ಗೋಣಿಕೊಪ್ಪಲು,ಫೆ.18: ದ.ಕೊಡಗಿನಲ್ಲಿ ಹುಲಿ ಹಾವಳಿಯು ಮುಂದುವರೆದಿದ್ದು ಹುಲಿ ದಾಳಿಗೆ ಹಸು ಬಲಿಯಾದ ಘಟನೆ ವೆಸ್ಟ್‍ನೆಮ್ಮಲೆಯಲ್ಲಿ ಸಂಭವಿಸಿದೆ. ಶ್ರೀಮಂಗಲ ಹೋಬಳಿಯ ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯ್ತಿಯ ಗೋಣಿಕೊಪ್ಪಲು,ಫೆ.18: ದ.ಕೊಡಗಿನಲ್ಲಿ ಹುಲಿ ಹಾವಳಿಯು ಮುಂದುವರೆದಿದ್ದು ಹುಲಿ ದಾಳಿಗೆ ಹಸು ಬಲಿಯಾದ ಘಟನೆ ವೆಸ್ಟ್‍ನೆಮ್ಮಲೆಯಲ್ಲಿ ಸಂಭವಿಸಿದೆ. ಶ್ರೀಮಂಗಲ ಹೋಬಳಿಯ ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯ್ತಿಯ ನೀಡಿದ್ದಾರೆ. ಎಂದಿನಂತೆ ಮುಂಜಾನೆ ಹಾಲು ಕರೆಯಲು ಕೊಟ್ಟಿಗೆಗೆ ತೆರಳಿದ ಸಂದರ್ಭ ಹಸು ಕಾಣೆಯಾಗಿರುವ ಬಗ್ಗೆ ಮಾಹಿತಿ ತಿಳಿದು ಹುಡುಕಾಟ ನಡೆಸಿದಾಗ ಸಮೀಪದ ಕಾಫಿ ತೋಟದಲ್ಲಿ ಸತ್ತು ಬಿದ್ದಿರುವ ಹಸು ಕಂಡು ಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಶ್ರೀಮಂಗಲ ವ್ಯಾಪ್ತಿಯ ಅರಣ್ಯ ಇಲಾಖಾ ಅಧಿಕಾರಿಗಳಾದ ಎಸಿಎಫ್ ದಯಾನಂದ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಹಿರಿಯ ಅಧಿಕಾರಿಗಳಾದ ಮಡಿಕೇರಿಯ ಡಿಸಿಎಫ್ ಜಯರವರು ತಕ್ಷಣ ಪರಿಹಾರ ನೀಡುವದಾಗಿ ಭರವಸೆ ನೀಡಿದ್ದಾರೆ. ವೈದ್ಯಾಧಿಕಾರಿ ಗಳಾದ ಡಾ.ಗಿರೀಶ್ ಹಸುವಿನ ಕಳೇಬರದ ಮಹಜರು ನಡೆಸಿದರು.
ದ.ಕೊಡಗಿನ ವಿವಿಧೆಡೆಯಲ್ಲಿ ನಿರಂತರವಾಗಿ ಹುಲಿ ಧಾಳಿ ನಡೆಯುತ್ತಿದ್ದು, ರೈತರ ಹಸುಗಳು ಹುಲಿಯ ಬಾಯಿಗೆ ಆಹಾರ ವಾಗುತ್ತಿದೆ.
(ಮೊದಲ ಪುಟದಿಂದ) ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಆಗಿಂದ್ದಾಗೆ ಎಚ್ಚರಿಕೆ ನೀಡಿದರೂ ಹುಲಿ ನಿಯಂತ್ರಣದ ಬಗ್ಗೆ ಕ್ರಮ ಕೈಗೊಂಡಿಲ್ಲ. ಕೂಡಲೇ ಅರಣ್ಯದಿಂದ ನಾಡಿನತ್ತ ಆಗಮಿಸುತ್ತಿರುವ ಹುಲಿಗಳನ್ನು ಹಿಡಿಯುವ ಮೂಲಕ ರೈತರ ಹಸುಗಳನ್ನು ರಕ್ಷಿಸಿಲು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ ಅರಣ್ಯ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. -ಹೆಚ್.ಕೆ.ಜಗದೀಶ್