ಮಡಿಕೇರಿ, ಏ. 12: ಕೊಡಗು ಹೆಗ್ಗಡೆ ಸಮಾಜದ ಕ್ರೀಡೋತ್ಸವವು ಮೇ 1, 2, 3ರಂದು ಹಾತೂರು ಶಾಲಾ ಮೈದಾನದಲ್ಲಿ ನಡೆಯಲಿದೆ. 9 ವಲಯಗಳ ಕ್ರಿಕೆಟ್ ಸೀನಿಯರ್ ವಿಭಾಗದ 19 ತಂಡಗಳು, ಜೂನಿಯರ್ ವಿಭಾಗದ 6 ತಂಡಗಳು ಮತ್ತು ಮಹಿಳಾ ಥ್ರೋಬಾಲ್ನಲ್ಲಿ 9 ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ.
ಈ ಬಾರಿಯ ಟ್ರೋಫಿಯನ್ನು ಪಾನಿಕುಟ್ಟಿರ ಕುಟುಂಬಸ್ಥರು ಪ್ರಾಯೋಜಿಸಲಿದ್ದಾರೆ. ಕೊಡಗು ಹೆಗ್ಗಡೆ ಸಮಾಜದ ಉದಯೋನ್ಮುಖ ರಾಷ್ಟ್ರೀಯ ಅಥ್ಲೆಟ್ ಕಾಕೇರ ಪ್ರಜ್ವಲ್ ಮಂದಣ್ಣ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದು, ಇವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಗುವದು. ಹೆಗ್ಗಡೆ ಸಮಾಜ ಬಿಟ್ಟಂಗಾಲದಲ್ಲಿ ನಡೆದ ಕ್ರೀಡೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಪಡಿಜ್ಞಾರಂಡ ಜಿ. ಅಯ್ಯಪ್ಪ ವಹಿಸಿದ್ದರು. ಉಪಾಧ್ಯಕ್ಷ ಕೊರಕುಟ್ಟೀರ ಸರಾ ಚಂಗಪ್ಪ, ಕ್ರೀಡೋತ್ಸವ ಸಮಿತಿ ಅಧ್ಯಕ್ಷ ಪಡಿಜ್ಞಾರಂಡ ಪ್ರಭುಕುಮಾರ್, ಕಾರ್ಯದರ್ಶಿ ಚಂಗಚಂಡ ಕಟ್ಟಿ ಕಾವೇರಪ್ಪ, ಖಜಾಂಚಿ ಪಾನಿಕುಟ್ಟೀರ ಕುಟ್ಟಪ್ಪ, ನಿರ್ದೇಶಕರು ಹಾಜರಿದ್ದರು.