ನಾಪೆÉÇೀಕ್ಲು, ಮಾ. 7: ಫೆ. 14 ರಂದು ಆತ್ಮಾಹುತಿ ಧಾಳಿಯಲ್ಲಿ ಹತರಾದ ಭಾರತೀಯ ಸೈನಿಕರ ಹತ್ಯೆ ಖಂಡನೀಯ ಎಂದು ನಾಪೆÇೀಕ್ಲು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪಾಡೆಯಂಡ ಶಂಭು ಹೇಳಿದರು.

ನಾಪೆÇೀಕ್ಲು ಮಹಿಳಾ ಸಮಾಜದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಒಳಗೆ ಇದ್ದು ದೇಶದ್ರೋಹ ಮಾಡುವವರನ್ನು ಗಡೀಪಾರು ಮಾಡಬೇಕು. ಯಾವದೇ ವ್ಯಕ್ತಿಯಾಗಲೀ, ಅಧಿಕಾರಿಯಾಗಲೀ, ರಾಜಕಾರಣಿಗಳಾಗಲೀ ದೇಶದ್ರೋಹದ ಬಗ್ಗೆ ಮಾತನಾಡಿದರೆ ಅವರಿಗೆ ಜೀವವಾದಿ ಶಿಕ್ಷೆಯನ್ನು ವಿಧಿಸಬೇಕೆಂದು ಹೇಳಿದರು. ದೇಶದ ಐಕ್ಯತೆ ಮತ್ತು ರಕ್ಷಣೆಯ ವಿಚಾರ ಬಂದಾಗ ಅದನ್ನು ಕಾಪಾಡಲು ಮಾಜಿ ಸೈನಿಕರಾದ ನಾವು ಸದಾ ಸಿದ್ಧರಿದ್ದೇವೆ ಎಂದು ಹೇಳಿದರು

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕೊಂಡೀರ ಗಣೇಶ್ ನಾಣಯ್ಯ, ಕಾರ್ಯದರ್ಶಿ ಕೇಟೋಳಿರ ಪಿ. ಅಪ್ಪಚ್ಚ, ಖಜಾಂಚಿ ಅಬ್ದುಲ್ ಕರೀಂ, ನಿರ್ದೇಶಕ ಪಾಡಿಯಮ್ಮಂಡ ಅಪ್ಪಣಮ್ಮಯ್ಯ ಇದ್ದರು.