ಸುಂಟಿಕೊಪ್ಪ, ಮಾ.8: ಸುಸಜ್ಜಿತವಾದ ಪಂಚಾಯಿತಿ ಕಟ್ಟಡ, ವಾಣಿಜ್ಯ ಸಂಕೀರ್ಣ ಒಳಗೊಂಡ ವಾಹನ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ವಿಶಾಲವಾದ ನೂತನ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಿಸಲಾಗುವದು ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದರು.
ಸುಂಟಿಕೊಪ್ಪ ಮಾರುಕಟ್ಟೆ ಆವರಣದಲ್ಲಿ ಗ್ರಾ.ಪಂ.ಗೆ ರಾಜೀವ್ ಗಾಂಧಿ ಸೇವಾ ಕೆಂದ್ರದ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದ ಅವರು ಜನರಿಗೆ ಅನುಕೂಲ ಕಲ್ಪಿಸಲು ಪರಿಸರ ಕಾಳಜಿಯಿಂದ ಪ್ರವಾಸಿಗರ ಹಿತದೃಷ್ಟಿಯಿಂದ ಕೊಡಗಿಗೆ ಎಲ್ಲರೂ ಕೈಜೋಡಿಸಬೇಕು. ಈಗಾಗಲೇ ಪ್ಲಾಸ್ಟಿಕ್ ಎಲ್ಲಾ ಗ್ರಾಮದಲ್ಲೂ ನಿಷೇಧಿಸಲಾಗಿದ್ದು, ಪಂಚಾಯಿತಿ ಕಟ್ಟಡದ ಬಳಿ ಕಸದ ಬುಟ್ಟಿ ಇಡಬೇಕೆಂದು ಸೂಚಿಸಿದ ಅವರು, ಕಸ ವಿಲೇವಾರಿಗೆ 2 ಎಕ್ರೆ ಜಾಗ ಮೀಸಲಿರಿಸಲಾಗಿದೆ ಎಂದರು. ಇಲ್ಲಿನ ಮಾರುಕಟ್ಟೆಯನ್ನು ಸ್ಥಳಾಂತರಿಸಲಿದ್ದು, ಇಲ್ಲಿ ಪಂಚಾಯಿತಿ ಕಚೇರಿ, ವಾಣಿಜ್ಯ ಮಳಿಗೆ, ಪಾರ್ಕಿಂಗ್ ವ್ಯವಸ್ಥೆ ಶೌಚಾಲಯ ನಿರ್ಮಿಸಲಾಗುವದು ರಾಜಕೀಯ ಮುಖ್ಯ ಅಲ್ಲ ಅಭಿವೃದ್ಧಿ ಮುಖ್ಯ ಎಂದು ಹೇಳಿದರು.
ಈ ಸಂದರ್ಭ ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್, ತಾ.ಪಂ.ಸದಸ್ಯೆ ಓಡಿಯಪ್ಪನ ವಿಮಾಲಾವತಿ, ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಗ್ರಾ.ಪಂ.ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಸದಸ್ಯರುಗಳಾದ ಸಿ.ಚಂದ್ರ, ಬಿ.ಎಂ.ಸುರೇಶ್, ರಜಾಕ್, ಜಿ.ಜಿ.ಹೇಮಂತ್, ಕೆ.ಇ.ಕರೀಂ, ಎಂ.ಶಾಹೀದ್, ನಾಗರತ್ನ ಸುರೇಶ್, ರಹೆನಾ ಫೈರೋಜ್, ಗಿರಿಜಾ ಉದಯಕುಮಾರ್,ಜ್ಯೋತಿ ಭಾಸ್ಕರ್, ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಮ್, ಕಾರ್ಯದರ್ಶಿ ಶ್ರೀಧರ್, ಬಿಜೆಪಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಹಾಗೂ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಠಾಣಾ ಧಿಕಾರಿ ಜಯರಾಮ್ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಒದಗಿಸಿದರು.