ಇನ್ನರ್ ವೀಲ್ ಕ್ಲಬ್‍ನಿಂದ ಶಾಲೆಗೆ ಕೊಡುಗೆ
ಕೂಡಿಗೆ: ಕುಶಾಲನಗರ ಇನ್ನರ್ ವೀಲ್ ಕ್ಲಬ್ ವತಿಯಿಂದ ಕೂಡುಮಂಗಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2018-2019ನೇ ಸಾಲಿನ ಹ್ಯಾಪಿ ಸ್ಕೂಲ್ ಕಾರ್ಯಕ್ರಮದ ಅಡಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸಾಮಗ್ರಿಗಳನ್ನು ವಿತರಿಸಲಾಯಿತು.
ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸುನಿತಾ ಮಹೇಶ್ ಶಾಲೆಯ ಮುಖ್ಯ ಶಿಕ್ಷಕಿ ವಿ.ಆರ್. ರುಕ್ಮಿಣಿ ಅವರಿಗೆ ಶುದ್ಧ ಕುಡಿಯುವ ನೀರಿನ ಫಿಲ್ಟರ್‍ಗಳು, ಗ್ರಂಥಾಲಯಕ್ಕೆ ಪುಸ್ತಕ ಮತ್ತು ಚಾರ್ಟ್, ನಲಿಕಲಿ ಮೇಜುಗಳು, ಮಕ್ಕಳಿಗೆ ರತ್ನ ಕಂಬಳಿ, ಕ್ರೀಡಾ ಸಾಮಗ್ರಿಗಳು, ಶಾಲಾ ಬ್ಯಾಗ್‍ಗಳು, ಸ್ವಚ್ಛತಾ ಸಾಮಗ್ರಿಗಳನ್ನು ಉಚಿತವಾಗಿ ನೀಡಿದರು.
ಈ ಸಂದರ್ಭ ಮಾತನಾಡಿದ ಸುನಿತಾ ಮಹೇಶ್, ಇನ್ನರ್ ವೀಲ್ ಕ್ಲಬ್‍ನ ವತಿಯಿಂದ ನೀಡಿರುವ ವಿವಿಧ ಕಲಿಕೋಪಕರಣಗಳು ಮತ್ತು ಸಾಮಗ್ರಿಗಳನ್ನು ಬಳಸಿಕೊಂಡು ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರು. ಪ್ರತಿಯೊಬ್ಬರು ಆರೋಗ್ಯ ಮತ್ತು ಮಕ್ಕಳು ವೈಯಕ್ತಿಕ ಸ್ವಚ್ಛತೆ, ನೈರ್ಮಲ್ಯ ಸಂರಕ್ಷಣೆ ಹಾಗೂ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದರು.
ವಿವಿಧ ಸಾಮಗ್ರಿಗಳನ್ನು ಸ್ವೀಕರಿಸಿದ ಮುಖ್ಯ ಶಿಕ್ಷಕಿ ರುಕ್ಮಿಣಿ ಮಾತನಾಡಿ, ಮಕ್ಕಳು ಇದರ ಸದುಪಯೋಗಪಡೆದುಕೊಳ್ಳಬೇಕು. ಪಾಠದ ಜೊತೆಗೆ ಆಟವು ಇರಬೇಕು ಎಂದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೂಡಿಗೆ ಕ್ಲಸ್ಟರ್ ಮಟ್ಟದ ಸಿಆರ್‍ಪಿ ಮುಬಿನಾ ಕೌಸರ್ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳು ಶೈಕ್ಷಣಿಕ ಅಭಿವೃದ್ಧಿಗೆ ದಾನಿಗಳು ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಪುಟ್ಟಸ್ವಾಮಿ ವಹಿಸಿದ್ದರು. ವೇದಿಕೆಯಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್, ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ಸಂದ್ಯಾ ಪ್ರಮೋದ್, ಸಾಕ್ಷರತಾ ಸಂಯೋಜಕರಾದ ಶಾಲಿನಿ ನರೇಂದ್ರ, ತೇಜಸ್ವಿನಿ ಗೌತಮ್, ಮಾಜಿ ಅಧ್ಯಕ್ಷೆ ಆರತಿ ಶೆಟ್ಟಿ, ಕವಿತಾ ಸಾತಪ್ಪನ್, ನೇಹ ಜಗದೀಶ್, ದಿವ್ಯ ಇತರರು ಇದ್ದರು. ಶಿಕ್ಷಕಿ ಭಾರತಿ ನಿರೂಪಿಸಿ, ದೈಹಿಕ ಶಿಕ್ಷಕ ಗಣೇಶ್ ವಂದಿಸಿದರು.
ನಿವೃತ್ತರಿಗೆ ಸನ್ಮಾನ
ಗೋಣಿಕೊಪ್ಪ ವರದಿ: ಪೊನ್ನಂಪೇಟೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕಿ ಪ್ರತಿಮಾ ಅವರನ್ನು ಕ್ಷೇತ್ರ ಶಿಕ್ಷಣ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲಬಿಳಗಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಬಯವಂಡ ಉತ್ತಪ್ಪ, ಮುಖ್ಯ ಶಿಕ್ಷಕ ಬಿ.ಎಂ. ವಿಜಯ್, ಸಮೂಹ ಸಂಪನ್ಮೂಲ ವ್ಯಕ್ತಿ ತಿರುನೆಲ್ಲಿಮಡ ಜೀವನ್ ಹಾಜರಿದ್ದರು.
