ಕುಶಾಲನಗರ, ಫೆ. 17: ಶಿಕ್ಷಣದ ಅವಧಿಯಲ್ಲಿ ವಿದ್ಯಾರ್ಥಿಗಳು ಸಮಯಕ್ಕೆ ಹೆಚ್ಚಿನ ಮಹತ್ವ ನೀಡುವದರೊಂದಿಗೆ ಜೀವನದ ನಿರ್ದಿಷ್ಟ ಗುರಿ ಸಾಧಿಸುವ ಛಲ ಹೊಂದಬೇಕೆಂದು ಕಿರುತೆರೆ ಕಲಾವಿದೆ ಸಿಂಚನಾ ಚಂದ್ರಮೋಹನ್ ಕರೆ ನೀಡಿದ್ದಾರೆ.
ಕುಶಾಲನಗರ ಸಮೀಪದ ಭಾರತಮಾತಾ ವಿದ್ಯಾಸಂಸ್ಥೆಯಲ್ಲಿ ನಡೆದ ಸಾಂಸ್ಕøತಿಕ ಸೌರಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ವಿದ್ಯಾರ್ಥಿಗಳು ಸಂಸ್ಕøತಿಗೆ ಚ್ಯುತಿ ಬರದಂತೆ ಎಚ್ಚರವಹಿಸುವದರೊಂದಿಗೆ ತಮ್ಮ ಪೋಷಕರಿಗೆ, ಶಿಕ್ಷಕರಿಗೆ ಗೌರವ ಸಲ್ಲಿಸಬೇಕು. ಶಾಲೆ ಜೀವನದ ತಳಹದಿಯಾಗಿದ್ದು, ವಿದ್ಯೆ ಮೂಲಕ ತಮ್ಮ ಗುರಿ ಹೊಂದಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಶಾಲೆಯ ಪ್ರಾಂಶುಪಾಲರಾದ ರೆ.ಫಾ. ಜೋಸೆಫ್ ಅವರು ಮಾತನಾಡಿ, ವಿದ್ಯಾರ್ಥಿಗಳು ಸಂಸ್ಕøತಿಯ ಕಾವಲುಗಾರರಾಗಿ ಕೆಲಸ ಮಾಡಬೇಕು. ಭಾರತದ ವಿವಿಧ ಸಂಸ್ಕøತಿಯ ಉಳಿವಿಗೆ ಕಾರಣರಾಗಬೇಕು ಎಂದರು.
ವೇದಿಕೆಯಲ್ಲಿ ಫಾ. ಕೆ.ಜೆ. ಜೋಸ್, ಫಾ.ಥಾಮಸ್, ಸಿಸ್ಟರ್ ಟ್ರಿಸಜಾನ್, ಸಿಸ್ಟರ್ ಸಿನಿಮ್ಯಾಥ್ಯುವ್, ಪತ್ರಕರ್ತ ಎಂ.ಎನ್. ಚಂದ್ರಮೋಹನ್, ಶಿಕ್ಷಕಿಯರಾದ ಗಾಯತ್ರಿ, ಶಹನಾಜ್ ಬೇಗಂ ಇದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.