ನಾಪೋಕ್ಲು, ಮಾ. 28: ಸ್ಥಳೀಯ ಲಯನ್ಸ್ ಕ್ಲಬ್‍ಗೆ ಲಯನ್ಸ್ ರಾಜ್ಯಪಾಲರ ಭೇಟಿ ಕಾರ್ಯಕ್ರಮ ಇಲ್ಲಿನ ಕೊಡವ ಸಮಾಜದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಲಯನ್ಸ್ ರಾಜ್ಯಪಾಲ ದೇವದಾಸ್ ಭಂಡಾರಿ ಭಾಗವಹಿಸಿ ಸಂಸ್ಥೆಯ ಸಾರ್ವಜನಿಕ ಸೇವೆಗಳ ಬಗ್ಗೆ ಹಾಗೂ ಧ್ಯೇಯೋದ್ದೇಶಗಳ ಬಗ್ಗೆ ಮಾಹಿತಿ ನೀಡಿದರು. ಲಯನ್ಸ್ ಸಂಸ್ಥೆಯ ಸದಸ್ಯರು ಮುತುವರ್ಜಿ ವಹಿಸಿ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಮುಕ್ಕಾಟಿರ ವಿನಯ್ ವಹಿಸಿದ್ದರು. ಲಯನ್ಸ್ ಪ್ರಾಂತೀಯ ಅಧ್ಯಕ್ಷ ಬೋಸ್ ಪೆಮ್ಮಯ್ಯ, ರಾಜ್ಯಪಾಲರ ಪ್ರಾಂತೀಯ ಪ್ರತಿನಿಧಿ ಕೇಟೋಳಿರ ರತ್ನಾ ಚರ್ಮಣ, ಲಯನ್ಸ್ ವಲಯ ಅಧ್ಯಕ್ಷ ಜೆ.ವಿ. ಕೋಠಿ, ಸೂರಜ್ ಉತ್ತಪ್ಪ, ಲಯನ್ಸ್ ಪ್ರಧÀಮ ಮಹಿಳೆ ಸುಖಲತಾ ಭಂಡಾರಿ ಸ್ಥಳೀಯ ಲಯನ್ಸ್ ಕಾರ್ಯದರ್ಶಿ ಕನ್ನಂಬೀರ ಸುಧಿ ತಿಮ್ಮಯ್ಯ, ಖಜಾಂಚಿ ಬೊಳ್ಳಂಡ ಶ್ಯಾಂ ಬಿದ್ದಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಪ್ರಶಸ್ತಿ ಪುರಸ್ಕøತರಾದ ನಾಪೋಕ್ಲು ಲಯನ್ಸ್ ಹಿರಿಯ ಸದಸ್ಯ ಬೊಪ್ಪೇರ ಕಾವೇರಪ್ಪ ಅವರನ್ನು ಗೌರವಿಸಲಾಯಿತು. ಲಯನ್ಸ್ ಸಂಸ್ಥೆಯಿಂದ ಅಂಕುರ್ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸ ಲಾಗಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಬಲ್ಲಮಾವಟಿ ನೇತಾಜಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ರೇಹನ್ ಕಾಳಯ್ಯ ಅವರಿಗೆ ಅರ್ಹತಾ ಪತ್ರ ನೀಡಲಾಯಿತು. ಅಂಕುರ್ ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಅಧ್ಯಕ್ಷ ಮುಕ್ಕಾಟಿರ ವಿನಯ್ ಸ್ವಾಗತಿಸಿ, ಕಾರ್ಯದರ್ಶಿ ಸುಧಿ ತಿಮ್ಮಯ್ಯ ವರದಿ ವಾಚಿಸಿ, ವಂದಿಸಿದರು.