ಮತದಾನ ಕುರಿತು ಜಾಗೃತಿ
ಮಡಿಕೇರಿ: ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಚುನಾವಣಾ ಸಾಕ್ಷರತಾ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ, ರೆಡ್ ಕ್ರಾಸ್, ರೆಡ್ ರಿಬ್ಬನ್ ಕ್ಲಬ್, ರಾಜ್ಯಶಾಸ್ತ್ರ ವಿಭಾಗ ಮತ್ತು ಪೊಲೀಸ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮತದಾನ ಜಾಗೃತಿ ಕುರಿತು ಮಡಿಕೇರಿ ನಗರದ ಪ್ರಮುಖ ರಸ್ತೆ ಹಾಗೂ ಬೀದಿಗಳಲ್ಲಿ ಮೆರಮಣಿಗೆ ನಡೆಸಲಾಯಿತು. ಮತದಾನದ ಮಹತ್ವ ಉತ್ತಮ ಪ್ರತಿನಿಧಿಗಳ ಆಯ್ಕೆ, ಪ್ರಜಾಪ್ರಭುತ್ವದ, ಆಶಯಗಳು ಇತ್ಯಾದಿ ವಿಚಾರಗಳ ಕುರಿತ ಫ್ಲೆಕ್ಸ್, ಬ್ಯಾನರ್‍ಗಳೊಂದಿಗೆ ವಿದ್ಯಾರ್ಥಿಗಳು, ಅಧ್ಯಾಪಕರು, ಸಿಬ್ಬಂದಿ ವರ್ಗದವರು ಮೆರವಣಿಗೆ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ವಾರ್ಷಿಕ ಶಿಬಿರ ಸಮಾರೋಪ
ಕುಶಾಲನಗರ: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸೇವಾ ಮನೋಭಾವನೆ ಹೊಂದುವದರೊಂದಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕೊಪ್ಪ ಭಾರತ ಮಾತ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಫಾ. ಪಿ.ಜೆ. ಜೋಸೆಫ್ ಕರೆ ನೀಡಿದ್ದಾರೆ.
ಕುಶಾಲನಗರ ಸಮೀಪ ಕೊಪ್ಪ ರಾಣಿಗೇಟ್ ಸರಕಾರಿ ಗಿರಿಜನರ ವಸತಿ ಶಾಲಾ ಆವರಣದಲ್ಲಿ ನಡೆದ ಭಾರತ ಮಾತ ಪ್ರಥಮ ದರ್ಜೆ ಕಾಲೇಜಿನ 2018-19ರ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ಸಂದರ್ಭ ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಮುಖ್ಯ ಅತಿಥಿಗಳಾಗಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಸಂಚಾಲಕ ಎಂ.ಎನ್. ಚಂದ್ರಮೋಹನ್, ಕೊಪ್ಪ ಗ್ರಾ.ಪಂ. ಸದಸ್ಯೆ ಸಾವಿತ್ರಿ ರಾಮಣ್ಣ, ಭಾರತಮಾತ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಫಾ. ಕೆ. ಜಾಯ್, ಪ್ರಾಂಶುಪಾಲ ಫಾ. ಬಿನು ಉಪಸ್ಥಿತರಿದ್ದರು.
ಶಿಬಿರಾಧಿಕಾರಿ ಹೆಚ್.ಆರ್. ದಿನೇಶ್ 7 ದಿನಗಳ ಕಾಲ ನಡೆದ ಶಿಬಿರದ ದಿನಚರಿಯ ಬಗ್ಗೆ ಮಾತನಾಡಿ, ಶಿಬಿರದ ಯಶಸ್ಸಿಗೆ ಶ್ರಮಿಸಿದ ಸರ್ವರಿಗೂ ಕೃತಜ್ಞತೆ ತಿಳಿಸಿದರು. ಕಾರ್ಯಕ್ರಮದಲ್ಲಿ ಸಹ ಶಿಬಿರಾಧಿಕಾರಿಗಳಾದ ಉಪನ್ಯಾಸಕ ಸಿಬಿ ಫ್ರಾನ್ಸಿಸ್, ಕೆ.ಇ. ರೋಶ್ನಿ, ಶುಭ ಮತ್ತಿತರರು ಇದ್ದರು.ವಾಯ್ಸ್ ಆಫ್ ಕೊಡಗು ಕಾರ್ಯಕ್ರಮ
ಮಡಿಕೇರಿ: ಚಾನಲ್ 24 ಕರ್ನಾಟಕ ವತಿಯಿಂದ ನಡೆದ ವಾಯ್ಸ್ ಆಫ್ ಕೊಡಗು 2019 ಚರ್ಚಾ ಸ್ಪರ್ಧೆಯ ಫೈನಲ್ ಕಾರ್ಯಕ್ರಮ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಪ್ರಥಮ ಬಹುಮಾನವಾಗಿ ರೂ. 10 ಸಾವಿರ ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನವಾಗಿ ರೂ. 5 ಸಾವಿರ ನಗದು ಮತ್ತು ಟ್ರೋಫಿ, ತೃತೀಯ ಬಹುಮಾನವಾಗಿ ರೂ. 3 ಸಾವಿರ ನಗದು ಮತ್ತು ಟ್ರೋಫಿ, 4 ಸ್ಥಾನ ಪಡೆದವರಿಗೆ ಬೆಸ್ಟ್ ಫರ್‍ಫಾಮರ್, 5ನೇ ಸ್ಥಾನ ಪಡೆದವರಿಗೆ ಎನ್‍ಟಿಸಿ ಫ್ಯಾಮಿಲಿ ಟ್ರಿಪ್, 6ನೇ ಸ್ಥಾನ ಪಡೆದವರಿಗೆ ಮೈ ಲೈಫ್ ಸ್ಟೈಲ್ ಕಿಟ್ ಹಾಗೂ ಉಳಿದವರಿಗೆ ಟ್ರೋಫಿಯನ್ನು ನೀಡಲಾಯಿತು.
