ಸೋಮವಾರಪೇಟೆ, ಏ. 13: ಗೋಣಿಮರೂರು ಗ್ರಾಮದ ಎರಪಾರೆಯ ಸ್ಪೂರ್ತಿ ಯುವಕ ಸಂಘದವರು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಕುರ್ಚಿ ಸೇರಿದಂತೆ ಮಕ್ಕಳಿಗೆ ಪೀಠೋಪ ಕರಣ ಉಚಿತವಾಗಿ ನೀಡಿದರು.

ನಿವೃತ್ತ ಶಿಕ್ಷಕ ಎನ್.ಕೆ. ಮೋಹನ್ ಕುರ್ಚಿಗಳನ್ನು ವಿತರಿಸಿದರು. ಈ ಸಂದರ್ಭ ಯುವಕ ಸಂಘದ ಅಧ್ಯಕ್ಷ ಬಿ.ಜಿ. ಹರೀಶ್, ಕಾರ್ಯದರ್ಶಿ ಯಶ್ವಂತ್, ಖಜಾಂಚಿ ಜಿ.ಪಿ. ಪ್ರಶಾಂತ್, ಪದಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.