ಸಿದ್ದಾಪುರ, ಏ. 13: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸಿ.ಹೆಚ್. ವಿಜಯಶಂಕರ್ ಪರವಾಗಿ ನೆಲ್ಲಿಹುದಿಕೇರಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ ಗಣೇಶ್ ಮತಯಾಚನೆಗೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಅಭ್ಯರ್ಥಿ ವಿಜಯಶಂಕರ್ ಪರ ಜಿಲ್ಲೆಯಾದ್ಯಂತ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮತಯಾಚನೆ ಮಾಡುತ್ತಿದ್ದು ಅತ್ಯಧಿಕ ಮತಗಳಿಂದ ವಿಜಯಶಂಕರ್ ಗೆಲವು ಸಾಧಿಸಲಿದ್ದಾರೆ.
ಸಂಸದ ಪ್ರತಾಪ್ ಸಿಂಹ ಕಳೆದ ಚುನಾವಣೆಯಲ್ಲಿ ಗೆದ್ದ ನಂತರವೂ ಜಿಲ್ಲೆಗೆ ಯಾವದೇ ರೀತಿಯ ಯೋಜನೆಗಳನ್ನು ತರದೇ ಶೂನ್ಯ ಸಾಧನೆ ಮಾಡಿದ್ದಾರೆ. ಈ ಬಾರಿ ಅಭಿವೃದ್ಧಿಗಾಗಿ ವಿಜಯಶಂಕರ್‍ಗೆ ಮತ ನೀಡಲು ಮನವಿ ಮಾಡಿದರು.
ಈ ಸಂದರ್ಭ ವಲಯ ಕಾಂಗ್ರೆಸ್ ಅಧ್ಯಕ್ಷ ಸಾಬು ವರ್ಗೀಸ್, ಕಾರ್ಯದರ್ಶಿ ಶಶಿಕುಮಾರ್, ತಾಲೂಕು ಪಂಚಾಯಿತಿ ಸದಸ್ಯೆ ಸುಹಾದ ಅಶ್ರಫ್, ಗ್ರಾ.ಪಂ. ಉಪಾಧ್ಯಕ್ಷೆ ಸಫಿಯಾ ಮಹಮ್ಮದ್, ಮಾಜಿ ಅಧ್ಯಕ್ಷ ಎ.ಕೆ. ಹಕೀಂ, ಸಯ್ಯದ್ ಬಾವ, ಚೆಟ್ಟಳ್ಳಿಯ ಡೆನ್ನಿ ಬರೋಸ್, ಸಿಹಾಬ್, ಗ್ರಾ.ಪಂ. ಸದಸ್ಯರುಗಳಾದ ಹನೀಫ, ಅಫ್ಸಲ್, ಶುಕೂರ್, ಮೇರಿ ಸೇರಿದಂತೆ ಕಾಂಗ್ರೆಸ್ ಮತ್ತು ಜೆ.ಡಿ.ಎಸ್.ನ ಕಾರ್ಯಕರ್ತರು ಇದ್ದರು.