ಮಡಿಕೇರಿ, ಏ. 12: ಕೊಡಗು - ಮೈಸೂರು ಲೋಕಸಭಾ ಕ್ಷೇತ್ರ ಸಹಿತ ಕರ್ನಾಟಕದ 14 ಕಡೆಗಳಲ್ಲಿ ಇದೇ ತಾ.18 ರಂದು ಚುನಾವಣೆ ನಡೆಯಲಿದ್ದು, ಜಿಲ್ಲೆಯಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಂತೆ 543 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನಕ್ಕೆ ಪೊಲೀಸ್ ಇಲಾಖೆಯಿಂದ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಸಂಬಂಧ ಈಗಾಗಲೇ ಕರ್ನಾಟಕ ಹೆಚ್ಚುವರಿ ಪೊಲೀಸ್ ನಿರ್ದೇಶಕರುಗಳಾದ ಕಮಲ್ ಪಂಥ್ ಹಾಗೂ ಪ್ರತಾಪ್ ರೆಡ್ಡಿ ಖುದ್ದು ಮಾತುಕತೆ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರಿಗೆ ನಿರ್ದೇಶನ ನೀಡಿದ್ದಾರೆ.
ಅಲ್ಲದೆ ಕರ್ನಾಟಕ ದಕ್ಷಿಣ ವಲಯ ಐಜಿಪಿ ಸತೀಶ್‍ಕುಮಾರ್ ಕೂಡ ಜಿಲ್ಲೆಯಲ್ಲಿ ಎರಡು ಸುತ್ತಿನ ಪ್ರವಾಸದೊಂದಿಗೆ, ಎಸ್‍ಪಿ ಹಾಗೂ ಕೆಳ ಮಡಿಕೇರಿ, ಏ. 12: ಕೊಡಗು - ಮೈಸೂರು ಲೋಕಸಭಾ ಕ್ಷೇತ್ರ ಸಹಿತ ಕರ್ನಾಟಕದ 14 ಕಡೆಗಳಲ್ಲಿ ಇದೇ ತಾ.18 ರಂದು ಚುನಾವಣೆ ನಡೆಯಲಿದ್ದು, ಜಿಲ್ಲೆಯಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಂತೆ 543 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನಕ್ಕೆ ಪೊಲೀಸ್ ಇಲಾಖೆಯಿಂದ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಸಂಬಂಧ ಈಗಾಗಲೇ ಕರ್ನಾಟಕ ಹೆಚ್ಚುವರಿ ಪೊಲೀಸ್ ನಿರ್ದೇಶಕರುಗಳಾದ ಕಮಲ್ ಪಂಥ್ ಹಾಗೂ ಪ್ರತಾಪ್ ರೆಡ್ಡಿ ಖುದ್ದು ಮಾತುಕತೆ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರಿಗೆ ನಿರ್ದೇಶನ ನೀಡಿದ್ದಾರೆ.
ಅಲ್ಲದೆ ಕರ್ನಾಟಕ ದಕ್ಷಿಣ ವಲಯ ಐಜಿಪಿ ಸತೀಶ್‍ಕುಮಾರ್ ಕೂಡ ಜಿಲ್ಲೆಯಲ್ಲಿ ಎರಡು ಸುತ್ತಿನ ಪ್ರವಾಸದೊಂದಿಗೆ, ಎಸ್‍ಪಿ ಹಾಗೂ ಕೆಳ (ಮೊದಲ ಪುಟದಿಂದ) ಸಾಧಿಸುವದರೊಂದಿಗೆ ವಿಚಾರ ವಿನಿಮಯ ಕೈಗೊಳ್ಳಲಾಗಿದೆ. ಮಾತ್ರವಲ್ಲದೆ ಕೇರಳ ಗಡಿಗಳ ಸಹಿತ ಒಟ್ಟು 14 ಚೆಕ್‍ಪೋಸ್ಟ್‍ಗಳಲ್ಲಿ ಹಗಲಿರುಳು ಪೊಲೀಸ್ ಕಣ್ಗಾವಲು ಇರಿಸಲಾಗಿದೆ.