ತೀರ್ಪುಗಾರರಾಗಿ ವಿಜಯಕರ್ನಾಟಕ ದಿನಪತ್ರಿಕೆಯ ಜಿಲ್ಲಾ ವರದಿಗಾರ ಸುನಿಲ್ ಪೊನ್ನೆಟ್ಟಿ, ಪ್ರಜಾವಾಣಿ ದಿನಪತ್ರಿಕೆ ಜಿಲ್ಲಾ ವರದಿಗಾರ ಆದಿತ್ಯ ಕಾರ್ಯನಿರ್ವಹಿಸಿದ್ದರು. ಪ್ರಥಮ ಬಹುಮಾನವನ್ನು ವೀರಾಜಪೇಟೆ ಕಾವೇರಿ ಕಾಲೇಜಿನ ಕವನ, ದ್ವಿತೀಯ ಬಹುಮಾನವನ್ನು ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಸ್ನೇಹ, ತೃತೀಯ ಬಹುಮಾನವನ್ನು ಮಡಿಕೇರಿ ಪ್ರಥಮ ದರ್ಜೆ ಕಾಲೇಜಿನ ದೀಕ್ಷಿತ್ ಗೌಡ, ಬೆಸ್ಟ್ ಫರ್‍ಫಾಮರ್ ಆಗಿ ಎಫ್‍ಎಂಸಿ ಕಾಲೇಜು ವಿದ್ಯಾರ್ಥಿನಿ ಮಧುಶ್ರೀ, 5ನೇ ಸ್ಥಾನವನ್ನು ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಮಧುರ, 6ನೇ ಸ್ಥಾನವನ್ನು ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಯಶಸ್ವಿನಿ, 7ನೇ ಸ್ಥಾನವನ್ನು ಗೋಣಿಕೊಪ್ಪ ಕಾವೇರಿ ಕಾಲೆಜು ವಿದ್ಯಾರ್ಥಿನಿ ಪೂಜ್ಯ, 8ನೇ ಸ್ಥಾನವನ್ನು ವೀರಾಜಪೇಟೆ ಕಾವೇರಿ ಕಾಲೇಜಿನ ವಿದ್ಯಾರ್ಥಿನಿ ನರ್ತನಾ, 9ನೇ ಸ್ಥಾನವನ್ನು ಎಫ್‍ಎಂಸಿ ಕಾಲೇಜು ವಿದ್ಯಾರ್ಥಿ ಅಮರ್‍ಜಿತ್, 10ನೇ ಸ್ಥಾನವನ್ನು ಎಫ್‍ಎಂಸಿ ಕಾಲೇಜಿನ ವಿದ್ಯಾರ್ಥಿನಿ ಗೌತಮಿ ಪಡೆದುಕೊಂಡರು.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಟಿ.ಡಿ. ತಿಮ್ಮಯ್ಯ ಮಾತನಾಡಿ, ವಿದ್ಯಾರ್ಥಿಗಳು ಸೋತರೂ-ಗೆದ್ದರೂ ಬೇಸರಿಸಿಕೊಳ್ಳದೆ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಎಫ್‍ಎಂಸಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಮೋನಿಕಾ, ಇತಿಹಾಸ ವಿಭಾಗದ ಉಪನ್ಯಾಸಕ ಮೇಜರ್ ರಾಘವ, ಪ್ರಾಯೋಜಕರಾದ ಕಿಫಾಯುತ್ತಲ್ಲಾ ಖಾನ್, ಅನೀಶ್ ಮಾದಪ್ಪ, ಫಹಾದ್ ಹಾಗೂ ಇತರರು ಪಾಲ್ಗೊಂಡಿದ್ದರು.
