ವೀರಾಜಪೇಟೆ, ಏ. 12: ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರೋವರ್ಸ್ ಮತ್ತು ರೇಂಜರ್ಸ್ ಘಟಕ ಮತ್ತು ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಸಂಸ್ಥೆ ಶ್ರೀ ಭಗವತಿ ದೇವಸ್ಥಾನ ಸಹಯೋಗದಲ್ಲಿ ಎಂ. ಬಾಡಗದಲ್ಲಿ ಪರಿಸರ ಅಧ್ಯಯನ ಶಿಬಿರ ಆಯೋಜಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿ ಪ್ರತಿಮ್ ಕುಮಾರ್ ವಿವರವನ್ನು ತಿಳಿಸಿದರು. ಸಂಪನ್ಮೂಲ ವ್ಯಕ್ತಿ ಹರೀಶ್ ಮತ್ತು ಹರ್ಷ ಮಂದಣ್ಣ ಮಾತನಾಡಿದರು. ಈ ಸಂದರ್ಭ ಸ್ಕೌಟ್ಸ್-ಗೈಡ್ಸ್ ಜಿಲ್ಲಾ ಸಂಸ್ಥೆ ಪ್ರಧಾನ ಆಯುಕ್ತ ಕಂಬಿರಂಡ ಕಿಟ್ಟು ಕಾಳಪ್ಪ, ಜಿಲ್ಲಾ ಸಂಘಟಕಿ ದಮಯಂತಿ, ರೋವರ್ ಲೀಡರ್ ವನಿತ್‍ಕುಮಾರ್ , ರೇಂಜರ್ ಲೀಡರ್ ರಾಖಿ ಪೂವಣ್ಣ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.