ಮಡಿಕೇರಿ, ಏ. 12: ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಆಡಳಿತ ಮಂಡಳಿಯ ಮುಂದಿನ ಐದು ವರ್ಷಗಳ ಅಧ್ಯಕ್ಷ ಸ್ಥಾನಕ್ಕೆ ತಾ. ಮಡಿಕೇರಿ, ಏ. 12: ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಆಡಳಿತ ಮಂಡಳಿಯ ಮುಂದಿನ ಐದು ವರ್ಷಗಳ ಅಧ್ಯಕ್ಷ ಸ್ಥಾನಕ್ಕೆ ತಾ. ಬಾಂಡ್ ಗಣಪತಿ ಹಾಗೂ ನಿರ್ಗಮಿತ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಲಿ ಅಧ್ಯಕ್ಷರಾಗಿದ್ದ ಬಿ.ಡಿ. ಮಂಜುನಾಥ್ ಅವರನ್ನು ಸಂಪರ್ಕಿಸಿದಾಗ, ತಾನು ಪಕ್ಷದ ತೀರ್ಮಾನಕ್ಕೆ ಬದ್ಧ ಎಂದು ‘ಶಕ್ತಿ’ಗೆ ತಿಳಿಸಿದ್ದಾರೆ.ತಾ. 15 ರಂದು ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆಯಲಿರುವ ಚುನಾವಣೆ ಸಂಬಂಧ, ತೆರೆಮರೆಯಲ್ಲಿ ಬಿಜೆಪಿ ಬೆಂಬಲಿತ ಮೇಲಿನ ಮೂವರ ನಡುವೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಎದುರಾಗಿದೆ. ಚುನಾವಣಾ ಪೂರ್ವದಲ್ಲೇ ಈ ಸಂಬಂಧ ಪೈಪೋಟಿ ಎದುರಾಗಿದ್ದರೂ, ಪಕ್ಷ ಬೆಂಬಲಿತ ಹನ್ನೊಂದು ಮಂದಿ ಗೆಲವು ಸಾಧಿಸಿದ್ದಾರೆ. ಈ ನಡುವೆ ಮಡಿಕೇರಿ ಕ್ಷೇತ್ರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳಾದ (ಮೊದಲ ಪುಟದಿಂದ) ಇಬ್ಬರು ಪರಾಜಯ ಗೊಂಡಿದ್ದಾರೆ. ಸೋಮವಾರಪೇಟೆ ಕ್ಷೇತ್ರದಲ್ಲಿ ಅತ್ಯಂತ ಪ್ರಬಲ ಆಕಾಂಕ್ಷಿ ಮಣಿ ಉತ್ತಪ್ಪ ಲಾಟರಿಯಲ್ಲಿ ಸ್ಥಾನ ವಂಚಿತರಾಗಿ ಕಾಂಗ್ರೆಸ್ ಬೆಂಬಲಿತ ಬಿ.ಕೆ. ಚಿಣ್ಣಪ್ಪ ಅವಕಾಶ ಪಡೆದಿದ್ದಾರೆ.
ಹೀಗಾಗಿ ಒಟ್ಟು ಹದಿಮೂರು ಮಂದಿ ನಿರ್ದೇಶಕರ ಪೈಕಿ ಮಡಿಕೇರಿಯ ಒಂದು ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಹೊಸೂರು ಸತೀಶ್‍ಕುಮಾರ್ ಗೆಲವು ಸಾಧಿಸಿದ್ದಾರೆ. ಆದರೆ ಇದೀಗ ಬಿಜೆಪಿ ಬೆಂಬಲಿತ ಹನ್ನೊಂದು ಮಂದಿ ನಿರ್ದೇಶಕರ ಪೈಕಿ ಅಧ್ಯಕ್ಷ ಸ್ಥಾನಕ್ಕೆ ಒಮ್ಮತ ಮೂಡದೆ ಮೂವರು ಸ್ಪರ್ಧೆಯಲ್ಲಿ ಆಕಾಂಕ್ಷೆ ಹೊಂದಿದ್ದಾರೆ.
ಹಾಲಿ ಅಧ್ಯಕ್ಷರಾಗಿದ್ದ ಬಿ.ಡಿ. ಮಂಜುನಾಥ್ ಅವರಿಗೆ ಕಳೆದ ಅವಧಿಯಲ್ಲಿ ಹಿರಿಯರ ಅಪೇಕ್ಷೆಯಂತೆ ಸ್ಥಾನ ಕಲ್ಪಿಸಿದ್ದು, ಈ ಬಾರಿ ತಮಗೆ ಬಿಟ್ಟುಕೊಡಬೇಕೆಂದು ಬಾಂಡ್ ಗಣಪತಿ ಹಾಗೂ ಹರೀಶ್ ಪೂವಯ್ಯ ವಾದ ಮಂಡಿಸುತ್ತಿದ್ದಾರೆ. ಅಲ್ಲದೆ ವೀರಾಜಪೇಟೆ ತಾಲೂಕಿನ ಮೂವರ ಸಹಿತ ಕಾಂಗ್ರೆಸ್ ಮತ್ತು ದಳ ಬೆಂಬಲಿತ ಇಬ್ಬರ ಮತಗಳನ್ನು ಪಡೆಯುವ ವಿಶ್ವಾಸದೊಂದಿಗೆ, ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯ ಮತವೊಂದು ಕೂಡ ಗಳಿಸಲು ಬಾಂಡ್‍ಗಣಪತಿ ಕಸರತ್ತು ನಡೆಸಿದ್ದಾರೆ.
ಈ ನಡುವೆ ಹರೀಶ್ ಪೂವಯ್ಯ ಕೂಡ ಅಧ್ಯಕ್ಷ ಸ್ಥಾನಕ್ಕಾಗಿ ಪ್ರಯತ್ನ ಮುಂದುವರೆಸು ವದರೊಂದಿಗೆ, ಅಂತಿಮವಾಗಿ ಪಕ್ಷದ ಹಿರಿಯರ ನಿರ್ಧಾರವನ್ನು ತಿಳಿದು ಬಳಿಕ ಮುನ್ನಡೆಯುವದಾಗಿ ಸುಳಿವು ನೀಡಿದ್ದಾರೆ. ಈ ಬಗ್ಗೆ ಕೆಲವರು ಇಂದು ಕೂಡ ಮಾತುಕತೆಯಲ್ಲಿ ತೊಡಗಿರುವ ಸಂಗತಿ ‘ಶಕ್ತಿ’ಗೆ ಮೂಲದಿಂದ ಗೊತ್ತಾಗಿದೆ.
ಆ ಬಗ್ಗೆ ಬಿ.ಡಿ. ಮಂಜುನಾಥ್ ಮಾತ್ರ ತಮಗೇನೂ ಗೊತ್ತಿಲ್ಲ ವೆಂದೂ, ತಾವು ಮೊದಲಿನಿಂದಲೂ ಪಕ್ಷದ ನಿಷ್ಠಾವಂತ ಕಾರ್ಯಕರ್ತ ನಾಗಿದ್ದು, ಯಾವದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ಬದ್ಧನಾಗಿರುವೆ ಎಂದಷ್ಟೇ ‘ಶಕ್ತಿ’ ಯೊಂದಿಗೆ ಸೂಚ್ಯವಾಗಿ ಉತ್ತರಿಸಿ ದ್ದಾರೆ. ಇನ್ನುಳಿದ ನಿರ್ದೇಶಕರು ಸೋಮವಾರದ ಬೆಳವಣಿಗೆಗಾಗಿ ಎದುರು ನೋಡುತ್ತಿದ್ದಾರೆ.