ಶಿಶು ವಿಹಾರದ ವಾರ್ಷಿಕೋತ್ಸವ
ಸುಂಟಿಕೊಪ್ಪ: ಬಾಲ್ಯದಲ್ಲಿಯೇ ಮಕ್ಕಳಿಗೆ ಶಿಸ್ತು, ಸಂಯಮ, ಗೌರವ, ಸ್ಪರ್ಧೆ ಇವುಗಳನ್ನು ಕಲಿಸಿದಾಗ ಮಾತ್ರ ಮುಂದಿನ ಹಂತದ ಶಿಕ್ಷಣ ವ್ಯವಸ್ಥೆಯಲ್ಲಿ ಯಾವದೇ ತೊಂದರೆಗಳಾಗದೆ ಉತ್ತಮ ಸಮಾಜಮುಖಿ ವ್ಯಕ್ತಿಯಾಗುವದಕ್ಕೆ ಸಾದ್ಯವಾಗುತ್ತದೆ ಎಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಾಲಕೃಷ್ಣ ಅಭಿಪ್ರಾಯಪಟ್ಟರು.
ಇಲ್ಲಿನ ಮಂಜುನಾಥಯ್ಯ ಸಹಕಾರ ಭವನದಲ್ಲಿ ನಡೆದ ಜ್ಞಾನಧಾರ ಶಿಶು ವಿಹಾರದ 2ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಬೆಳೆಯುವ ಹಂತದಲ್ಲೇ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಪೋಷಕರು ಮತ್ತು ಪ್ರಾಥಮಿಕ ಹಂತದ ಶಿಕ್ಷಕರು ನೀಡಬೇಕು. ಇಲ್ಲದಿದ್ದಲ್ಲಿ ಬೆಳೆದು ದೊಡ್ಡವರಾದಾಗ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರ ಬಹುದು. ಅದಕ್ಕೆ ಅವಕಾಶ ಮಾಡಬೇಡಿ. ಹಾಗೆಯೇ ಆಂಗ್ಲ ಬಾಷೆಯೊಂದಿಗೆ ಕನ್ನಡ ಭಾಷೆಗೂ ಹೆಚ್ಚಿನ ಒತ್ತು ನೀಡಬೇಕು ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ವ್ಯವಸಾಯ ಸೇವಾ ಸಹಕಾರ ಸಂಘದ ಬ್ಯಾಂಕಿನ ಅಧ್ಯಕ್ಷ ಎನ್.ಸಿ. ಪೊನ್ನಪ್ಪ ಮಾತನಾಡಿ, ಮಕ್ಕಳ ಮನಸ್ಸು ಹಾಲಿನಂತೆ ಶುಭ್ರವಾಗಿದ್ದು, ಪೋಷಕರು ಆ ಮನಸ್ಸನ್ನು ಈಗಿನಿಂದಲೇ ತಿಳಿಗೊಳಿಸಿದರೆ ಮಕ್ಕಳಲ್ಲಿ ಯಾವದೇ ಕೆಟ್ಟ ಭಾವನೆಗಳು ಮೂಡುವದಿಲ್ಲ. ಮನೆಯ ಪರಿಸರದ ನಡುವೆ ಪೋಷಕರು ನಡೆದುಕೊಳ್ಳುವ ರೀತಿಯ ಮೇಲೆ ಮಗುವಿನ ಭವಿಷ್ಯ ನಿರ್ಮಾಣವಾಗಿರುತ್ತದೆ. ಹಿಂದಿನ ಕಾಲದಲ್ಲಿ ಬಡತನದಿಂದ ನಮ್ಮ ಹಿರಿಯರಿಗೆ ವಿದ್ಯೆಯ ಕೊರತೆ ಇತ್ತು, ಇಂದಿನ ಕಾಲಘಟ್ಟದಲ್ಲಿ ವಿದ್ಯೆಗೆ ಬೇಕಾದಷ್ಟು ಸವಲತ್ತುಗಳಿವೆ. ಅದನ್ನು ಪೋಷಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಟ್ರಸ್ಟ್ ಉಪಾಧ್ಯಕ್ಷೆ ಗಿರಿಜಾ ಉದಯಕುಮಾರ್ ಮಾತನಾಡಿದರು, ವೇದಿಕೆಯಲ್ಲಿ ಬೆಳೆಗಾರರಾದ ಚೋಟ್ಟೆರ ಶಾರದಾ ಮೇದಪ್ಪ, ಕೊಡಗರಹಳ್ಳಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಸಾವಿತ್ರಿ ಕಾವೇರಪ್ಪ, ಮುಖ್ಯ ಶಿಕ್ಷಕಿ ಶಾಂತಿ ದೇವರಾಜ್, ಶಿಕ್ಷಕಿ ಪೂಜಾ ಅಶೋಕ್ ಶೇಟ್, ಸುಜಿತ, ಪೋಷಕರು ಇದ್ದರು. ಪುಟಾಣಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳಿಗೆ ಕಾರ್ಯಾಗಾರ
ವೀರಾಜಪೇಟೆ: ಅರಮೇರಿ ಕಳಂಚೇರಿ ಮಠದ ‘ದಿಶಾ ಎಕ್ಷ್ ಪೆರಿಯನ್ಸಲ್ ಲರ್ನಿಂಗ್’ ಸಂಸ್ಥೆಯ ವತಿಯಿಂದ ಎಸ್.ಎಂ.ಎಸ್. ಶಾಲಾ ಆವರಣದಲ್ಲಿ ಜಿಲ್ಲೆಯ ವಿವಿಧ ಪ್ರೌಢಶಾಲೆಗಳ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಹತ್ತನೆಯ ತರಗತಿಯ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಯನ್ನು ಎದುರಿಸಲು ಉತ್ತೇಜನ ಹಾಗೂ ಮಾರ್ಗದರ್ಶನ ನೀಡಲಾಯಿತು.
