ಮಡಿಕೇರಿ: “ಸುಮಾರು 1000ಕ್ಕೂ ಹೆಚ್ಚು ಸಂಗ್ರಹಿಸಲ್ಪಟ್ಟ ಭಾವಚಿತ್ರಗಳು, ಅವರ ಜೀವನದ ಉಪಾಖ್ಯಾನಗಳು (ಚಿಟಿeಛಿಜoಣe) ಹಾಗೂ ಇನ್ನಿತರ ಮಾಹಿತಿಗಳ ಕಡತಗಳು ಕೋದಂಡ ಹಾಗೂ ಕೊಡಂದೇರ ಕುಟುಂಬದ ಸದಸ್ಯರುಗಳ ಸಹಾಯದಿಂದ ‘ಸನ್ನಿ ಸೈಡ್’ಗೆ ತರಲ್ಪಟ್ಟಿವೆ” ಎಂದು ಜನರಲ್ ತಿಮ್ಮಯ್ಯ ಅವರ ಮೊಮ್ಮಗ ಕೆ.ಸಿ. ಬೆಳ್ಳಿಯ್ಯಪ್ಪ ಅವರು ‘ಶಕ್ತಿ’ಗೆ ತಿಳಿಸಿದರು. ಇನ್ನು ಎಂಟು-ಒಂಬತ್ತು ತಿಂಗಳಿನಲ್ಲಿ ಸಾರ್ವಜನಿಕರ ವೀಕ್ಷಣೆಗೆ ತೆರೆಯಲ್ಪಡುವ ‘ಜನರಲ್ ತಿಮ್ಮಯ್ಯ ಸ್ಮಾರಕ’ವನ್ನು, ಅಲ್ಲಿ ನಡೆಯುತ್ತಿರುವ ಕೆಲಸವನ್ನು ಗಮನಿಸಲು ಇವರು ‘ಸನ್ನಿ ಸೈಡ್’ಗೆ ಇಂದು ಆಗಮಿಸಿದ್ದರು.
‘ಮ್ಯಾಕ್ಸ್‍ಗ್ರಿಡ್ ಸೆಕ್ಯೂರಿಕೋರ್’ ಕಂಪನಿಯ ನಿರ್ದೇಶಕರಾಗಿರುವ ಇವರು ಜನರಲ್ ತಿಮ್ಮಯ್ಯ ಸ್ಮಾರಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ‘ಸನ್ನಿ ಸೈಡ್’ ಅನ್ನು ‘‘ತಿಮ್ಮಯ್ಯ ಸ್ಮಾರಕವಾಗಿ ಪರಿವರ್ತನೆ ಮಾಡಲು ನಿರ್ಧರಿಸಿದ್ದಾಗ ನಾನು ಇಲ್ಲಿ ಬಂದಿದ್ದೆ. ನಂತರ ಹಲವಾರು ಸಂಪರ್ಕಗಳ ಮೂಲಕ ಸ್ಮಾರಕಕ್ಕೆ ಅಗತ್ಯವಿರುವ ವಸ್ತುಗಳನ್ನು ಪಡೆಯುವಲ್ಲಿ ‘ಬ್ಲ್ಯಾಕ್ ಪೆಬಲ್’
(ಮೊದಲ ಪುಟದಿಂದ) ಕಂಪನಿಯವರೊಡನೆ ಸಂಪರ್ಕದಲ್ಲಿದ್ದೆ. ಇದಾದನಂತರ ಇದೇ ಮೊದಲ ಬಾರಿಗೆ ನಾನು ಇಲ್ಲಿ ಬಂದಿರುವೆ. ಈ ಸ್ಮಾರಕವು ಸೊಗಸಾಗಿ ಮೂಡಿಬರುತ್ತಿದೆ. ಇಲ್ಲಿಯವರೆಗೆ ನಾನು ಯಾವದೊಂದು ನ್ಯೂನತೆಯನ್ನೂ ಗಮನಿಸಿರುವದಿಲ್ಲ. ಬಹಳ ಅಧಿಕೃತವಾಗಿ ಈ ಸ್ಮಾರಕ ಮೂಡಿಬರುತ್ತಿದೆ” ಎಂದರು.
ಜನರಲ್ ಅವರ ಪರಿವಾರದ ಸದಸ್ಯರಿಂದ ಸಂಗ್ರಹಿಸಿರುವ ಹಲವಾರು ಭಾವಚಿತ್ರಗಳು ತಿಮ್ಮಯ್ಯ ಸ್ಮಾರಕದಲ್ಲಿ ಕಂಗೊಳಿಸುತ್ತಿದ್ದು, ಈ ಚಿತ್ರಗಳು ಭಾರತದ ಐತಿಹಾಸಿಕ ಹಾಗೂ ರಾಜಕೀಯ ದೃಷ್ಟಿಕೋನ ವನ್ನು ತೆರೆದಿಡುತ್ತವೆ ಎಂದು ಬೆಳ್ಳಿಯ್ಯಪ್ಪ ಅವರು ಅಭಿಪ್ರಾಯಪಟ್ಟರು.
