ಚೆಟ್ಟಳ್ಳಿ, ಫೆ. 19: ಸೌತ್ ಕೂರ್ಗ್ ಆಫ್ ರೋಡರ್ಸ್ ವತಿಯಿಂದ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಕಳೆದ 5 ದಿನಗಳ ಹಿಂದೆ ಉಗ್ರರ ಅಟ್ಟಹಾಸಕ್ಕೆ ಭಾರತೀಯ ಯೋಧರ ಬಲಿದಾನಕ್ಕೆ ಶಾಂತಿಕೋರಿ ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದಿಂದ ಗೋಣಿಕೊಪ್ಪದ ಕಾವೇರಿ ಕಾಲೇಜಿನ ಆವರಣದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಪ್ರತಿಮೆವರೆಗೆ ಬೈಕ್ ರೈಡ್ ನಡೆಸಲಾಯಿತು. ಉಗ್ರರು ಭಾರತೀಯ ಯೋಧರ ಮೇಲೆ ಮೇಲೆ ಧಾಳಿ ನಡೆಸಿದನ್ನು ಖಂಡಿಸಲಾಯಿತು. ಮೇಣದ ಬತ್ತಿಯನ್ನು ಉರಿಸುವ ಮೂಲಕ ಭಾರತೀಯ ಯೋಧರಿಗೆ ಶಾಂತಿ ಕೋರಲಾಯಿತು. ಈ ಸಂದರ್ಭ ಪೊನ್ನಂಪೇಟೆ ಹಾಗೂ ಗೋಣಿಕೊಪ್ಪ ಪೊಲೀಸರು ಸಹಕಾರ ನೀಡಿದರು.