ಶನಿವಾರಸಂತೆ, ಮಾ. 28: ಇಲ್ಲಿನ ನಮ್ಮ ಬೆಳೆಗಾರರ ಸ್ವಸಹಾಯ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಆರ್.ಪಿ. ಲಕ್ಷ್ಮಣ್ ಅಧ್ಯಕ್ಷತೆಯಲ್ಲಿ ಸಹಕಾರ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು.

ಸಭೆಯ ಆರಂಭದಲ್ಲಿ ದೈವಾಧೀನರಾದ ಸಿದ್ಧಗಂಗಾ ಶ್ರೀಗಳಿಗೆ, ಪುಲ್ವಾಮದಲ್ಲಿ ಪ್ರಾಣತೆತ್ತ ವೀರಯೋಧರಿಗೆ, ನಿಧನರಾದ ಹಿರಿಯ ಬೆಳೆಗಾರ ಬಿ.ಜಿ. ಶಾಂತಯ್ಯ ಹಾಗೂ ಸಚಿವ ಶಿವಳ್ಳಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಮೌನಾಚರಣೆ ಮಾಡಲಾಯಿತು.

ಸಭೆಯಲ್ಲಿ ಕಾಫಿ ಬೆಳೆಗಾರರ ಸಮಸ್ಯೆಗಳು, ಸಂಘದ ಅಭಿವೃದ್ಧಿ ಇತ್ಯಾದಿ ವಿಷಯಗಳ ಬಗ್ಗೆ ಸದಸ್ಯರು ಚರ್ಚೆ ನಡೆಸಿದರು. ಲೋಕಸಭೆ ಚುನಾವಣೆ ಅಂಗವಾಗಿ ಬಂದೂಕುಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸುವ ವಿಚಾರವಾಗಿ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು. ಕೆಲವೆಡೆ ಬೆಳೆಗಾರರ ಒಂಟಿ ಮನೆಗಳಿರುತ್ತದೆ. ವೃದ್ಧರೇ ಇರುತ್ತಾರೆ. ಕಾಫಿ, ಕಾಳುಮೆಣಸು ಸಂಗ್ರಹಿಸಿರುವ ಮನೆಗಳಿಗೆ ರಕ್ಷಣೆ ಅಗತ್ಯವಾಗಿರುತ್ತದೆ. ಆತ್ಮರಕ್ಷಣೆಯ ಉದ್ದೇಶದಿಂದಲಾದರೂ ಬಂದೂಕಿನ ಅವಶ್ಯಕತೆ ಇರುವದರಿಂದ ಬಂದೂಕು ಒಪ್ಪಿಸುವ ವಿರುದ್ಧ ಸಾರ್ವಜನಿಕರ ಹಿತಾಸಕ್ತಿ ಅರ್ಜಿ ಯೊಂದಿಗೆ ಶಾಶ್ವತ ಪರಿಹಾರಕ್ಕೆ ಹೋರಾಟ ನಡೆಸಲು ತೀರ್ಮಾನಿ ಸಲಾಯಿತು. ಸಂಘದ ವತಿಯಿಂದ ಕಾಫಿ ಪುಡಿ ಘಟಕ ಸ್ಥಾಪಿಸಲು ಬೆಳೆಗಾರ ಸದಸ್ಯರಿಂದ ತಲಾ ರೂ. 1 ಸಾವಿರ ಮುಖಬೆಲೆಯ ಷೇರು ಬಿಡುಗಡೆ ಮಾಡಿ ಹಣ ಕ್ರೋಢೀಕರಿಸಲು ತೀರ್ಮಾನಿಸ ಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಗಾರರು ಸಂಘದ ಸದಸ್ಯತ್ವ ಪಡೆದು ಕೆ.ಜಿ.ಎಫ್.ನ ಒಡನಾಟದೊಂದಿಗೆ ಬೆಳೆಗಾರರ ಮೂಲಭೂತ ಸಮಸ್ಯೆ ಗಳನ್ನು ನಿವಾರಿಸಿ ಕೊಳ್ಳಲು ಕಾರ್ಯ ಪ್ರವೃತ್ತರಾಗುವಂತೆ ತೀರ್ಮಾನಿಸ ಲಾಯಿತು. ಹಂಡ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಬೆಳೆಗಾರರ ಸಂಘಕ್ಕೆ 10 ಸೆಂಟ್ ನಿವೇಶನಕ್ಕೆ ಜಾಗ ಒದಗಿಸಿ ಕೊಟ್ಟಿರುವದಕ್ಕೆ ಸಭೆಯಲ್ಲಿ ಧನ್ಯವಾದ ಸಲ್ಲಿಸಲಾಯಿತು. ಸಂಘದ ನಿರ್ದೇಶಕ ರಾದ ಎಸ್.ಸಿ. ಶರತ್ ಶೇಖರ್, ಹೆಚ್.ವಿ. ದಿವಾಕರ್, ಕೆ.ವಿ. ಮಂಜುನಾಥ್, ಎಸ್.ಕೆ. ವೀರಪ್ಪ, ಡಿ.ಆರ್. ವೀರೇಂದ್ರ, ಉಮಾಶಂಕರ್, ಹೆಚ್.ಪಿ. ಶೇಷಾದ್ರಿ, ಹೆಚ್.ಎನ್. ಸಂದೀಪ್ ಹಾಗೂ ಬೆಳೆಗಾರ ಸದಸ್ಯರು ಉಪಸ್ಥಿತರಿದ್ದರು.