ಸದಸ್ಯರಾದ ಎನ್.ಜಿ. ಪ್ರೀತಮ್ ಪೊನ್ನಪ್ಪ, ಕೆ.ಪಿ. ಕುಸುಮ ಅವರುಗಳು ರೂಪಿಸಿದ ಈ ಕಾರ್ಯಾಗಾರದಲ್ಲಿ ಮೂರ್ನಾಡಿನ ಮಾರುತಿ ಎಜುಕೇಷನ್ ಸೊಸೈಟಿ, ಜ್ಞಾನ ಜ್ಯೋತಿ ಎಜುಕೇಷನ್ ಸೊಸೈಟಿ, ವೀರಾಜಪೇಟೆಯ ರೋಟರಿ ಶಾಲೆ, ತ್ರಿವೇಣಿ ಶಾಲೆ, ಕೂರ್ಗ್ ವ್ಯಾಲಿ ಶಾಲೆ, ಮಡಿಕೇರಿಯ ಎ.ಎಲ್.ಜಿ. ಕ್ರೆಸೆಂಟ್ ಶಾಲೆ ಹಾಗೂ ಅರಮೇರಿಯ ಎಸ್‍ಎಂಎಸ್ ಅಕಾಡೆಮಿ ಆಫ್ ಸೆಂಟ್ರಲ್ ಎಜುಕೇಷನ್ ಇದರ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡರು.
ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ
ಮಡಿಕೇರಿ: ಸಂಪಾಜೆ ಪದವಿಪೂರ್ವ ಕಾಲೆÉೀಜಿನ ಪ್ರೌಢಶಾಲಾ ವಿಭಾಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಯಶವಂತಕುಮಾರ್ ಅವರನ್ನು ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸನ್ಮಾನಿಸಿ, ಗೌರವಿಸಿತು.
ಸನ್ಮಾನ ಸ್ವೀಕರಿಸಿದ ಯಶವಂತ ಕುಮಾರ್ ಅವರು, ಸಂಸ್ಥೆಯ ಅಭಿವೃದ್ಧಿಗೆ ರೂ. 18,250 ದೇಣಿಗೆಯಾಗಿ ನೀಡಿದ್ದಲ್ಲದೆ, 2019-20ನೇ ಸಾಲಿನಲ್ಲಿ 8ನೇ ತರಗತಿಗೆ ಈ ಸಂಸ್ಥೆಗೆ ದಾಖಲಾಗುವ ಎಲ್ಲಾ ವಿದ್ಯಾರ್ಥಿಗಳ ಪ್ರವೇಶ ಶುಲ್ಕವನ್ನು ತಾವೇ ಭರಿಸುವದಾಗಿ ಘೋಷಿಸುವ ಮೂಲಕ ಮಕ್ಕಳೆಡೆಗಿನ ತಮ್ಮ ಪ್ರೀತಿ ವಿಶ್ವಾಸಗಳನ್ನು ತೋರಿದ್ದು ವಿಶೇಷವಾಗಿತ್ತು.
ವಿದ್ಯಾಸಂಸ್ಥೆಯ ಸಂಚಾಲಕ ಎಂ. ಶಂಕರನಾರಾಯಣ ಭಟ್ ಮಾತನಾಡಿ, ಇವರ ಸುದೀರ್ಘ ಸೇವೆ ಅವಿಸ್ಮರಣೀಯ ಎಂದರು. ಅಧ್ಯಕ್ಷತೆಯನ್ನು ಸಂಸ್ಥೆಯ ಉಪಾಧ್ಯಕ್ಷ ಯು.ಕೆ. ಜಯರಾಮ ವಹಿಸಿದ್ದರು. ವೇದಿಕೆಯಲ್ಲಿ ನಿರ್ದೇಶಕರುಗಳಾದ ಕೆ.ಎಸ್. ನಾರಾಯಣ ಭಟ್, ಕೆ.ಜಿ. ಮುರಳೀಧರ್, ಒ.ಆರ್, ಮಾಯಿಲಪ್ಪ ಹಾಗೂ ಎಸ್.ಕೆ. ಮಹಮ್ಮದ್ ಹನೀಫ್, ಯಶವಂತಕುಮಾರ್ ಅವರ ಪತ್ನಿ ಸರಸ್ವತಿ ಹಾಗೂ ಕಿರಿಯ ಪುತ್ರ ಯಜ್ಞೇಶ್ ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲೆ ವೈ.ಕೆ. ಮಾಲತಿ ಸ್ವಾಗತಿಸಿ, ಪ್ರೌಢಶಾಲಾ ಮುಖ್ಯ ಶಿಕ್ಷಕ ಎ. ಐತಪ್ಪರವರು ಯಶವಂತ ಕುಮಾರ್‍ರವರ ವೃತ್ತಿ ಜೀವನದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹ ಶಿಕ್ಷಕ ಹೆಚ್. ರಮಾನಂದ ಕಾರ್ಯಕ್ರಮ ನಿರೂಪಿಸಿ, ಪ್ರೌಢಶಾಲಾ ಸಹ ಶಿಕ್ಷಕ ಹೆಚ್.ಜಿ. ಕುಮಾರ್ ವಂದಿಸಿದರು.ಯೂರೋ ಕಿಡ್ಸ್ ಶಾಲೆ ವಾರ್ಷಿಕೋತ್ಸವ
