ಶನಿವಾರಸಂತೆ, ಫೆ. 18: ದುಂಡಳ್ಳಿ ಪಂಚಾಯಿತಿಯ ಸಮಸ್ಯೆಗೆ ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷ ಸಿ.ಜೆ. ಗಿರೀಶ್ ಅಧ್ಯಕ್ಷತೆಯಲ್ಲಿ ನಡೆಯಿತು.

ಜಿಲ್ಲಾಮಟ್ಟದ ಸ್ವಚ್ಛ ಸುಂದರ ಶೌಚಾಲಯ ಸ್ಪರ್ಧೆಯಲ್ಲಿ ಮೊದಲ ಬಹುಮಾನವಾಗಿ ಪ್ರಶಸ್ತಿ ಪತ್ರ, ಶೀಲ್ಡ್‍ನ್ನು ಗಣರಾಜ್ಯೋತ್ಸವ ದಿನ ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್ ಮೈದಾನದಲ್ಲಿ ಉಸ್ತುವಾರಿ ಸಚಿವರು ಪಂಚಾಯಿತಿ ಅಧ್ಯಕ್ಷ ಗಿರೀಶ್ ಹಾಗೂ ಕಾರ್ಯದರ್ಶಿ ವೇಣುಗೋಪಾಲ್ ಅವರಿಗೆ ವಿತರಿಸಿದರು. ಈ ಬಗ್ಗೆ ಪ್ರಶಸ್ತಿ ಪತ್ರ ಹಾಗೂ ಶೀಲ್ಡ್‍ನ್ನು ಸಾಮಾನ್ಯ ಸಭೆಯಲ್ಲಿ ಪ್ರದರ್ಶಿಸಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ, ಶೌಚಾಲಯ ಬಳಕೆ ಬಗ್ಗೆ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸಲು ಕೈಗೊಂಡ ಕ್ರಿಯಾತ್ಮಕ ಕಾರ್ಯಕ್ರಮ ಗಳಿಗಾಗಿ ಈ ಗೌರವ ಲಭಿಸಿದೆ ಎಂದು ಅಧ್ಯಕ್ಷರು ಹೇಳಿದರು.

ಹರಿಯಾಣದಲ್ಲಿ ನಡೆದ ‘ಸ್ವಚ್ಛ ಶಕ್ತಿ-2019’ ರ ಕಾರ್ಯಕ್ರಮದಲ್ಲಿ ದುಂಡಳ್ಳಿ ಗ್ರಾಮ ಪಂಚಾಯಿತಿ ಸ್ವಸಹಾಯ ಸಂಘದ ಸದಸ್ಯೆ ಹಾಗೂ ಸ್ವಚ್ಛಾಗ್ರಾಹಿ ಎನ್.ಕೆ. ಸುಮತಿ ಇವರಿಗೆ ಸನ್ಮಾನ ಲಭಿಸಿದೆ. ಇವರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ ಎಂದು ಪಿ.ಡಿ.ಓ. ಸುಮೇಶ್ ಹೇಳಿದರು.

ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ರೂಪ ಪುಟ್ಟರಾಜು, ಸದಸ್ಯರುಗಳಾದ ಎನ್.ಕೆ. ಸುಮತಿ, ಬಿ.ಎಂ. ಪಾರ್ವತಿ, ನೇತ್ರಾವತಿ, ಕಮಲಮ್ಮ, ಮನು ಹರೀಶ್, ಬಿಂದಮ್ಮ, ಡಿ.ಎಲ್. ಯೋಗೇಂದ್ರ, ಎಸ್.ಸಿ. ಸಂತೋಷ್, ಎಂ.ಸಿ. ಹೂವಣ್ಣ, ಎ.ಆರ್. ರಕ್ಷಿತ, ಪಿ.ಡಿ.ಓ. ಸುಮೇಶ್ ಉಪಸ್ಥಿತರಿದ್ದರು. ಪಂಚಾಯಿತಿ ಕಾರ್ಯದರ್ಶಿ ವೇಣುಗೋಪಾಲ್ ಸ್ವಾಗತಿಸಿ, ವಂದಿಸಿದರು.