ಗೋಣಿಕೊಪ್ಪಲು. ಏ.13: ಹುದಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದಿಕೇರಿ, ಶ್ರೀಮಂಗಲ ಮುಖ್ಯ ರಸ್ತೆಯಲ್ಲಿ ಜಿಂಕೆಯೊಂದಕ್ಕೆ ಅಪಘಾತ ಸಂಭವಿಸಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದೆ.ಕಾಡಂಚಿನಿಂದ ಆಗಮಿಸಿದ್ದ ಜಿಂಕೆ ವಾಪಸು ಕಾಡಿಗೆ ತೆರಳುವ ವೇಳೆ ರಸ್ತೆ ದಾಟುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.ಅಪಘಾತ ಪಡಿಸಿದ ವಾಹನ ಪತ್ತೆ ಆಗಿಲ್ಲ. ಪತ್ರಕರ್ತರೊಬ್ಬರು ರಾತ್ರಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮಾಹಿತಿ ತಿಳಿದು ಸಂಬಂಧಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಜಿಂಕೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.-ಹೆಚ್.ಕೆ. ಜಗದೀಶ್.