ಮೂರ್ನಾಡು, ಏ. 13: ಮೂರ್ನಾಡು ವಿದ್ಯಾಸಂಸ್ಥೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡೆ ಮತ್ತು ಆಟೋಟ ಅಕಾಡೆಮಿ ವತಿಯಿಂದ ಬೇಸಿಗೆ ಕ್ರೀಡಾ ಶಿಬಿರಕ್ಕೆ ಚಾಲನೆ ನೀಡಲಾಯಿತು.
ವಿದ್ಯಾಸಂಸ್ಥೆ ಆಟದ ಮೈದಾನದಲ್ಲಿ 21 ದಿನಗಳ ಕಾಲ ಆಯೋಜಿಸಲಾಗಿರುವ ಹಾಕಿ, ಕ್ರಿಕೆಟ್ ಮತ್ತು ಹ್ಯಾಂಡ್ ಬಾಲ್ ತರಬೇತಿ ಶಿಬಿರಕ್ಕೆ ಮೂರ್ನಾಡು ವಿದ್ಯಾಸಂಸ್ಥೆ ಉಪಾಧ್ಯಕ್ಷ ಪುದಿಯೊಕ್ಕಡ ಸಿ. ಸುಬ್ರಮಣಿ ಉದ್ಘಾಟಿಸಿ ಚಾಲನೆ ನೀಡಿದರು. ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡೆ ಮತ್ತು ಆಟೋಟ ಅಕಾಡೆಮಿ ನಿರ್ದೇಶಕ ಪೆಮ್ಮುಡಿಯಂಡ ವೇಣು ಅಪ್ಪಣ್ಣ ಮಾತನಾಡಿ, ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಶಿಸ್ತು ಮೈಗೂಡಿಸಿ ಕೊಂಡಾಗ ಸಾಧನೆ ಮಾಡಲು ಸಾಧ್ಯ. ಶಿಬಿರದಲ್ಲಿ ಕ್ರೀಡೆಗಳ ಮೂಲ ಕಲೆ ಗಳನ್ನು ಕಲಿಸಿಕೊಡ ಲಾಗುತ್ತದೆ. ಇಂತಹ ಶಿಬಿರಗಳನ್ನು ಎಲ್ಲ ಮಕ್ಕಳು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭ ತರಬೇತುದಾರ ಅವರೆಮಾದಂಡ ಜಿ. ಗಣೇಶ್, ಅವರೆಮಾದಂಡ ಪಚ್ಚು ಕುಶಾಲಪ್ಪ, ಮಂಜುನಾಥ್, ಕಂಬೀರಂಡ ಬೋಪಣ್ಣ, ರಾಕೇಶ್, ಸೀತಾರಾಮ್, ನಾಗೇಶ್ ಇನ್ನಿತರರು ಹಾಜರಿದ್ದರು.