*ಗೋಣಿಕೊಪ್ಪಲು, ಫೆ. 17: ಶ್ರಿಮಂಗಲ ಗ್ರಾ.ಪಂ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ 35 ಲಕ್ಷಕ್ಕೂ ಹೆಚ್ಚು ಅನುದಾನದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಜಿ.ಪಂ ಅಧ್ಯಕ್ಷ ಹರೀಶ್ ಚಾಲನೆ ನೀಡಿದರು.
ತಲಾ 5 ಲಕ್ಷದಂತೆ ಒಟ್ಟು 35 ಲಕ್ಷ ಶಾಸಕರ ನಿಧಿಯಿಂದ ಕಾಕೊರ ಕಾಲೋನಿ ರಸ್ತೆ ಅಭಿವೃದ್ಧಿ, ಕುಮಟೂರು ಹೆದ್ದಾರಿಯಿಂದ ಕರೀಚಿ ಮನೆ ಸಂಪರ್ಕ ರಸ್ತೆ, ಬೀರುಗ ಪಾಚಿಬೈಲು ರಸ್ತೆ, ಕುಮುಟೂರು ಹೇರ್ಮಾಡು ಸಂಪರ್ಕ ರಸ್ತೆ, ಬೀರುಗ ಉಪ್ಪರರ ಪಾಚಿಬೈಲು ಸಂಪರ್ಕ ರಸ್ತೆ, ಬೀರುಗ ಕುರ್ಚಿ ಮುಖ್ಯ ರಸ್ತೆಯಿಂದ ಉಳಿಯಗೊಲ್ಲಿ ರಸ್ತೆ ಮತ್ತು ಹೆದ್ದಾರಿಯಿಂದ ಬರ್ಟ್ ಸಂಪರ್ಕ ರಸ್ತೆ ಅಭಿವೃದ್ಧಿ, ಕಾರ್ಯ ನಡೆಯಲಿದೆ. ಈ ಸಂದರ್ಭ ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷ ಕುಂಞಂಗಡ ಅರುಣ್ ಬೀಮಯ್ಯ, ತಾ.ಪಂ. ಉಪಾಧ್ಯಕ್ಷ ನೆಲ್ಲೆರ ಚಲನ್, ಸ್ಥಾನೀಯ ಸಮಿತಿ ಅಧ್ಯಕ್ಷ ಕಾಲಿಮಾಡ ತಮ್ಮು ಮುತ್ತಣ್ಣ, ಚೋನಿರ ಕಾಳಯ್ಯ, ಕಳ್ಳಂಗಡ ಪೂವಣ್ಣ, ಕೊಟ್ರಂಗಡ ಸುಬ್ರಮಣಿ, ದಾದ ಕಾರ್ಯಪ್ಪ ಹಾಜರಿದ್ದರು.