ವೀರಾಜಪೇಟೆ, ಫೆ. 17: ವೀರಾಜಪೇಟೆಯಲ್ಲಿ ಕೂರ್ಗ್ ಕೇಬಲ್ ಬಾಯ್ಸ್ ಸಂಸ್ಥೆಯಿಂದ ರಾಜ್ಯಮಟ್ಟದ ಪುರುಷರ ಮುಕ್ತ ಕಾಲ್ಚೆಂಡು ಪಂದ್ಯಾಟವನ್ನು ಆಯೋಜಿಸಲಾಗುತ್ತಿದೆ ಇದು ಸಂಸ್ಥೆಯ ತೃತೀಯ ವರ್ಷದ ಪಂದ್ಯಾಟವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಶಂಭು ಪ್ರತಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಂಸ್ಥೆಯು ಪುರುಷರ ಟೈಗರ್ ಫೈ ಕಾಲ್ಚೆಂಡು ಪಂದ್ಯಾಟವನ್ನು ಆಯೋಜಿಸಿ ಕೊಂಡು ಬರುತ್ತಿದ್ದು, ಮೊದಲಿಗೆ ತಾಲೂಕಿಗೆ ಸೀಮಿತವಾಗಿ ನಂತರದಲ್ಲಿ ಜಿಲ್ಲಾಮಟ್ಟದಲ್ಲಿ ಆಯೋಜನೆಗೊಂಡು ಇಂದು ರಾಜ್ಯಮಟ್ಟದಲ್ಲಿ ಕಾಲ್ಚೆಂಡು ಪಂದ್ಯಾಟವನ್ನು ಆಯೋಜಿಸಲಾಗುತ್ತಿದೆ. ಪಂದ್ಯಾಟ ತಾ. 22 ರಿಂದ ಆರಂಭವಾಗಿ ತಾ. 24 ರಂದು ಕೊನೆಯಾಗಲಿದೆ. ಕೊಡಗಿನಲ್ಲಿ ಕಾಲ್ಚೆಂಡು ಪಂದ್ಯಾಟವನ್ನು ಪ್ರೋತ್ಸಾಹಿ ಸುವ ನಿಟ್ಟಿನಲ್ಲಿ ಪಂದ್ಯಾಟವನ್ನು ಆಯೊಜಿಸಲಾಗುತ್ತಿದೆ ಎಂದು ಹೇಳಿದರು.

ಕಾರ್ಯದರ್ಶಿ ಮಹೇಶ್ ಚಂದ್ರ ಮಾತನಾಡಿ, ಕಾಲ್ಚೆಂಡು ಪಂದ್ಯಾಟ ನಗರದ ತಾಲೂಕು ಮೈದಾನದಲ್ಲಿ ಆಯೋಜಿಸಲಾಗುತ್ತಿದೆ. 5+2 ಆಟಗಾರರು ತಂಡದಲ್ಲಿದ್ದು, ಪಂದ್ಯಾಟದಲ್ಲಿ ಜಯಶೀಲವಾಗುವ ಪ್ರಥಮ ತಂಡಕ್ಕೆ ರೂ. 25,555 ನಗದು ಮತ್ತು ಪಾರಿತೋಷಕ, ದ್ವಿತೀಯ ತಂಡಕ್ಕೆ ರೂ. 15,555 ನಗದು ಹಾಗೂ ಟ್ರೋಫಿ ನೀಡಲಾಗುತ್ತಿದೆ. ತಂಡಗಳು ಪಂದ್ಯಾಟಕ್ಕೆÉ ನೋಂದಾಯಿಸಲು ತಾ. 20 ಅಂತಿಮ ದಿನವಾಗಿದೆ. ತಂಡಗಳು ವಿವರಕ್ಕೆ ಅಭಿನವ್ 7019017341, ಅನೀಶ್ 7619436259 ಸಂಪರ್ಕಿಸ ಬಹುದಾಗಿದೆ ಎಂದು ಪಂದ್ಯಾಟದ ವಿವರಗಳನ್ನು ನೀಡಿದರು.

ಈ ಸಂದರ್ಭ ಉಪಾಧ್ಯಕ್ಷ ಅಜೇಯ್ ಮತ್ತು ಶಿಭಿನ್ ಉಪಸ್ಥಿತರಿದ್ದರು.