ಮಡಿಕೇರಿ, ಮಾ. 28: ಮೂರ್ನಾಡು ಸಮೀಪದ ಕಿಗ್ಗಾಲು ಗ್ರಾಮದ ಶ್ರೀ ಚಾಮುಂಡೇಶ್ವರಿ ತೆರೆ ಮಹೋತ್ಸವ ಏಪ್ರಿಲ್ 1 ರಿಂದ 3 ರವರೆಗೆ ನಡೆಯಲಿದೆ.

ಏ. 1 ರಂದು ಕೊಟ್ಟಿ ಹಾಡುವದು (ದೇವರ ಹಾಡುವದು), ಏ. 2 ರಂದು ಮಧ್ಯಾಹ್ನ 3 ಗಂಟೆಗೆ ದೇವತಕ್ಕರ ಮನೆಯಿಂದ ಭಂಡಾರ ತೆಗೆದುಕೊಂಡು ಅಂಬಲಕ್ಕೆ ತಂದು ದೇವರ ದರ್ಶನ ಹಾಗೂ ಭಂಡಾರ ತೆಗೆದುಕೊಂಡು ಎತ್ತು ಪೋರಾಟವಾಗಿ ಬನಕ್ಕೆ ಹೋಗಿ ಅಲ್ಲಿ ಚಾಮುಂಡಿ ತೋತ, ಕುಟ್ಟಿಚಾತ ತೆರೆ, ತೆಂಗಿನಕಾಯಿಗೆ ಗುಂಡು ಹೊಡೆಯುವದು, ಇತರ ದೈವತಾ ಕಾರ್ಯಕ್ರಮ ಮತ್ತು ಅನ್ನಸಂತರ್ಪಣೆ. ಅಂದೇ ಸಾಯಂಕಾಲ ಭಂಡಾರವನ್ನು ಅಂಬಲಕ್ಕೆ ತರಲಾಗುವದು. ತದನಂತರ 9 ಗಂಟೆಗೆ ವಿಷ್ಣುಮೂರ್ತಿಯ ಮೇಲೇರಿಗೆ ಬೆಂಕಿ ಹಾಕುವದು ಮತ್ತು ರಾತ್ರಿಯೆಲ್ಲ ಐದು ಕೊಟ್ಟು ಮೂರ್ತಿ ತೆರೆಗಳು. ಏ. 3 ರಂದು ಬೆಳಿಗ್ಗೆ 5 ಗಂಟೆಗೆ ಶ್ರೀ ವಿಷ್ಣುಮೂರ್ತಿ ತೆರೆಯ ಮೇಲೇರಿ (ಕೋಲ ಬೆಂಕಿಗೆ ಬೀಳುವದು) ತದನಂತರ 11 ಗಂಟೆಗೆ ಶ್ರೀ ಚಾಮುಂಡೇಶ್ವರಿ ತೆರೆ (ಕೋಲ)ದ ದೊಡ್ಡಮುಡಿ ನಡೆಯಲಿದೆ ಎಂದು ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.