‘ಚೀತಾ’ ಮೊಬೈಲ್ : ಇನ್ನು ಕೊಡಗಿನ ಒಟ್ಟು 17 ಪೊಲೀಸ್ ಠಾಣಾ ಸರಹದ್ದಿನಲ್ಲಿಯೂ ದ್ವಿಚಕ್ರ ವಾಹನಗಳಲ್ಲಿ ಇಲಾಖೆಯ ‘ಚೀತಾ’ ಮೊಬೈಲ್ ತಂಡದೊಂದಿಗೆ ತಲಾ ಇಬ್ಬರು ಸಿಬ್ಬಂದಿ ನಿರಂತರ ಗಸ್ತು ತಿರುಗುವ ಮುಖಾಂತರ ಸಾರ್ವಜನಿಕ ದೂರುಗಳನ್ನು ಬೆನ್ನೇರಿ ತುರ್ತು ಕಾರ್ಯನಿರ್ವಹಿಸಲಿದ್ದಾರೆ.
12 ಮತಗಟ್ಟೆಗೆ ನಿಗಾ : ಮಾತ್ರವಲ್ಲದೆ ಕಳೆದ ಹಲವು ವರ್ಷಗಳಿಂದ ಗಾಳಿಬೀಡು ಗ್ರಾ.ಪಂ.ಯ ವ್ಯಾಪ್ತಿಯ ಕಾಲೂರು, ಸಂಪಾಜೆ ಗ್ರಾ.ಪಂ. ವ್ಯಾಪ್ತಿಯ ಗೂಡುಗದ್ದೆ, ಕುಟ್ಟ ಹಾಗೂ ಬಿರುನಾಣಿ ವ್ಯಾಪ್ತಿಯೊಂದಿಗೆ ಕಕ್ಕಬ್ಬೆ ಬಳಿ ನಾಲಡಿ, ಭಾಗಮಂಡಲ ಸರಹದ್ದಿನ ಮುಂಡ್ರೋಟು ಸೇರಿದಂತೆ ನಕ್ಸಲರು ಕಾಣಿಸಿಕೊಂಡಿದ್ದ ಪ್ರದೇಶದ 12 ಬೂತ್‍ಗಳನ್ನು ಅತೀ ಸೂಕ್ಷ್ಮವೆಂದು ಗುರುತಿಸಲಾಗಿದೆ. ಈ ಎಲ್ಲೆಡೆ ಪ್ರಸಕ್ತ ಲೋಕಸಭಾ ಚುನಾವಣೆ ಸಂದರ್ಭ, ನಕ್ಸಲ್ ಪೀಡಿತ ಮತಗಟ್ಟೆಗಳೆಂದು ಪರಿಗಣಿಸಿ ವಿಶೇಷ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.
123 ಸೂಕ್ಷ್ಮ ಮತಗಟ್ಟೆ : ಇನ್ನೊಂದೆಡೆ ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಜಿಲ್ಲೆಗಳ ಗಡಿ ಸಹಿತ 123 ಮತಗಟ್ಟೆಗಳನ್ನು ಸೂಕ್ಷ್ಮವೆಂದು ಪರಿಗಣಿಸಿ, ನಕ್ಸಲ್ ಪೀಡಿತ ಹಾಗೂ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿ ಭದ್ರತೆಯೊಂದಿಗೆ ಶಸ್ತ್ರಸಜ್ಜಿತ ಭದ್ರತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಇನ್ನುಳಿದ 408 ಮತಗಟ್ಟೆಗಳನ್ನು ಸಾಮಾನ್ಯ ಮತಗಟ್ಟೆಗಳೆಂದು ಪರಿಗಣಿಸಿ ಅಗತ್ಯ ರಕ್ಷಣೆ ಒದಗಿಸಲಾಗುತ್ತಿದೆ.