ಅವರ ತಾತÀ ಜನರಲ್ ತಿಮ್ಮಯ್ಯ ಅವರು ಕೇವಲ ತಮ್ಮ ಕುಟುಂಬಕ್ಕೆ ಸೀಮಿತವಾಗಿಲ್ಲದೆ ತಿಮ್ಮಯ್ಯ ಅವರು ಭಾರತ ದೇಶದ ಪ್ರಜೆಗಳಿಗೆ ಸೇರಿದ್ದ ವ್ಯಕ್ತಿಯಾಗಿದ್ದರು ಎಂದರು. ‘ಸನ್ನಿ ಸೈಡ್’ನಲ್ಲಿ ವಾಸವಿದ್ದ ನನ್ನ ಪರಿವಾರಕ್ಕೆ ಈ ಸ್ಮಾರಕವು ಭಾವನಾತ್ಮಕ ಸಂಗತಿಯಾಗಿರುತ್ತದೆ. ಇವತ್ತು ನಾನು ಕೂಡ ಈ ಸ್ಮಾರಕಕ್ಕೆ ಒಬ್ಬ ವೀಕ್ಷಕನಾಗಿ ಬಂದಿರುವೆ. ಈ ಸ್ಮಾರಕಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸಹಾಯವನ್ನು ನನ್ನ ಪರಿವಾರದ ಮೂಲಕ ಒದಗಿಸಲು ಸಿದ್ದನಿದ್ದೇನೆ ಎಂದರು.
ಜನರಲ್ ತಿಮ್ಮಯ್ಯ ಸ್ಮಾರಕ ವಸ್ತುಸಂಗ್ರಹಾಲಯದ ಕೆಲಸ ಪೂರ್ಣಗೊಳ್ಳಲು ಇನ್ನೂ 3 ತಿಂಗಳ ಸಮಯದ ಅಗತ್ಯವಿದೆ ಎಂದು ತಿಳಿಸಿದ ಬ್ಲ್ಯಾಕ್ ಪೆಬಲ್ (ಸ್ಮಾರಕದ ಜವಾಬ್ದಾರಿ ಹೊತ್ತಿರುವ ಕಂಪನಿ) ಸಂಸ್ಥೆಯ ಸಂಚಾಲಕ ನಿರ್ಮಲ್ ತಿಳಿಸಿದರು. ಸರಕಾರದಿಂದ ಇನ್ನೂ ಸುಮಾರು 1.5 ಕೋಟಿ ಹಣ ಮಂಜೂರಾತಿಗೆ ಬಾಕಿ ಇದೆ ಎಂದು ತಿಳಿಸಿದ ಅವರು, “ಜನರಲ್‍ರವರ ಜೀವನಕಥೆ ಹಾಗೂ ಅವರ ಸಾಹಸಗಳನ್ನು ತಿಳಿಸಲು ನಾವು ಕಟ್ಟುನಿಟ್ಟಿನ ಸಂಶೋಧನೆಯ ಮೂಲಕ, ತಿಮ್ಮಯ್ಯನವರ ಧ್ವನಿಗೆ ಹೊಂದಾಣಿಕೆಯಾಗುವಂತೆ ನಿರೂಪಣೆಯನ್ನು ರಚಿಸುತ್ತೇವೆ. ಈ ನಿರೂಪಣೆಯ ಸಹಾಯದಿಂದ ವೀಕ್ಷಕರು ಸ್ಮಾರಕವನ್ನು ಅನ್ವೇಷಿಸಬಹುದಾಗಿದೆ” ಎಂದು ಮಾಹಿತಿ ನೀಡಿದರು.
ಜನರಲ್ ತಿಮ್ಮಯ್ಯ ಸ್ಮಾರಕದಲ್ಲಿ ಪ್ರತಿಯೊಂದು ಕೋಣೆಯೂ ಜನರಲ್ ಅವರ ಜೀವನ ಚಕ್ರ, ಅವರು ಸೈನ್ಯ ಸೇರಲು ಕಾರಣವಾದ ಮುಖ್ಯ ಸಂಗತಿ, ಅವರು ಭಾಗಿಯಾಗಿದ್ದ ಯುದ್ಧದ ಕಥೆಗಳು... ಹೀಗೆ ಎಲ್ಲವನ್ನೂ ಸಂಗ್ರಹಿಸಲ್ಪಟ್ಟಿದೆ. ಮುಂದೆ, ಸ್ಮಾರಕದ ಬಳಿಯಲ್ಲೇ ತೆರೆಯಲ್ಪಡುವ ಕೆಫೆಯಲ್ಲಿ ಜನರಲ್ ತಿಮ್ಮಯ್ಯ ಅವರ ಜೀವನಕ್ಕೆ ಸಂಬಂಧಿಸಿದಂತೆ ಅನೇಕ ಸಂಗ್ರಹಣೆಗಳನ್ನು ಒದಗಿಸ ಲಾಗುವದೆಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನ ಸಂಚಾಲಕÀ ಮೇಜರ್ (ನಿವೃತ್ತ) ನಂಜಪ್ಪ ಅವರು ತಿಳಿಸಿದರು.