ಕುಶಾಲನಗರ, ಮಾ 29: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ವೀಕ್ಷಣಾ ಅಧಿಕಾರಿಗಳು ಕೊಪ್ಪ ಬಳಿಯ ಚುನಾವಣಾ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕ್ಷೇತ್ರದ ವೀಕ್ಷಕರಾದ ಕುಲದೀಪ್ ನಾರಾಯಣ್ ಮತ್ತು ಡಾ.ವಿಕಾಸ್ ಪತಾಕ್ ಅವರುಗಳು ಕೊಪ್ಪ ಬಳಿಯ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ಸ್ಥಳದಲ್ಲಿದ್ದ ಸೆಕ್ಟರ್ ಮತ್ತು ತಪಾಸಣಾ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಈ ಸಂದರ್ಭ ತಾಲೂಕು ತಹಶೀಲ್ದಾರ್ ಗೋವಿಂದರಾಜು, ಡಿವೈಎಸ್ಪಿ ದಿನಕರ ಶೆಟ್ಟಿ, ಸೆಕ್ಟರ್ ಅಧಿಕಾರಿ ಸುಜಯ್‍ಕುಮಾರ್, ಫ್ಲೈಯಿಂಗ್ ಸ್ಕ್ವಾಡ್ ಗುಂಡಪ್ಪ, ಸುಂಟಿಕೊಪ್ಪ ಕಂದಾಯ ಅಧಿಕಾರಿ ಶಿವಪ್ಪ, ಕುಶಾಲನಗರ ಕಂದಾಯ ಅಧಿಕಾರಿ ಮಧುಸೂದನ್, ತಪಾಸಣಾ ಕೇಂದ್ರದ ಮೆಜಿಸ್ಟ್ರಿಯಲ್ ಎಕ್ಸಿಕ್ಯೂಟಿವ್ ಎಚ್.ಎಸ್.ರಾಜಶೇಖರ್, ಗ್ರಾಮ ಲೆಕ್ಕಿಗ ಗೌತಮ್ ಮತ್ತು ತಪಾಸಣಾ ಕೇಂದ್ರದ ಅಧಿಕಾರಿಗಳು ಇದ್ದರು.