ಮದ್ಯ ನಿಷೇಧ : ಈಗಾಗಲೇ ಚುನಾವಣಾ ಆಯೋಗದ ನಿರ್ದೇಶನದಂತೆ ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳ ಸಹಿತ 543 ಮತಗಟ್ಟೆ ವ್ಯಾಪ್ತಿಯಲ್ಲಿ ಸಂಪೂರ್ಣ ಮದ್ಯ ಬಳಕೆ ಅಥವಾ ಮಾರಾಟ ನಿರ್ಬಂಧಿಸಿ ಕಟ್ಟುನಿಟ್ಟಿನ ಆದೇಶವನ್ನು ಜಿಲ್ಲಾಡಳಿತ ಹೊರಡಿಸಿದ್ದು, ತಾ. 17 ಹಾಗೂ 18 ರಂದು ಎಲ್ಲೆಡೆ ಪೊಲೀಸ್ ತಪಾಸಣೆ ನಡೆಯಲಿದೆ. ಅಕ್ರಮ ಸಾಗಾಟ, ಮಾರಾಟ ಅಥವಾ ದಾಸ್ತಾನು ಪತ್ತೆಯಾದರೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಲಾಗಿದೆ.
ಭದ್ರತೆಗೆ ನಿಯೋಜನೆ : ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರು, ಐಜಿಪಿ ಸತೀಶ್‍ಕುಮಾರ್ ನಿರ್ದೇಶನ ದೊಂದಿಗೆ ಜಿಲ್ಲೆಯಲ್ಲಿ ಉಸ್ತುವಾರಿ ಗಮನಿಸಲಿದ್ದಾರೆ. ಇವರೊಂದಿಗೆ ಒಟ್ಟು 6 ಮಂದಿ ಡಿವೈಎಸ್‍ಪಿಗಳು, 13 ವೃತ್ತ ನಿರೀಕ್ಷಕರು, 20 ಉಪ ನಿರೀಕ್ಷಕರು, 1200 ಸಿಬ್ಬಂದಿ ಭದ್ರತೆಗೆ ನಿಯೋಜನೆಗೊಳ್ಳಲಿದ್ದಾರೆ. ಇನ್ನು 1200 ಪೊಲೀಸ್ ಸಿಬ್ಬಂದಿ, 450 ಗೃಹರಕ್ಷಕರು ಕರ್ತವ್ಯ ನಿರ್ವಹಿಸಲಿ ದ್ದಾರೆ.
ಮಾತ್ರವಲ್ಲದೆ ಕ್ಷಿಪ್ರ ಕಾರ್ಯಪಡೆಯ ಮಾದರಿ ತುರ್ತು ಸಂದರ್ಭ ಕಾರ್ಯನಿರ್ವಹಿಸಲು ಒಂದು ಗಡಿಭದ್ರತಾ ಪಡೆ ತುಕಡಿ, ಎರಡು ಕೆಎಸ್‍ಆರ್‍ಪಿ ತುಕಡಿ, 4 ಶಸಸ್ತ್ರ ಪಡೆ ತುಕಡಿ ಬೇರೆಡೆಯಿಂದ ಜಿಲ್ಲೆಗೆ ಆಗಮಿಸಿ ಸುರಕ್ಷತೆಗಾಗಿ ಕರ್ತವ್ಯಕ್ಕೆ ನಿಯೋಜನೆಗೊಳಿ¸ Àಲಾಗುತ್ತದೆ. ಈ ತಂಡಗಳು ಸೂಕ್ಷ್ಮ ಪ್ರದೇಶಗಳಲ್ಲಿ ಅಗತ್ಯಾನುಸಾರ ಪಥಸಂಚಲನದೊಂದಿಗೆ ಸಾರ್ವ ಜನಿಕರಿಗೆ ವಿಶ್ವಾಸ ತುಂಬಲಿವೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಒಟ್ಟಿನಲ್ಲಿ ತಾ. 18 ರಂದು ಮತದಾನ ಸಂಬಂಧ ಪೊಲೀಸ್ ಇಲಾಖೆ ಜಿಲ್ಲಾಡಳಿತದೊಂದಿಗೆ ಸಂಪೂರ್ಣ ಸನ್ನದ್ಧಗೊಳ್ಳುತ್ತಿದೆ.