ಸೋಮವಾರಪೇಟೆ, ಮಾ. 29: ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ಅಧ್ಯಕ್ಷರಾಗಿ ಎ.ಆರ್.ಭರತ್ ಆಯ್ಕೆ ಯಾಗಿದ್ದಾರೆ.
ಕೊಡವ ಸಮಾಜದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಸಾಲಿಗೆ ಆಡಳಿತ ಮಂಡಳಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿಯಾಗಿ ಬಿ.ಎನ್.ರಂಗಸ್ವಾಮಿ, ಉಪಾಧ್ಯಕ್ಷರಾಗಿ ಬಿ.ವಿ.ಬಾಲಕೃಷ್ಣ ಪೂಜಾರಿ, ಖಜಾಂಚಿಯಾಗಿ ವಿನ್ಸಿಪಿಂಟೋ, ಸಹಕಾರ್ಯದರ್ಶಿಯಾಗಿ ಡ್ಯಾನಿ ಡೋಮಿನಿಕ್ ಹಾಗೂ ಗೌರವಾಧ್ಯಕ್ಷರಾಗಿ ಸಿ.ಸಿ.ನಂದಕುಮಾರ್, ಸಲಹೆಗಾರರಾಗಿ ಎ.ಪಿ. ವೀರರಾಜು, ಕೆ.ಎ.ಇಬ್ರಾಹಿಂ, ಕೆ.ಜಿ.ಸುರೇಶ್ ಅವರುಗಳು ನೇಮಿಸಲಾಯಿತು.