ಸುಂಟಿಕೊಪ್ಪ, ಫೆ. 18: ಭಗವತಿ ದೇವರ ಆರಾಧಕರಾಗಿರುವ ಕೊಡಙಲ್ಲೂರ್ ಭಗವತಿ ವೆಳಿಚ್ಚಪಾಡ್ ಸಂಘ ಹಾಗೂ ಸಮುದಾಯದವರು ದೇವರು ಹಾಗೂ ಭಕ್ತರ ನಡುವೆ ಮಧ್ಯಸ್ಥಕರಾಗಿ ಸೇವೆ ಸಲ್ಲಿಸಿ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ನಿರತರಾಗಿರುವದು ಶ್ಲಾಘನೀಯವಾದುದು ಎಂದು ಹಾಸನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಎ. ಲೋಕೇಶ್‍ಕುಮಾರ್ ಹೇಳಿದರು.

ಇಲ್ಲಿನ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ವೆಳಿಚ್ಚಪಾಡ್ ಸಂಘದ ಕೊಡಗು ಜಿಲ್ಲಾ ಭಗವತಿ ಶಾಖೆಯ 5ನೇ ವಾರ್ಷಿಕೋತ್ಸವ ಜಿಲ್ಲಾ ಸಮಾವೇಶ ಹಾಗೂ ಕುಟುಂಬ ಸಂಗಮದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಭದ್ರಕಾಳಿ ದೇವರ ಅನುಯಾಯಿಗಳಾದ ವೆಳಿಚ್ಚಪಾಡು ಸಂಘದ ಆಚಾರ ವಿಚಾರಗಳು ನಮ್ಮ ಸಂಸ್ಕøತಿಯ ಪ್ರತೀಕಾವಾಗಿದ್ದೆ ಸಂಸ್ಕøತಿ ಕಲೆಯನ್ನು ಉಳಿಸಿ ಭಾರತದ ವೈವಿಧ್ಯತೆಯಲ್ಲಿ ಧರ್ಮವನ್ನು ಉಳಿಸಿ ಬೆಳೆ ಸಾಲದಲ್ಲಿ ಇವರ ಶ್ರಮ ಅಪಾರವಾದುದು ಎಂದೂ ಹೇಳಿದರು.

ಇದಕ್ಕೂ ಮುನ್ನ ಬೆಳಿಗ್ಗೆ ಇಲ್ಲಿನ ಅಯ್ಯಪ್ಪಸ್ವಾಮಿ ದೇವಾಲಯದಿಂದ ತಾಲಪೊಲಿ ಮತ್ತು ಚಂಡೆಮೇಳದೊಂದಿಗೆ ಕಳಸಹೊತ್ತ ಮಹಿಳೆಯರು ವೆಳಿಚ್ಚಪಾಡ್ ರಕ್ಷಣಾಧಿಕಾರಿ ಪಿ.ಆರ್.ಶಿವದಾಸ್, ವೆಳಿಚ್ಚಪಾಡ್ ಅವರು ಹರಿಬಾಳ್ ಹಿಡಿದು ದೇವರ ದರ್ಶನದೊಂದಿಗೆ ಮೆರವಣಿಗೆಯಲ್ಲಿ ಸಾಗಿದ್ದನ್ನು ಪಟ್ಟಣದ ಇಕ್ಕೆಲಗಳಲ್ಲಿ ನೆರೆದಿದ್ದ ಜನರು ವೀಕ್ಷಿಸಿ ಭಕ್ತಿಯ ಪರಾಕಷ್ಠೆಗೆ ಸಾಕ್ಷಿಭೂತರಾದರು.

