ಮಡಿಕೇರಿ, ಏ. 13: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್. ವಿಜಯಶಂಕರ್ ಅವರು ಈ ಹಿಂದೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಜಿಲ್ಲೆಯ ಅಭಿವೃದ್ಧಿಗೆ ನೀಡಿದ ಕೊಡುಗೆ ಏನು ಎಂಬದನ್ನು ಮೊದಲು ಸಾಬೀತುಪಡಿಸಲಿ ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಸವಾಲೆಸೆದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ, ಸಿ.ಹೆಚ್. ವಿಜಯಶಂಕರ್ ಅವರು, ಅರಣ್ಯ ಸಚಿವರಾಗಿ ಕೊಡಗು ಜಿಲ್ಲಾ ಉಸ್ತುವಾರಿ ಸ್ಥಾನದಲ್ಲಿ ಕಾರ್ಯ ನಿರ್ವಹಿಸಿದ್ದರು. ಅದೊಂದು ಪ್ರಭಾವಿ ಖಾತೆಯಾಗಿದ್ದರೂ ಮತ್ತು ಉಸ್ತುವಾರಿ ಜವಾಬ್ದಾರಿ ಹೊಂದಿದ್ದರೂ ಜಿಲ್ಲೆಗೆ ಯಾವದೇ ಲಾಭವನ್ನು ಮಾಡಿಕೊಡದವರು ಇದೀಗ ಸಂಸದರಾಗಿ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಬಿಜೆಪಿ ಅಭ್ಯರ್ಥಿಯನ್ನು ಟೀಕಿಸುವ ಮೊದಲು ತಾವು ಮಾಡಿರುವ ಸಾಧನೆಯನ್ನು ಮೊದಲು ಬಹಿರಂಗಪಡಿಸಲಿ ಎಂದರು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಅಲೆ ವ್ಯಾಪಕವಾಗಿದ್ದು, ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಗೆಲವು ನಿಶ್ಚಿತವಾಗಿದೆ. ಕೇಂದ್ರ ಸರ್ಕಾರ ಹಗರಣ ಮುಕ್ತ ಆಡಳಿತವನ್ನು ನೀಡುವ ಮೂಲಕ ಜನ ಮೆಚ್ಚುಗೆಯನ್ನು ಗಳಿಸಿದೆ. ಆದರೆ, ರಾಜ್ಯದ ಮೈತ್ರಿ ಸರ್ಕಾರದ ಅವಧಿಯಲ್ಲಿ ವಿಧಾನಸೌಧದಲ್ಲಿ ಲಕ್ಷ ಲಕ್ಷ ಹಣ ದೊರೆತಿದೆ. ದೇಶದ ಸುಭದ್ರತೆಯ ಅನಿವಾರ್ಯತೆಯ ಕಾಲ ಇದಾಗಿದ್ದು, ಮೋದಿಯವರ ಕೈಯನ್ನು ಬಲಪಡಿಸಲು ಬಿಜೆಪಿ ಅಭ್ಯರ್ಥಿಯನ್ನು ಜನರು ಬೆಂಬಲಿಸಲಿದ್ದಾರೆ ಎಂದರು.

ರಸ್ತೆ ಮತ್ತು ಚರಂಡಿ ನಿರ್ಮಾಣವನ್ನು ಸ್ಥಳೀಯ ಸಂಸ್ಥೆಗಳು ಮಾಡುತ್ತವೆ. ಮೂಲಭೂತ ಸೌಲಭ್ಯ ಒದಗಿಸುವದು ಸಂಸದರ ಕೆಲಸವಲ್ಲ. ಲೋಕಸಭಾ ಸದಸ್ಯ ಸ್ಥಾನದ ಘನತೆಗೆ ತಕ್ಕಂತೆ ಪ್ರತಾಪ ಸಿಂಹ ಕಾರ್ಯ ನಿರ್ವಹಿಸಿದ್ದಾರೆ. ಮಹಿಳೆÉಯರು ಮತ್ತು ಯುವ ಮತದಾರರ ಒಲವು ಗಳಿಸಿಕೊಂಡಿದ್ದಾರೆ.

ಕೊಡಗಿನಲ್ಲಿ 75 ಸಾವಿರಕ್ಕೂ ಅಧಿಕ ಮತಗಳ ಅಂತರವನ್ನು ಪ್ರತಾಪ ಸಿಂಹ ಅವರಿಗೆ ಜನ ನೀಡಲಿದ್ದಾರೆ ಎಂದು ಸುನಿಲ್ ಸುಬ್ರಮಣಿ ವಿಶ್ವಾಸ ವ್ಯಕ್ತಪಡಿಸಿದರು.

