ಮಡಿಕೇರಿ, ಮಾ. 29: ತಾ. 30 ರಿಂದ (ಇಂದಿನಿಂದ) ಮೂರು ದಿನಗಳ ಕಾಲ ಮಡಿಕೇರಿಯ ಭಾರತೀಯ ವಿದ್ಯಾಭವನ -ಕೊಡಗು ವಿದ್ಯಾಲಯದ ಮೈದಾನದಲ್ಲಿ ಆಯೋಜಿತ ಕ್ರಾಫ್ಟ್ ಮೇಳಕ್ಕೆ ಬೆಳಿಗ್ಗೆ 8.30ಕ್ಕೆ ಚಾಲನೆ ದೊರಕಲಿದೆ.

ತಾ. 30 ರಂದು (ಇಂದು) ಬೆಳಿಗ್ಗೆ 8.30 ಗಂಟೆಗೆ ಶಾಲೆಯಲ್ಲಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಬಿ.ಕೆ.ಸುಬ್ಬಯ್ಯ ಕ್ರಾಫ್ಟ್ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಕೆ.ಪಿ. ಉತ್ತಪ್ಪ,ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್.ದೇವಯ್ಯ, ನಿರ್ದೇಶಕ ಸಿ.ಬಿ. ದೇವಯ್ಯ, ಶೈಕ್ಷಣಿಕ ಸಮಿತಿ ಅಧ್ಯಕ್ಷೆ ಊರ್ವಶಿ ಮುದ್ದಯ್ಯ ಪಾಲ್ಗೊಳ್ಳಲಿದ್ದಾರೆ.

ದಕ್ಷಿಣ ಭಾರತದ ವಿವಿಧ ರಾಜ್ಯಗಳಿಂದ ಮಡಿಕೇರಿಯಲ್ಲಿ ನಡೆಯುವ ಕ್ಟಾಫ್ಟ್ ಮೇಳಕ್ಕೆ ಆಗಮಿಸಲಿರುವ ಹೆಸರಾಂತ ಕಲಾವಿದರು, ಚಿತ್ರಕಾರರು, ಶಿಲ್ಪಿಗಳು ವಿದ್ಯಾರ್ಥಿ, ಪೆÇೀಷಕರಿಗೆ ಕಲಾ ತರಬೇತಿ ನೀಡಲಿದ್ದಾರೆ.

ಸಂಜೆ 6.30 ಗಂಟೆಯಿಂದ 8 ಗಂಟೆಯವರೆಗೆ ದೇಶದ ಹೆಸರಾಂತ ಸಮರಕಲೆ, ರೋಮಾಂಚನಕಾರಿ, ಕೇರಳದ ಪ್ರಸಿದ್ಧ ಕಲರಿ ಪಯ್ಯಟ್ ವಲ್ಲಭಟ್ಟು ಕೇಂದ್ರದಿಂದ ಪ್ರದರ್ಶನಗೊಳ್ಳಲಿದೆ.

ದೇಶದ ಪಾರಂಪರಿಕ ಕಲೆಗಳಾದ ರಾಜಸ್ಥಾನದ ಟೈ ಅಂಡ್ ಡೈ, ದೆಹಲಿಯ ಪೇಪರ್ ಮಾಷೆ, ಆಂಧ್ರದ ಚೆರಿಯಲ್ ಮಾಸ್ಕ್ ಮೇಕಿಂಗ್ ಮತ್ತು ಕೂಚಿಪುಡಿ ಮಧ್ಯಪ್ರದೇಶದ ಗೋಂದ್, ಕರ್ನಾಟಕದ ಯಕ್ಷಗಾನ, ಚಿತ್ತಾರ, ಕಂಸಾಳೆ, ಹಾಗೂ ಕಸೂತಿಗಳ ಕಾರ್ಯಗಾರ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ 3 ದಿನಗಳ ಕಾಲ ಆಯೋಜಿತವಾಗಿದ್ದು ವೈವಿಧ್ಯಮಯ ಕಲಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಕೂಡ ಕ್ರಾಫ್ಟ್ ಮೇಳದ ವಿಶೇಷ.

ಸಕಲ ಸಿದ್ಧತೆ : ಮಡಿಕೇರಿಯ ಭಾರತೀಯ ವಿದ್ಯಾಭವನ - ಕೊಡಗು ವಿದ್ಯಾಲಯದಲ್ಲಿ ಮೂರು ದಿನಗಳು ನಡೆಯಲಿರುವ ಕ್ರಾಫ್ಟ್ ಮೇಳ -2019ಕ್ಕೆ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿದೆ. ಕೊಡಗಿನಾದ್ಯಂತಲಿನ 800 ವಿದ್ಯಾರ್ಥಿಗಳು, ಪೆÇೀಷಕರು ವಿವಿಧ ಕಲಾ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದು, ಪ್ರತಿನಿತ್ಯ ಸಂಜೆ 6.30 ಗಂಟೆಯಿಂದ ಹೆಸರಾಂತ ಕಲಾತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವೈವಿಧ್ಯಮಯ ಕಲಾರಚನೆಗಳಿಂದ ಕಂಗೊಳಿಸುತ್ತಿದೆ.