ಮಡಿಕೇರಿ, ಏ. 13: ಬೆಂಗಳೂರಿನಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಕೊಡಗಿನ ಯುವಕನೋರ್ವ ದುರ್ಮರಣಗೊಂಡಿರುವ ಘಟನೆ ಸಂಭವಿಸಿದೆ. ದಕ್ಷಿಣ ಕೊಡಗಿನ ಬೇಗೂರಿನ ಚೋಡುಮಾಡ ಮನು ಎಂಬವರ ಪುತ್ರ ಸೋಮಣ್ಣ (23) ಮೃತಪಟ್ಟ ದುರ್ದೈವಿ. ಸೋಮಣ್ಣ ಬೆಂಗಳೂರಿನಲ್ಲಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದು, ತಾ. 11 ರಂದು ಬೆಳಿಗ್ಗೆ ಕಚೇರಿಗೆ ತೆರಳುತ್ತಿದ್ದ ಸಂದರ್ಭ ಅಲ್ಲಿನ ಎಲೆಕ್ಟ್ರಾನಿಕ್ ಸಿಟಿ ಬಳಿ ಎದುರಿನಿಂದ ಬಂದ ಕಾರು ಡಿಕ್ಕಿಯಾಗಿದೆ. ಘಟನೆಯಿಂದ ತೀವ್ರ ಪೆಟ್ಟಾಗಿದ್ದ ಯುವಕ ಸೋಮಣ್ಣನನ್ನು ಅಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ, ನಿನ್ನೆ ಮೃತಪಟ್ಟಿದ್ದಾರೆ. ಮೃತದೇಹವನ್ನು ಬೇಗೂರಿಗೆ ತರಲಾಗಿದ್ದು, ಇಂದು ಅಂತ್ಯಕ್ರಿಯೆ ನೆರವೇರಿತು.