ಶನಿವಾರಸಂತೆ, ಏ. 12: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಪಶೆಟ್ಟಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ಗಾಳಿ - ಮಳೆಗೆ ಮನೆಯೊಂದಕ್ಕೆ ಹಾನಿ ಉಂಟಾಗಿದೆ ಎಂದು ಶನಿವಾರಸಂತೆ ನಾಡಕಚೇರಿಗೆ ಮನೆಯ ಮಾಲೀಕ ಅರ್ಜಿ ನೀಡಿದ್ದಾರೆ.
ಶನಿವಾರಸಂತೆ ಸುತ್ತಮುತ್ತ ಭಾರೀ ಗಾಳಿ, ಗುಡುಗು, ಆಲಿಕಲ್ಲು ಸಹಿತ ಜೋರಾಗಿ ಸುರಿದ ಮಳೆಗೆ ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಅಪ್ಪಶೆಟ್ಟಳ್ಳಿ ಗ್ರಾಮದ ಬೆಳೆಗಾರ ಎ.ಡಿ. ಕೊಮಾರಪ್ಪ ಅವರ ವಾಸದ ಮನೆಯ ಶೀಟುಗಳು ಹಾರಿ ಹೋಗಿದ್ದು, ಹಂಚು ಸಮೇತ ಹಾನಿಗೊಂಡಿದೆ. ಸ್ಥಳಕ್ಕೆ ಕಂದಾಯ ಪರಿವೀಕ್ಷಕ ನಂದಕುಮಾರ್, ಗ್ರಾಮಲೆಕ್ಕಿಗ ಮಂಜುನಾಥ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.