಡಗು ಪ್ರೆಸ್ಕ್ಲಬ್ ವಾರ್ಷಿಕೋತ್ಸವ ಅಂಗವಾಗಿ ಪತ್ರಕರ್ತರಿಗೆ ಒಳಾಂಗಣ ಕ್ರೀಡಾಕೂಟ ಏರ್ಪಡಿಸಲಾಗಿತ್ತು. ಶುಕ್ರವಾರ ಮಡಿಕೇರಿಯ ಪತ್ರಿಕಾಭವನ ಸಭಾಂಗಣದಲ್ಲಿ ನಡೆದ ಟೇಬಲ್ ಟೆನ್ನಿಸ್, ಚೆಸ್, ಕೇರಂ, ಮೈಂಡ್ಗೇಮ್ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧೆಡೆಯ ಪತ್ರಕರ್ತರು ಪಾಲ್ಗೊಂಡಿದ್ದರು. ಕ್ರೀಡಾಕೂಟದಲ್ಲಿ ವಿಜೇತರಾದವರ ವಿವರ ಇಲ್ಲಿದೆ.
ಟೇಬಲ್ ಟೆನ್ನಿಸ್(ಪುರುಷರ ವಿಭಾಗ) ಸಿಂಗಲ್ಸ್ : ಹೊಸದಿಗಂತ ಗೋಣಿಕೊಪ್ಪಲು ವರದಿಗಾರ ಕುಪ್ಪಂಡ ದತ್ತಾತ್ರಿ(ಪ್ರ), ಸಂಯುಕ್ತ ಕರ್ನಾಟಕ ಜಿಲ್ಲಾ ವರದಿಗಾರ ಎಸ್.ಜಿ. ಉಮೇಶ್(ದ್ವಿ). ಡಬಲ್ಸ್ : ವಿಜಯವಾಣಿ ಜಿಲ್ಲಾ ವರದಿಗಾರ ಅಜ್ಜಮಾಡ ರಮೇಶ್ ಕುಟ್ಟಪ್ಪ-ಕುಪ್ಪಂಡ ದತ್ತಾತ್ರಿ(ಪ್ರ), ಕೊಡಗು ಚಾನಲ್ ನಿರ್ದೇಶಕ ಜಿ.ವಿ. ರವಿಕುಮಾರ್-ಎಸ್.ಜಿ. ಉಮೇಶ್(ದ್ವಿ). ಮಹಿಳೆಯರು(ಡಬಲ್ಸ್) : ಚಾನಲ್ 24 ವರದಿಗಾರ್ತಿ ವಿಶ್ಮಾ ಪೆಮ್ಮಯ್ಯ- ನ್ಯೂಸ್ ಡೆಸ್ಕ್ ವರದಿಗಾರ್ತಿ ವತ್ಸಲ(ಪ್ರ), ವಿಜಯ ಕರ್ನಾಟಕ ವರದಿಗಾರ್ತಿ ಉದಿಯಂಡ ಜಯಂತಿ-ಚಾನಲ್24 ವರದಿಗಾರ್ತಿ ಚಿತ್ರಾ ನಾಣಯ್ಯ(ದ್ವಿ). ಸಿಂಗಲ್ಸ್ : ಉದಿಯಂಡ ಜಯಂತಿ(ಪ್ರ), ವಿಶ್ಮಾ ಪೆಮ್ಮಯ್ಯ(ದ್ವಿ). ಕೇರಂ(ಪುರುಷರ ವಿಭಾಗ) ಡಬಲ್ಸ್ : ಕನ್ನಡಪ್ರಭ ಸಿದ್ದಾಪುರ ವರದಿಗಾರ ಆರ್. ಸುಬ್ರಮಣಿ- ಆಂದೋಲನ ಸಿದ್ದಾಪುರ ವರದಿಗಾರ ರೆಜಿತ್ ಕುಮಾರ್(ಪ್ರ), ಪ್ರಜಾವಾಣಿ ಸೋಮವಾರಪೇಟೆ ವರದಿಗಾರ ಡಿ.ಪಿ. ಲೋಕೇಶ್- ಕನ್ನಡಪ್ರಭ ಸೋಮವಾರಪೇಟೆ ವರದಿಗಾರ ಮುರುಳೀಧರ್(ದ್ವಿ). ಸಿಂಗಲ್ಸ್ : ರೆಜಿತ್ ಕುಮಾರ್(ಪ್ರ), ರಾಜ್ ನ್ಯೂಸ್ ಜಿಲ್ಲಾ ವರದಿಗಾರ ಸಂಪತ್ ರಾಜ್(ದ್ವಿ).
ಮಹಿಳೆಯರು(ಡಬಲ್ಸ್) : ಉದಿಯಂಡ ಜಯಂತಿ-ವತ್ಸಲ(ಪ್ರ), ವಿಶ್ಮಾ ಪೆಮ್ಮಯ್ಯ-ಚಿತ್ರಾ ನಾಣಯ್ಯ(ದ್ವಿ). ಸಿಂಗಲ್ಸ್ ; ಚಿತ್ತಾರ ಚಾನಲ್ ನಿರ್ದೇಶಕಿ ಸವಿತಾ ರೈ(ಪ್ರ), ವಿಶ್ಮಾ ಪೆಮ್ಮಯ್ಯ(ದ್ವಿ). ಚೆಸ್ : ಡಿ.ಪಿ. ಲೋಕೇಶ್(ಪ್ರ), ಚಿತ್ತಾರ ವಾಹಿನಿಯ ರಿಜ್ವಾನ್(ದ್ವಿ). ಮೈಂಡ್ಗೇಮ್ : ಕಾವೇರಿ ಟೈಮ್ಸ್ ಉಪಸಂಪಾದಕ ಬೊಳ್ಳಜಿರ ಅಯ್ಯಪ್ಪ(ಪ್ರ), ಅಜ್ಜಮಾಡ ರಮೇಶ್ ಕುಟ್ಟಪ್ಪ(ದ್ವಿ), ಶಕ್ತಿ ಹಿರಿಯ ಉಪಸಂಪಾದಕ ಕಾಯಪಂಡ ಶಶಿ ಸೋಮಯ್ಯ(ತೃ) ಬಹುಮಾನ ಪಡೆದಿದ್ದಾರೆ. ವಿಜೇತರಿಗೆ ತಾ.23ರಂದು ಪತ್ರಿಕಾ ಭವನದಲ್ಲಿ ನಡೆಯುವ ಪ್ರೆಸ್ಕ್ಲಬ್ ಡೇ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವದೆಂದು ಪ್ರಕಟಣೆ ತಿಳಿಸಿದೆ.