ಮಡಿಕೇರಿ, ಏ. 12: ಮಡಿಕೇರಿ ನಗರ ಕಾಂಗ್ರೆಸ್ ಹಾಗೂ ಬ್ಲಾಕ್ ಕಾಂಗ್ರೆಸ್ ವತಿಯಿಂದ ಎ.ವಿ. ಶಾಲೆ ಬಳಿಯಿಂದ 3 ಗಂಟೆಗೆ ಕಾಂಗ್ರೆಸ್-ಜನತಾದಳ ಮೈತ್ರಿ ಕೂಟದಿಂದ ಪಾದಯಾತ್ರೆ ಮೂಲಕ ಮತಯಾಚನೆ ನಗರದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ. ಪದಾಧಿಕಾರಿಗಳಾದ ಮಿಟ್ಟು ಚಂಗಪ್ಪ, ಟಿ.ಪಿ. ರಮೇಶ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕೆ.ಪಿ.ಸಿ.ಸಿ. ಅಲ್ಪಸಂಖ್ಯಾತರ ಘಟಕದ ಸಂಯೋಜಕ ಉಸ್ಮಾನ್, ಕೆ.ಪಿ.ಸಿ.ಸಿ. ಕಾರ್ಯದರ್ಶಿ ತಾಹಿರ್ ಹಫೀಜ್, ವಕ್ಫ್ ಬೋರ್ಡ್ ಅಧ್ಯಕ್ಷ ಯಾಕೂಬ್, ಎನ್.ಐ.ಟಿ.ಯು.ಸಿ. ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ಮಹಿಳಾ ಅಧ್ಯಕ್ಷೆ ಸುರಯ್ಯಾ ಅಬ್ರಾರ್, ಮಡಿಕೇರಿ ಬ್ಲಾಕ್ ಅಧ್ಯಕ್ಷ ಅಪ್ರು ರವೀಂದ್ರ, ನಗರಾಧ್ಯಕ್ಷ ಕೆ.ಯು. ಅಬ್ದುಲ್ ರಜಾಕ್, ನಗರಸಭೆ ಮಾಜಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಮಾಜಿ ಮೂಡಾ ಅಧ್ಯಕ್ಷ ಚುಮ್ಮಿ ದೇವಯ್ಯ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಇ. ಮ್ಯಾಥ್ಯು, ನಗರ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಹಾಗೂ ಇತರರು ಪಾಲ್ಗೊಂಡಿದ್ದರು.

ಟಿ.ಪಿ. ರಮೇಶ್ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಸರಕಾರ ಬಂದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಿಂಗಳಿಗೆ ರೂ. 6 ಸಾವಿರದ ಹಾಗೆ ವರ್ಷಕ್ಕೆ ರೂ. 72,000 ಪ್ರತಿ ಮನೆಯ ಮಹಿಳೆಯ ಬ್ಯಾಂಕ್ ಖಾತೆಗೆ ಹಾಕುವ ವಿಚಾರ ಹೇಳಿದರು. ಮಹಿಳೆಯರಿಗೆ ಶೇ. 33 ಮೀಸಲಾತಿ, ಸಿದ್ದರಾಮಯ್ಯ ಅವರು ಹಾಗೂ ಈಗಿನ ಸರಕಾರದ ಸಾಧನೆಗಳನ್ನು ಗಮನಿಸಿ ಜನರು ವಿಜಯಶಂಕರ್ ಅವರಿಗೆ ಮತ ನೀಡುವಂತೆ ಹೇಳಿದರು.

ಶಾಸಕಿ ವೀಣಾ ಅಚ್ಚಯ್ಯ ಮಾತನಾಡಿ, ಮೈತ್ರಿ ಕೂಟದ ಅಭ್ಯರ್ಥಿಗೆ ಮತ ನೀಡುವಂಯೆ ಕರೆ ನೀಡಿ ಈ ಹಿಂದೆ 5 ವರ್ಷದ ಆಡಳಿತ ನೀಡಿದ ಪ್ರತಾಪ್ ಸಿಂಹರ ಕಾರ್ಯ ವೈಖರಿಗೆ ಬಿ.ಜೆ.ಪಿ. ಮಂದಿಯೇ ತೆಗಳುತ್ತಿದ್ದು, ಸುಭದ್ರ ಸರಕಾರ ಬೇಕಿದ್ದರೆ ಕಾಂಗ್ರೆಸ್ ಸರಕಾರ ಬೇಕಿದೆ. ಇದನ್ನು ಮನಗಂಡು ಜನ ಸರಿಯಾದ ತೀರ್ಮಾನ ಕೈಗೊಳ್ಳುವಂತೆ ಹೇಳಿದರು. ದಿನನಿತ್ಯದ ಗ್ಯಾಸ್, ಪೆಟ್ರೋಲ್ ಬೆಲೆ ಗಗನಕ್ಕೇರಿದ್ದು, ಇದು ಇಂದಿನ ಬಿ.ಜೆ.ಪಿ. ಸರಕಾರದ ಸಾಧನೆ, ಇನ ಇದರ ಬಗ್ಗೆ ಎಚ್ಚರಗೊಂಡು ಬಿ.ಜೆ.ಪಿ.ಗೆ ತಕ್ಕಶಾಸ್ತಿ ಮಾಡಬೇಕೆಂದು ಹೇಳಿದರು.