ಗೋಣಿಕೊಪ್ಪ ವರದಿ, ಏ. 12 : ಅನುಮತಿ ಇಲ್ಲದೆ ಸಾಗಿಸುತ್ತಿದ್ದ ಕಾಂಗ್ರೆಸ್ ಪಕ್ಷದ ಪ್ರಚಾರದ ವಸ್ತುಗಳನ್ನು ಚುನಾವಣಾ ಅಧಿಕಾರಿಗಳ ತಂಡ ವಶ ಪಡಿಸಿಕೊಂಡಿದೆ.
ಮೈಸೂರುವಿನಿಂದ ಪೊನ್ನಂಪೇಟೆ ಕಡೆಗೆ ಸಾಗಿಸುತ್ತಿದ್ದ ಸಂದರ್ಭ ಆನೆಚೌಕೂರು ಗೇಟ್ ಬಳಿ ತಪಾಸಣೆ ನಡೆಸಿದಾಗ ಅನುಮತಿ ಇಲ್ಲದೆ ಸಾಗಣೆ ಮಾಡುತ್ತಿರುವದು ಪತ್ತೆಯಾಗಿದೆ. ಇದರಂತೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಪ್ರಚಾರದ ವಸ್ತುಗಳನ್ನು ಪೊನ್ನಂಪೇಟೆ ಪೊಲೀಸರು ವಶ ಪಡಿಸಿಕೊಂಡು ಕ್ರಮಕೈಗೊಂಡಿದ್ದಾರೆ.
ಚುನಾವಣಾ ತನಿಖಾ ತಂಡದ ಅಧಿಕಾರಿ ಮೋಹನ್ ಹಾಗೂ ತಂಡ ತಪಾಸಣೆ ನಡೆಸಿ ಪೊನ್ನಂಪೇಟೆ ಪೊಲೀಸರಿಗೆ ಒಪ್ಪಿಸಿದರು.
ಸಾಮಗ್ರಿಗಳನ್ನು ಬೆಲೆನೋ ಕಾರ್‍ನಲ್ಲಿ ಸಾಗಿಸುತ್ತಿದ್ದಾಗ ವಶಕ್ಕೆ ಪಡೆಯಲಾಗಿದ್ದು, ಕಣ್ಣೂರು ಜಿಲ್ಲೆಯ ಅಕಿಲ್ (23), ಅಕ್ಷಯ್ (21) ಸಮಖ್ (27) ವಿರುದ್ದ ಪ್ರಕರಣ ದಾಖಲಾಗಿದೆ. ಕಾರ್‍ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ 170 ಬಾವುಟ, 800 ಟೋಪಿ, 12,000 ಚೀಟಿ, 1700 ಬಂಟಿಂಗ್ಸ್, 150 ಕರಪತ್ರ, 300 ಪೋಸ್ಟರ್ ವಶಕ್ಕೆ ಪಡೆಯಲಾಗಿದೆ. ಇದನ್ನು ಕೇರಳಕ್ಕೆ ಸಾಗಣೆ ಮಾಡುತ್ತಿದ್ದಾಗ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.