ಗೋಣಿಕೊಪ್ಪ ವರದಿ, ಫೆ. 18 : ಗಂಡ, ಹೆಂಡತಿ ನಡುವೆ ಹೊಡೆದಾಟ ನಡೆದು ಪರಸ್ಪರ ದೂರು ನೀಡಿರುವ ಪ್ರಕರಣ ಗೋಣಿಕೊಪ್ಪದಲ್ಲಿ ನಡೆದಿದೆ.

ಅರ್ವತೋಕ್ಲು ಗ್ರಾಮದ ಕೃಷಿಕಾ (39) ಹಾಗೂ ರಶಿಕಾ (49) ದೂರು ನೀಡಿದವರು. ಪತಿ ರಶಿಕಾ ಅವರು ಪತ್ನಿ ಕೃಷಿಕಾ, ಚೆಂಗಪ್ಪ ಹಾಗೂ ರಾಣಿ ಇವರುಗಳು ತನ್ನ ಮೇಲೆ ಹಲ್ಲೆ ಮಾಡಿರುವದಾಗಿ ದೂರು ನೀಡಿದ್ದಾರೆ. ಪತ್ನಿ ಕೃಷಿಕಾ ಅವರು ಪತಿ ರಶಿಕಾ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ನೀಡಲಾಗಿದೆ.