ವೀರಾಜಪೇಟೆ: ಇಂದಿನ ಸಮಾಜದಲ್ಲಿ ಮುಗ್ಧ ಮಕ್ಕಳ ಮನಸ್ಸು ವಿಶ್ವದ ಅದ್ಭುತವನ್ನು ಕನಸಿನಲ್ಲಿ ಕಾಣುವಂತಾಗಿದೆ. ಇದರಿಂದಾಗಿ ಮಕ್ಕಳಿಗೆ ಪ್ರಾರಂಭದಿಂದಲೇ ಗುಣಮಟ್ಟದ ಶಿಕ್ಷಣ ನೀಡುವದರಿಂದ ಮಕ್ಕಳ ಮನಸ್ಸು ಪರಿವರ್ತನೆಗೊಂಡು ಸಾಧನೆಯ ಹಾದಿಗೆ ತಳಹದಿ ಹಾಕಲಿದ್ದಾರೆ. ಮಕ್ಕಳು ಶಿಕ್ಷಣದಲ್ಲಿ ಉನ್ನತಿ ಹೊಂದಲು ಶಾಲೆಯ ಶಿಕ್ಷಕರೊಂದಿಗೆ ಪೋಷಕರು ಮುಕ್ತವಾಗಿ ಸಹಕರಿಸುವಂತಾಗಬೇಕು ಎಂದು ಇಲ್ಲಿನ ಅರಮೇರಿ ಕಳಂಚೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು.
ವೀರಾಜಪೇಟೆಯ ಸೆರಿನಿಟಿ ಹಾಲ್‍ನಲ್ಲಿ ಆಯೋಜಿಸಲಾಗಿದ್ದ ಯೂರೋ ಕಿಡ್ಸ್ ಶಾಲೆಯ ವಾರ್ಷಿಕೋತ್ಸವ ಹಾಗೂ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸ್ವಾಮೀಜಿ ಅವರು ಶಿಕ್ಷಣದಲ್ಲಿ ಮಕ್ಕಳ ಭಾವನೆಗಳನ್ನು ಅರಿತು ಮಾನಸಿಕ, ದೈಹಿಕ ಬೆಳವಣಿಗೆಯೊಂದಿಗೆ ಮಕ್ಕಳು ದೇಶದ ಮುಂದಿನ ಸತ್ಪ್ರಜೆಯಾಗುವ ಉತ್ತಮ ರೀತಿಯ ಶಿಕ್ಷಣ ಮಕ್ಕಳಿಗೆ ಬಾಲ್ಯದಿಂದಲೇ ದೊರೆಯಬೇಕು. ಮಕ್ಕಳು ಶಿಕ್ಷಣದೊಂದಿಗೆ ಪಠ್ಯೇತರ ಚುಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದರು.
ಶಾಲಾ ಸಮಿತಿ ಅಧ್ಯಕ್ಷ ಕಲಿಯಂಡ ಪ್ರದೀಪ್, ಟ್ರಸ್ಟಿ ಬೊಟ್ಟೋಳಂಡ ಪಳಂಗಪ್ಪ, ಗುಮ್ಮಟಿರ ಚಂಗಪ್ಪ ಮಕ್ಕಳಿಗೆ ಪದವಿ ಪ್ರದಾನ ಮಾಡಿದರು. ಶಾಲೆಯ ಪ್ರಾಂಶುಪಾಲೆ ಬೊಟ್ಟೋಳಂಡ ಪ್ರತಿಮಾ ರಂಜನ್ ವರದಿ ವಾಚನ ಮಾಡಿದರು. ಸಮಾರಂಭದಲ್ಲಿ ದಾನಿಗಳಾದ ನಿವೃತ್ತ ಶಿಕ್ಷಕಿ ಗೌರಮ್ಮ ಹಾಗೂ ಬ್ಯಾಂಕ್‍ನ ನಿವೃತ್ತ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕಲಿಯಂಡ ಅಯ್ಯಪ್ಪ, ಕಲಿಯಂಡ ಪ್ರದೀಪ್, ಪ್ರತಿಮಾ ರಂಜನ್ ಉಪಸ್ಥಿತರಿದ್ದರು. ಸಭೆಗೆ ಮೊದಲು ಕಾಶ್ಮೀರದ ಪುಲ್ವಾಮದಲ್ಲಿ ಹುತಾತ್ಮರಾದ ಯೋಧರಿಗೆ ಸಂತಾಪ ಸೂಚಿಸಲಾಯಿತು. ಶಿಕ್ಷಕಿ ಶುಭ ಸ್ವಾಗತಿಸಿದರು. ಪುನೀತ್ ವಂದಿಸಿದರು. ಸಮಾರಂಭದ ನಂತರ ಶಾಲಾ ಪುಟಾಣಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ನಾಟಕ ಪ್ರದರ್ಶನ
ಸುಂಟಿಕೊಪ್ಪ: ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಡಿಕೇರಿ ಸಹಯೋಗದಲ್ಲಿ ಗಿರಿಜನ ಉಪ ಯೋಜನೆಯಡಿ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಂದ ‘ಸ್ವಚ್ಛ ಪರಿಸರ’ ಎಂಬ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು.
