ಮಡಿಕೇರಿ, ಏ. 13: ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ವತಿಯಿಂದ ಬೇಸಿಗೆ ರಜದಲ್ಲಿ ಗಂಡು ಮಕ್ಕಳಿಗಾಗಿ ಮೌಲ್ಯವರ್ಧನಾ ಕಾರ್ಯಾಗಾರ - ‘ವಸಂತ ವಿಹಾರ’ ಎಂಬ ಕಾರ್ಯಕ್ರಮವನ್ನು ತಾ. 21 ರಿಂದ 28ರವರೆಗೆ ಹಮ್ಮಿಕೊಳ್ಳಲಾಗಿದೆ.ಆಶ್ರಮದಲ್ಲಿ ನಿರ್ಮಿಸಲಾಗಿರುವ ವಿಶ್ವ ಭಾವೈಕ್ಯ ಮಂದಿರವನ್ನು ನಿರ್ಮಿಸಲಾಗಿದ್ದು, ಈ ದೇವಾಲ ಯವನ್ನು ಕೇಂದ್ರವಾಗಿಟ್ಟು ಕೊಂಡು ಹಲವಾರು ಸೇವಾ ಕಾರ್ಯಕ್ರಮ ಗಳನ್ನು ನಡೆಸಲಾಗುತ್ತಿದೆ. ಇದರಂತೆ ಈ ಶಿಬಿರ ಏರ್ಪಡಿಸಲಾಗುತ್ತಿದ್ದು, ಪರಸ್ಥಳದಿಂದ ಪೊನ್ನಂಪೇಟೆಯಲ್ಲಿ ವಸಂತ ವಿಹಾರ (ಮೊದಲ ಪುಟದಿಂದ) ಬರುವ ಮಕ್ಕಳಿಗೆ ಯೋಗಾಸನ, ಪ್ರಾಣಾಯಾಮ, ಏಕಾಗ್ರತೆಯನ್ನು ಬೆಳೆಸಿಕೊಳ್ಳುವ ವಿಧಾನ, ವ್ಯಕ್ತಿತ್ವ ವಿಕಾಸ, ಮೌಲ್ಯ ಶಿಕ್ಷಣ, ಪ್ರಾರ್ಥನೆ ಮುಂತಾದವುಗಳನ್ನು ಹೇಳಿಕೊಡಲಾಗುವದು. ಇದಕ್ಕಾಗಿ ವಸತಿ ರಹಿತವಾಗಿ ಹಾಗೂ ವಸತಿ ಸಹಿತವಾಗಿ ನಿಗದಿತ ಶುಲ್ಕದೊಂದಿಗೆ ತಾ. 20ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಆಶ್ರಮದ ಅಧ್ಯಕ್ಷ ಬೋಧ ಸ್ವರೂಪಾನಂದ ಅವರು ತಿಳಿಸಿದ್ದಾರೆ.