ಗೋಣಿಕೊಪ್ಪಲು, ಫೆ.18: ಸಾಧನೆಗೆ ವಿದ್ಯಾಸಂಸ್ಥೆಯ ಹೆಸರು ಮುಖ್ಯವಲ್ಲ. ಕನ್ನಡ ಶಾಲೆ, ಸರ್ಕಾರಿ ಶಾಲೆಗಳು ಅಥವಾ ಯಾವದೇ ಸಾಧಾರಣ ಶಾಲೆಯಲ್ಲಿಯೂ ಓದಿ ಸಾಧನೆ ಮಾಡಬಹುದಾಗಿದೆ. ‘ವೀರಾಜಪೇಟೆ ಮಹಿಳಾ ಸಮಾಜದಲ್ಲಿ ನರ್ಸರಿ ಶಿಕ್ಷಣ, ಭಾರತೀಯ ಸಂಸ್ಕೃತಿ ವಿದ್ಯಾಶಾಲೆ, ಸರ್ಕಾರಿ ಲಾ ಕಾಲೇಜಿನಲ್ಲಿ ತಾನು ವ್ಯಾಸಂಗ ಮಾಡಿದ್ದು, ಬದುಕಿನಲ್ಲಿ ಕೆಲವೊಂದು ನೀತಿ ನಿಯಮಗಳನ್ನು ಅಳವಡಿಸಿ ಕೊಂಡಲ್ಲಿ ಗುರಿ ಈಡೇರಿಕೆ ಕಷ್ಟವಲ್ಲ’ ಎಂದು ಕರ್ನಾಟಕ ಸರ್ಕಾರದ ‘ಅಡ್ವೋಕೇಟ್ ಜನರಲ್’ ಅಜ್ಜಿಕುಟ್ಟೀರ ಎಸ್.ಪೆÇನ್ನಣ್ಣ ಅಭಿಪ್ರಾಯಪಟ್ಟರು.
ಗೋಣಿಕೊಪ್ಪಲು ಕಾವೇರಿ ಪದವಿ, ಸ್ನಾತ್ತಕೋತ್ತರ ಮತ್ತು ಪ.ಪೂ.ಕಾಲೇಜಿನ ವಿದ್ಯಾರ್ಥಿ ಸಂಘದ ಸಮಾರೋಪದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವದೇ ಯಶಸ್ಸು ಅಥವಾ ವೈಫಲ್ಯಕ್ಕೆ ನಾವೇ ಮೂಲ ಕಾರಣ. ಯಶಸ್ಸಿನ ಹಾದಿಯಲ್ಲಿ ಸಾಗಬೇಕಾದರೆ ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳಬೇಕು. ಭವಿಷ್ಯದ ಕನಸನ್ನು ನನಸಾಗಿಸಿಕೊಳ್ಳುವಲ್ಲಿ ದಿಟ್ಟತನ, ಛಲ ಅಗತ್ಯ ಎಂದರು.
ಅಂತರ್ರಾಷ್ಟ್ರೀಯ ಹಾಕಿ ಅಂಪೈರ್ ಅನುಪಮಾ ಮಂದಣ್ಣ ಅವರು ಮಾತನಾಡಿ, ಪ್ರತಿ ವಿದ್ಯಾರ್ಥಿಗಳಿಗೂ ಯಶಸ್ಸಿನ ಹಸಿವು ಇರಬೇಕು. ಶೇ.100 ರಷ್ಟು ಶ್ರಮವಹಿಸಿದರೆ ಸಾಧನೆ ಕಷ್ಟವಲ್ಲ ಎಂದು ಹೇಳಿದರು.
ಕಾವೇರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಎ.ಸಿ.ಗಣಪತಿ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಜಿ.ಉತ್ತಪ್ಪ ಮಾತನಾಡಿದರು. ಪದವಿ ಕಾಲೇಜು ವಾರ್ಷಿಕ ವರದಿಯನ್ನು ಪ್ರಾಂಶುಪಾಲೆÀ ಪೆÇ್ರ. ಎಸ್.ಆರ್.ಉಷಾಲತಾ ಮತ್ತು ಪ.ಪೂ.ಕಾಲೇಜು ವರದಿಯನ್ನು ಎಸ್.ಎಸ್.ಮಾದಯ್ಯ ಓದಿದರು. ವೇದಿಕೆಯಲ್ಲಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಡಾ. ರೇಖಾವಸಂತ್ ನಿರೂಪಿಸಿ, ಚಿರಾಗ್ ಪ್ರಾರ್ಥಿಸಿ ಕಾವೇರಿ ಪದವಿ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಕೆ.ಕೆ.ಚಿತ್ರಾವತಿ ಸ್ವಾಗತಿಸಿ, ಪ.ಪೂ. ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ತಿರುಮಲಯ್ಯ ವಂದಿಸಿದರು.
ಗಣ್ಯರ ಸಂದೇಶವನ್ನು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ಸಂಘದ ಮುಖ್ಯಸ್ಥರಾದ ಬೆನೆಡಿಕ್ಟ್ ಸಲ್ಡಾನ ಓದಿದರು.ಕಾರ್ಯಕ್ರಮದಲ್ಲಿ ಪ್ರತಿಭಾ ಪುರಷ್ಕಾರ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಸಮಾರೋಪದ ನಂತರ ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.