ಸ್ವಚ್ಛ ಭಾರತ ಅಭಿಯಾನದ ಕಾರ್ಯಕ್ರಮದಡಿ ಶಾಲೆಯ ಪರಿಸರ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ನಾಟಕ ಪ್ರದರ್ಶನದಲ್ಲಿ ಶಾಲಾ ಮಕ್ಕಳು ಪರಿಸರ ಸಂರಕ್ಷಣೆ ಬಗ್ಗೆ ಬೆಳಕು ಚೆಲ್ಲಿದರು. ಶಾಲಾ ಪರಿಸರ ಸೇರಿದಂತೆ ಗ್ರಾಮ, ಪಟ್ಟಣ ಮತ್ತು ನಗರಗಳಲ್ಲಿ ಹೇಗೆ ಸ್ವಚ್ಛತೆ ಕಾಪಾಡಬೇಕು. ಸ್ವಚ್ಛತೆ ಆರೋಗ್ಯ ಮತ್ತು ನೈರ್ಮಲ್ಯ ನೀರಿನ ಸಂರಕ್ಷಣೆ ಗಿಡ-ಮರಗಳ ಸಂರಕ್ಷಣೆ ಕುರಿತು ನಾಟಕದ ಮೂಲಕ ಮಕ್ಕಳು ಮಾಹಿತಿ ನೀಡಿದರು.
ಈ ಸಂದರ್ಭ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ವಿವಿಧ ಪರಿಸರ ಸಂರಕ್ಷಣೆ ಕುರಿತು ಘೋಷಣಾ ಫಲಕ ಹಿಡಿದು ಜಾಗೃತಿ ಮೂಡಿಸಿದರು.
ಇನ್ಫೋಸಿಸ್‍ಗೆ ಆಯ್ಕೆಯಾದ ವಿದ್ಯಾರ್ಥಿಗಳು
ವೀರಾಜಪೇಟೆ: ಪಟ್ಟಣದ ಸಂತ ಅನ್ನಮ್ಮ ಪದವಿ ಕಾಲೇಜಿನ ವಿದ್ಯಾರ್ಥಿಗಳು ವೀರಾಜಪೇಟೆ ಕಾವೇರಿ ಕಾಲೇಜಿನಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಇನ್ಫೋಸಿಸ್ ಕಂಪೆನಿಗೆ ಆಯ್ಕೆಯಾಗಿದ್ದಾರೆ. ಇನ್ಫೋಸಿಸ್ ಕಂಪೆನಿ ಮತ್ತು ಕಾವೇರಿ ಕಾಲೇಜಿನ ಐಕ್ಯೂಎಸಿ ಘಟಕದ ಸಹಯೋಗದೊಂದಿಗೆ ಈ ಕ್ಯಾಂಪಸ್ ಆಯ್ಕೆಯು ನಡೆಯಿತು. ಇನ್ಫೋಸಿಸ್ ಕಂಪೆನಿಯ ವಿವಿಧ ಹುದ್ದೆಗಳಿಗೆ ನಡೆದ ಸಂದರ್ಶನ ಮತ್ತು ಲಿಖಿತ ಪರೀಕ್ಷೆಯಲ್ಲಿ ಸಂತ ಅನ್ನಮ್ಮ ಪದವಿ ಕಾಲೇಜಿನ ವಿದ್ಯಾರ್ಥಿಗಳು ಉತ್ತಮವಾದ ಪ್ರದರ್ಶನ ನೀಡುವದರೊಂದಿಗೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕ ಪತ್ರವನ್ನು ನೀಡಲಾಯಿತು. ಕಾಲೇಜಿನ ಅಂತಿಮ ಪದವಿಯ 10 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಐಸಾಕ್ ರತ್ನಾಕರ್ ತಿಳಿಸಿದ್ದಾರೆ.ಕೊಡವ ಸಾಂಸ್ಕೃತಿಕ ಅಧ್ಯಯನ ಪ್ರಚಾರ ಉಪನ್ಯಾಸ
ವೀರಾಜಪೇಟೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠದ ವತಿಯಿಂದ ನಡೆದ ಪ್ರಚಾರ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಸಾಹಿತಿ ಪುದಿಯನೆರವನ ರೇವತಿ ರಮೇಶ್ ಮಾತನಾಡಿ, ಕೊಡಗಿನ ಐನ್‍ಮನೆಗಳು ಬಹಳ ಮುಖ್ಯವಾಗಿದ್ದು. ಬ್ರಿಟಿಷರ ದಾಳಿಯಿಂದ ಒಂದೇ ಕಡೆ ವಾಸಿಸಲು ಪ್ರಾರಂಬಿಸಿದ ಜನರು ಐನ್‍ಮನೆಯನ್ನ ಸೇರಿಕೊಂಡರು. ಅವಿಭಕ್ತ ಕುಟುಂಬದ ರೀತಿಯಲ್ಲಿ ಐನ್‍ಮನೆ ಇದ್ದು ಅನೇಕ ಕೊಡವ ಮನೆತನಗಳು ಈ ಐನ್‍ಮನೆಯನ್ನು ಹೊಂದಿವೆ. ಮುಕ್ಕಾಟಿರ ಮನೆಯಲ್ಲಿ ಸುಮಾರು 24 ಕೊಠಡಿಗಳಿರುವ ಅತ್ಯಂತ ದೊಡ್ಡ ಐನ್‍ಮನೆಯನ್ನು ಗುರುತಿಸಬಹುದು. ಕೊಡಗಿನಲ್ಲಿ ಸುಮಾರು 1750 ಐನ್‍ಮನೆಗಳಿದ್ದು ಅದರಲ್ಲಿ 1040 ಐನ್‍ಮನೆಗಳು ಕೊಡವ ಕುಟುಂಬಕ್ಕೆ ಸೇರಿದವವಾಗಿವೆ. ಹೀಗೆ ಅನೇಕ ರೀತಿಯಲ್ಲಿ ಐನ್‍ಮನೆಗಳನ್ನು ರಕ್ಷಿಸಿಕೊಂಡು ಒಂದು ಕೌಟುಂಬಿಕ ಜೀವನವನ್ನು ನಡೆಸುವ ಪದ್ಧತಿಯನ್ನು ಕೊಡಗಿನಲ್ಲಿ ರೂಪಿಸಿಕೊಳ್ಳಲಾಗಿದೆ. ಕೊಡಗಿನ ಐನ್‍ಮನೆಯ ಪ್ರತಿಯೊಂದು ಹಂತದಲ್ಲೂ ಒಂದು ರೀತಿಯಲ್ಲಿ ಜವಾಬ್ದಾರಿಯುತವಾದ ಸ್ಥಾನಮಾನವನ್ನು ಹೊಂದಿದ್ದು, ಐಮರ ಎಂಬಲ್ಲಿ ಮನೆಯ ಹಿರಿಯ ಕೂತು ನ್ಯಾಯ ತೀರ್ಮಾನವನ್ನು ಮಾಡುವ ಪದ್ಧತಿ ಇತ್ತು. ಹಾಗಾಗಿ ಇಂತಹ ಪದ್ಧತಿಯಿಂದಾಗಿ ಕೊಡಗಿನ ಐನ್‍ಮನೆಗಳು ನ್ಯಾಯ ತೀರ್ಮಾನವನ್ನು ಮಾಡುವ, ಯಾವದೇ ರೀತಿಯ ಗೊಂದಲಗಳಿಗೆ ಅವಕಾಶವಾಗದೆ. ಕುಟುಂಬದ ಪ್ರತಿಯೊಬ್ಬ ಸದಸ್ಯರು ಐನ್‍ಮನೆಯಲ್ಲಿಯೇ ಇದ್ದುಕೊಂಡು ತಮ್ಮ ಜವಾಬ್ದಾರಿಯನ್ನ ನಿರ್ವಹಿಸುತ್ತಿದ್ದರು. ಕನ್ನಿಕಂಬ, ಕೈಮಡ ಹೀಗೆ ಅನೇಕ ಹೆಸರುಗಳಿರುವಂತಹ ಐನ್‍ಮನೆಯ ಕೊಠಡಿಗಳು ಹಿರಿಯರನ್ನು ನೆನೆಸಿಕೊಳ್ಳುವ ಪದ್ಧತಿ, ಆಚಾರ-ವಿಚಾರಗಳನ್ನು ತಿಳಿಸುವ ರೀತಿಯಲ್ಲಿ ಇದೆ ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ಮಾತನಾಡಿ, ಪ್ರತಿಯೊಬ್ಬರೂ ಕೂಡ ಕೌಟುಂಬಿಕವಾದಂತಹ ಜೀವನವನ್ನು ನಡೆಸುವಲ್ಲಿ ಕುಟುಂಬ ಜೀವನ ಅತ್ಯಂತ ಅವಶ್ಯಕ. ಅವಿಭಕ್ತ ಕುಟುಂಬಗಳು ಅತ್ಯಂತ ಮಹತ್ವದಾಗಿದ್ದು. ಅವಿಭಕ್ತ ಕುಟುಂಬಗಳಿಗೆ ಉತ್ತಮ ಉದಾಹರಣೆ ಐನ್‍ಮನೆಯಾಗಿವೆ. ಹಾಗಾಗಿ ಅವಿಭಕ್ತ ಕುಟುಂಬವನ್ನು ಅನುಸರಿಸುವಂತಾಗಬೇಕು ಎಂದು ಯುವ ಜನರಲ್ಲಿ ಕೋರಿದರು. ಇದೇ ಸಂದರ್ಭ ಕಾರ್ಯಕ್ರಮದಲ್ಲಿ ಡಾ. ಅವಿನಾಶ್ ಅಸಿಸ್ಟೆಂಟ್ ಪ್ರೊಫೆಸರ್ �?