ಮಡಿಕೇರಿ, ಫೆ. 19: ಪಾಲಿಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಐಎಸ್ ಸಮೀಕ್ಷೆಯ ವಿಶೇಷ ಗ್ರಾಮಸಭೆ ತಾ. 21 ರಂದು ಅಪರಾಹ್ನ 3 ಗಂಟೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಶೈರ್ ಹೋಂ ಸಭಾಂಗಣದಲ್ಲಿ ನಡೆಯಲಿದೆ.
ಪಾಲಿಬೆಟ್ಟ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು ವಿಐಎಸ್ (ವಿಲೇಜ್ ಇನ್ಫರ್ಮೇಶನ್ ಸಿಸ್ಟಂ) ಸಮೀಕ್ಷೆ ಅಂತಿಮಗೊಳಿಸಲಾಗಿದ್ದು ಪಂಚಾಯಿತಿ ಅಧ್ಯಕ್ಷ ಪುಲಿಯಂಡ ಬೋಪಣ್ಣ ಅಧ್ಯಕ್ಷತೆಯಲ್ಲಿ ಈ ಕುರಿತು ಚರ್ಚಿಸಲು ವಿಶೇಷ ಗ್ರಾಮ ಸಭೆ ನಿಗದಿಯಾಗಿದೆ.