ಮುಖ್ಯ ಭಾಷಣಕರ ಕುಕ್ಕೆ ಸುಬ್ರಮಣ್ಯದ ಧಾರ್ಮಿಕ ಚಿಂತಕ ಲಕ್ಷ್ಮೀಶ ಗಬ್ಬಲಡ್ಕ ನಮ್ಮ ನಂಬಿಕೆಯೇ ಮನುಷ್ಯನ ಯಶಸ್ವಿನ ಮೆಟ್ಟಿಲಾಗಲಿದೆ. ಉಪಾಸತಿ ಮೂಲಕ ನಮ್ಮ ಆಂತರ್ಯದ ರಾಕ್ಷಿಸೀ ಶಕ್ತಿಯನ್ನು ನಿಗ್ರಹಿಸಿ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ. ಯಾರು ಶರಣಾಗುತ್ತಾರೋ ಅವರ ರಕ್ಷಣೆಗೆ ದೇವರು ಬರಲಿದ್ದಾನೆ ಅಹಂಕಾರವನ್ನು ಬಿಟ್ಟರೆ ಕತ್ತಲೆಯನ್ನು ಓಡಿಸಿ ಬೆಳಕಿನತ್ತ ಸಾಗಲು ಅವಕಾಶವಿದೆ. ಪ್ರಸಕ್ತ ಸಮಾಜದಲ್ಲಿ ಪ್ರೀತಿ ಬಾಂಧವ್ಯದ ಕೊರತೆಯಿದ್ದು, ಹಣದ ಹಿಂದೆ ಓಡುವ ಪ್ರವೃತಿ ಹೆಚ್ಚಾಗಿರುವದು ಆರೋಗ್ಯಕರ ಬೆಳವಣಿಗೆಯಲ್ಲಿ ಎಂದು ಮಾರ್ಮಿಕವಾಗಿ ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿ.ಕೆ. ಲೋಕೇಶ್ ಯಾವ ಊರಲ್ಲಿ ದೇವಾಲಯ ಇರುತ್ತಾದೋ ಅಲ್ಲಿ ಶಾಂತಿ ಸಮೃದ್ಧಿ ನೆಲೆಸಿರುತ್ತದೆ. ದೇವಾಲಯ ಊರಿನ ಮಹತ್ವ ಹಾಗೂ ಅಲ್ಲಿನ ಜನರ ಅರ್ಥಿಕ ಜೀವನ ಮಟ್ಟವನ್ನು ಸಾರುತ್ತದೆ ಭಗವತಿ ದೇವಿಯ ಆರಾಧಕರಾದ ವೆಳಿಚ್ಚಪಾಡ್ ಸಂಘದವರು ಭಕ್ತರನ್ನು ಒಗ್ಗೂಡಿಸುವ ಮೂಲಕ ಭಕ್ತಿಯ ಪರಾಕಷ್ಠೆಯಲ್ಲಿ ತಮ್ಮನು ತೊಡಗಿಸಿಕೊಂಡು ದೈವಿಕ ಸೇವೆ ಮಾಡುವದಲ್ಲದೆ ಸಾಮಾಜಿಕ ಚಟುವಟಿಕೆಯ ಮೂಲಕ ಬಡ ಮಂದಿಗೆ ನೆರವಾಗುತ್ತಿರುವದು ಸ್ತುತ್ಯಾರ್ಹವಾದುದು ಎಂದರು.

ಮಲೆಯಾಳಿ ಸಂಘದವರು ವೆಳಿಚ್ಚಪಾಡ್ ಸಂಘದವರು ವೃದ್ಧಾಶ್ರಮ ವಿಕಲಚೇತನ ಶಾಲೆ ಮಕ್ಕಳಿಗೆ ಹಬ್ಬದಿನಗಳಲ್ಲಿ ಬೋಜನ, ಬಟ್ಟೆಗಳನ್ನು ನೀಡುತ್ತಿರುವದು ಸಮಾಜಮುಖಿ ಕೆಲಸವಾಗಿದೆ ಎಂದು ಹೇಳಿದರು.

ಕೊಡುಙಲ್ಲೂರು ಭಗವತಿ ವೆಳಿಚ್ಚಪಾಡು ಸಂಘದ ರಾಜ್ಯಾಧ್ಯಕ್ಷೆ ಸುಭದ್ರ ವೆಳಿಚ್ಚಪಾಡ್, ಪ್ರಧಾನ ಕಾರ್ಯದರ್ಶಿ ಶಿಬುಸ್ವಾಮಿ ವೆಳಿಚ್ಚಪಾಡ್, ನಂಜರಾಯಪಟ್ಟಣ ಹಿಂದೂ ಮಲೆಯಾಳಿ ಸಂಘದ ಅಧ್ಯಕ್ಷೆ ಪ್ರೇಮಾನಂದ, ಸುಂಟಿಕೊಪ್ಪ ಮಲೆಯಾಳಿ ಸಮಾಜದ ಅಧ್ಯಕ್ಷ ಅಧ್ಯಕ್ಷ ಪಿ.ಸಿ. ಮೋಹನ್, ಕೇರಳ ಕೆಬಿವೈಎಸ್ ಪ್ರಧಾನ ಕಾರ್ಯದರ್ಶಿ ಎಂ.ಕೆ. ಸುಂದರನ್, ಚಂದ್ರಿಕಾ ವೆಳಿಚ್ಚಪಾಡ್, ಶ್ರೀಕುಮಾರ್ ವೆಳಿಚ್ಚಪಾಡ್, ವಾಸುಮೂಪನ್, ತಮಿಳುನಾಡಿನ ಕೃಷ್ಣನ್ ಕುಟ್ಟಿ, ತೋಮಸ್ ಮಾತನಾಡಿದರು.

ಶೋಭಾಯಾತ್ರೆಯನ್ನು ಡಾ. ಉದಯಕುಮಾರ್, ಕೊಡುಙಲ್ಲೂರು ಭಗವತಿ ವೆಳಿಚ್ಚಪಾಡು ಸಂಘದ ರಾಜ್ಯಾಧ್ಯಕ್ಷೆ ಸುಭದ್ರ ವೆಳಿಚ್ಚಪಾಡ್, ಕೆ.ಬಿವಿಎಸ್‍ನ ಜಿಲ್ಲಾಧ್ಯಕ್ಷ ವಿ.ಎಸ್. ಕಿಶನ್ ರಂಗಸಮುದ್ರ ಉದ್ಘಾಟಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕೆ.ಬಿವಿಎಸ್‍ನ ಜಿಲ್ಲಾಧ್ಯಕ್ಷ ವಿ.ಎಸ್.ಕಿಶನ್ ರಂಗಸಮುದ್ರ ವಹಿಸಿ ಮಾತನಾಡಿದರು. ದೀಪಾ ಪ್ರಾಸ್ತಾವಿಕ ನುಡಿಯಾಡಿದರು.