ನಾಪೋಕು, ಮಾ. 7: ಮಡಿಕೇರಿ ತಾಲೂಕಿನ ಎಮ್ಮೆಮಾಡು ಗ್ರಾಮದ ತಾಜುಲ್ ಇಸ್ಲಾಂ ಜುಮ್ಮಾ ಮಸೀದಿಯ ಚುನಾವಣೆಯನ್ನು ನಡೆಸಲು ನಿರ್ಧರಿಸಲಾಗಿದೆ. ಉಮೇದುವಾರಿಕೆಯ ಅರ್ಜಿಗಳನ್ನು ತಾ. 8ರಿಂದ ತಾ. 15ರವರೆಗೆ ಸ್ವೀಕರಿಸಲಾಗುವದು. ಉಮೇದುವಾರಿಕೆಯ ನಾಮಪತ್ರಗಳನ್ನು ತಾ. 16ರಂದು ಪರಿಶೀಲಿಸಿ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುವದು. ನಾಮಪತ್ರಗಳನ್ನು ವಾಪಾಸು ಪಡೆಯಲು ತಾ. 17 ಕೊನೆಯ ದಿನಾಂಕವಾಗಿದೆ. ಅರ್ಹ ಅಭ್ಯರ್ಥಿಗಳಿಗೆ ಅಗತ್ಯವಿದ್ದಲ್ಲಿ ಚುನಾವಣಾ ಚಿಹ್ನೆಗಳನ್ನು ನೀಡಲಾಗುವದು. ತಾ. 24ರಂದು ಬೆಳಿಗ್ಗೆ 9 ಗಂಟೆಯಿಂದ 3 ಗಂಟೆಯವರೆಗೆ ನುಸ್ರತುಲ್ ಇಸ್ಲಾಂ ಮದರಸದಲ್ಲಿ ಚುನಾವಣೆಯನ್ನು ನಡೆಸಲಾಗುವದು ಹಾಗೂ 4 ಗಂಟೆಗೆ ಫಲಿತಾಂಶವನ್ನು ಪ್ರಕಟಿಸಲಾಗುವದು ಎಂದು ತಾಜುಲ್ ಇಸ್ಲಾಂ ಜುಮ್ಮಾ ಮಸೀದಿಯ ಪ್ರಕಟಣೆ ತಿಳಿಸಿದೆ.