ಸಿದ್ದಾಪುರ, ಏ. 13: ಕಾಡಾನೆಗಳ ಉಪಟಳದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಎರಡು ಹೆಣ್ಣು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವಲ್ಲಿ ಯಶಸ್ವಿಯಾಯಿತು.

ಬಾಡಗ ಬಾಣಂಗಾಲ ಗ್ರಾಮದ ಮರ್ಗೋಲ್ಲ್ಲಿ ಕಾಫಿ ತೋಟ ಹಾಗೂ ಸಮೀಪದ ಅರಣ್ಯ ಪ್ರದೇಶದ ಬಳಿ ಸುತ್ತಾಡುತ್ತಿದ್ದ ಕಾಡಾನೆಗಳ ಹಿಂಡಿನ ಪೈಕಿ ಅಂದಾಜು ಮೂವತ್ತೈದು ವರ್ಷ ಪ್ರಾಯದ ಎರಡು ಹೆಣ್ಣು ಕಾಡಾನೆಗಳನ್ನು ಸಾಕಾನೆಗಳ ನೆರವಿನಿಂದ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸಲಾಯಿತು. ಸಾಕಾನೆಗಳಾದ ಕೃಷ,್ಣ ಅಭಿಮನ್ಯು ಮತ್ತು ಭೀಮಾ ಪಾಲ್ಗೊಂಡಿದ್ದವು.

ಕಾರ್ಯಾಚರಣೆಯಲ್ಲಿ ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತರಾಜ್, ತಿತಿಮತಿ ಎ.ಸಿ.ಎಫ್ ಶ್ರೀಪತಿ, ಅರ್.ಎಫ್.ಒ ಅಶೋಕ್, ಉಪ ವಲಯ ಅರಣ್ಯಾಧಿಕಾರಿ ಕಳ್ಳೀರ ದೇವಯ್ಯ ಡಾ. ಮುಜೀಬ್, ಆರ್.ಆರ್.ಟಿ ತಂಡದ ಸಂಜು ಹಾಗೂ ಇತರರು ಭಾಗವಹಿಸಿದ್ದರು.

-ಚಿತ್ರ ವರದಿ : ವಾಸು ಸಿದ್ದಾಪುರ