ಸುಮಾರು 545 ಸದಸ್ಯರು ಲೋಕಸಭೆಯನ್ನು ಪ್ರತಿನಿಧಿಸುತ್ತಿದ್ದು, ಪ್ರತಿಯೊಬ್ಬರಿಗೂ ಸಂಸತ್‍ನಲ್ಲಿ ಮಾತನಾಡಲು ಅವಕಾಶ ಸಿಗುವದು ಕಷ್ಟ ಸಾಧ್ಯ. ಇಂತಹ ಪರಿಸ್ಥಿತಿಯಲ್ಲಿ ಸುಮಾರು 20 ನಿಮಿಷಗಳ ಕಾಲ ಕೊಡಗಿನ ಮಳೆ ಹಾನಿ ನಷ್ಟದ ಕುರಿತು ಪ್ರತಾಪ ಸಿಂಹ ಅವರು ಪರಿಣಾಮಕಾರಿಯಾಗಿ ಸರ್ಕಾರದ ಗಮನ ಸೆಳೆÉದಿದ್ದಾರೆಂದು ಸುನಿಲ್ ಸಮರ್ಥಿಸಿಕೊಂಡರು.

ಪಕ್ಷದ ಜಿಲ್ಲಾ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ ಮಾತನಾಡಿ, ವಿಜಯಶಂಕರ್ ಅವರು, ಅರಣ್ಯ ಸಚಿವರಾಗಿದ್ದಾಗ ಜಿಲ್ಲೆÉಯ ಶಾಸಕರು ಹಾಗೂ ಜನರ ಅಭಿ ಪ್ರಾಯಕ್ಕೆ ವಿರುದ್ಧವಾಗಿ ಗಾಡ್ಗಿಲ್ ವರದಿ ಹಾಗೂ ಸೂಕ್ಷ್ಮ ಪರಿಸರ ವಲಯದ ಪ್ರಸ್ತಾಪಕ್ಕೆ ಬೆಂಬಲ ಸೂಚಿಸಿದ್ದರು, ಇವರು ಕೊಡಗಿನ ಶತ್ರು ಎಂದು ಆರೋಪಿಸಿದರು.

ಪ್ರಧಾನ ಕಾರ್ಯದರ್ಶಿ ನಾಪಂಡ ರವಿ ಕಾಳಪ್ಪ ಮಾತನಾಡಿ, ಪ್ರತಾಪ ಸಿಂಹ ಅವರು ಕಳೆದ 5 ವರ್ಷಗಳಲ್ಲಿ ಜಿಲ್ಲೆಯ ಅಭಿವೃದ್ಧಿಗಾಗಿ ಹಂಚಿಕೆ ಮಾಡಿರುವ ಅನುದಾನದ ಬಗ್ಗೆ ಬಹಿರಂಗವಾಗಿ ಅಧಿಕೃತ ಪ್ರಕಟಣೆ ನೀಡಿದ್ದಾರೆ. ಆದರೂ ಮೈತ್ರಿ ಪಕ್ಷದ ಮಂದಿ ಪ್ರತಾಪ ಸಿಂಹ ಏನು ಮಾಡಿದ್ದಾರೆಂದು ಪ್ರಶ್ನಿಸುತ್ತಲೇ ಇದ್ದಾರೆ. ಈ ಪ್ರಶ್ನೆಗೆ ಚುನಾವಣೆಯ ಸಂದರ್ಭ ಜಿಲ್ಲೆಯ ಜನರೇ ಸರಿಯಾದ ಉತ್ತರ ನೀಡಲಿದ್ದಾರೆ ಎನ್ನುವ ವಿಶ್ವಾಸ ವ್ಯಕ್ತಪÀಡಿಸಿದರು.

ಗೋಷ್ಠಿಯಲ್ಲಿ ಪ್ರಮುಖರಾದ ಉಮೇಶ್ ಸುಬ್ರಮಣಿ, ಮನು ಮಂಜುನಾಥ್ ಹಾಗೂ ನಗರಾಧ್ಯಕ್ಷ ಮಹೇಶ್ ಜೈನಿ ಉಪಸ್ಥಿತರಿದ್ದರು.