ಮಡಿಕೇರಿ, ಮಾ. 7: ಪ್ರಸಕ್ತ (2018-19) ಸಾಲಿಗೆ ರೈತರಿಂದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್‍ಗೆ ರೂ. 1750 ರ ದರದಲ್ಲಿ ಸಾಮಾನ್ಯ ಭತ್ತವನ್ನು ಮತ್ತು 1770 ರ ದರದಲ್ಲಿ ‘ಎ’ ಗ್ರೇಡ್ ಭತ್ತವನ್ನು ಖರೀದಿಸಲು ಆದೇಶ ನೀಡಿದೆ. ರೈತರ ಹಿತದೃಷ್ಟಿಯಿಂದ ರೈತರ ನೋಂದಣಿ ಅವಧಿಯನ್ನು ತಾ. 8 ರವರೆಗೆ ವಿಸ್ತರಿಸಿದೆ. ರೈತರು ನಿಗದಿತ ಅವಧಿಯೊಳಗೆ ನೋಂದಣಿ ಮಾಡಿಕೊಳ್ಳಲು ಕೋರಿದೆ. ನಿಗದಿತ ಅವಧಿ ಮುಗಿದ ನಂತರ ನೋಂದಣಿ ಮಾಡಿಕೊಳ್ಳಲು/ ಭತ್ತ ಖರೀದಿಸಲು ಅವಕಾಶ ಇರುವದಿಲ್ಲ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.