ನಾಪೋಕ್ಲು, ಮಾ.29: ಸಮೀಪದ ಬಲ್ಲಮಾವಟಿ ಗ್ರಾಮದ ಭಗವತಿ ದೇವರ ವಾರ್ಷಿಕ ಉತ್ಸವವು ವಿಜೃಂಭಣೆಯಿಂದ ಜರುಗಿತು.ಬುಧವಾರ ರಾತ್ರಿ ದೇವರ ಅವಭೃತ ಸ್ನಾನದ ಬಳಿಕ ದೇವರ ನೃತ್ಯಬಲಿ ಜರುಗಿತು. ಗ್ರಾಮದ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ವೀಕ್ಷಿಸಿದರು. ಗುರುವಾರ ನಾಗಪೂಜೆ ಹಾಗೂ ಶುದ್ಧ ಕಳಸದೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಯಿತು.

ವಾರ್ಷಿಕೋತ್ಸವದ ಅಂಗವಾಗಿ ಅಂದಿಬೊಳಕ್, ಇರ್‍ಬೊಳಕ್ ಮತ್ತಿತರ ಕಾರ್ಯಕ್ರಮಗಳು ಜರುಗಿದವು. ದೇವಾಲಯದಲ್ಲಿ ಮುಖ್ಯ ಹಬ್ಬ, ಎತ್ತುಪೋರಾಟ ಹಾಗೂ ದೇವರ ನೃತ್ಯ ಜರುಗಿತು. ತೆಂಗಿನಕಾಯಿಗೆ ಗುಂಡು ಹೊಡೆಯುವ ಸಾಂಪ್ರದಾಯಿಕ ಆಚರಣೆ ಹಾಗೂ ಗ್ರಾಮಸ್ಥರಿಂದ ಬೊಳಕಾಟ್ ಪ್ರದರ್ಶನ ಏರ್ಪಡಿಸಲಾಗಿತ್ತು. ಊರಿನ ತಕ್ಕಮುಖ್ಯಸ್ಥರು ದೇವಾಲಯದ ಆಡಳಿತ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು. -ದುಗ್ಗಳ