ಶನಿವಾರಸಂತೆ, ಏ. 13: ಸ್ಥಳೀಯ ರೋಟರಿ ಸಂಸ್ಥೆ ಹೋಬಳಿಯ ವಿವಿಧೆಡೆ ಮಾರ್ಗಸೂಚನಾ ಫಲಕ ಅಳವಡಿಸಿದೆ. ಗುಂಡೂರಾವ್ ಬಡಾವಣೆಯ ಅಂಗನವಾಡಿ ಕೇಂದ್ರದ ಗೋಡೆಗಳಲ್ಲಿ ಸುಂದರ ಚಿತ್ರಗಳನ್ನು ಬಿಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.

ಸಮುದಾಯ ಆರೋಗ್ಯ ಕೇಂದ್ರದ ಸಹಭಾಗಿತ್ವದಲ್ಲಿ ರೋಟರಿ ಸಂಸ್ಥೆ ಪಟ್ಟಣದಲ್ಲಿರುವ 60 ವರ್ಕ್‍ಶಾಪ್‍ಗಳ 150 ಕಾರ್ಮಿಕರಿಗೆ ಉಚಿತವಾಗಿ ಟೆಟಾನಸ್‍ಟಿಕ್ಸಾಯ್ಡ್ ಚುಚ್ಚು ಮದ್ದು ಹಾಕುವ ಕಾರ್ಯಕ್ರಮವನ್ನೂ ಯಶಸ್ವಿಯಾಗಿ ನೆರವೇರಿಸಿತು. ಯಶಸ್ವಿ ಕಲ್ಯಾಣ ಮಂಟಪದಲ್ಲಿ ನಡೆದ ಪದಾಧಿಕಾರಿಗಳೊಂದಿಗೆ ಸೌಹಾರ್ದ ಸಮಾರಂಭವನ್ನು ರೋಟರಿ ಜಿಲ್ಲಾ ಗವರ್ನರ್ ಪಿ. ರೋಹಿನಾಥ್ ಉದ್ಘಾಟಿಸಿದರು.

ಸಂಸ್ಥೆಯಲ್ಲಿ ತತ್ವ ಸಿದ್ಧಾಂತ, ನಂಬಿಕೆ ಮುಖ್ಯವಾಗಿರುತ್ತದೆ. ಹೃದಯ ಶ್ರೀಮಂತಿಕೆ ಮುಖ್ಯವಾಗಿದ್ದು, ಸಮಾಜದ ಋಣ ತೀರಿಸುವ ಸೇವೆ ಮಾಡಬೇಕು ಎಂದು ಅವರು ಹೇಳಿದರು.

ಸಹಾಯಕ ಗವರ್ನರ್ ಧರ್ಮಪುರ ನಾರಾಯಣ್ ಹಾಗೂ ವಲಯ ಅಧಿಕಾರಿ ಭರತ್ ಭೀಮಯ್ಯ ಮಾತನಾಡಿದರು. ಈ ಸಂದರ್ಭ ಪಶುವೈದ್ಯಾಧಿಕಾರಿ ಡಾ. ನಾಗರಾಜ್ ಹಾಗೂ ವಾಣಿಜ್ಯೋದ್ಯಮಿ ಕಾಂತರಾಜ್ ಅವರನ್ನು ಸನ್ಮಾನಿಸಲಾಯಿತು. ಶನಿವಾರಸಂತೆ ರೋಟರಿ ಅಧ್ಯಕ್ಷ ಟಿ.ಆರ್. ಪುರುಷೋತ್ತಮ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯದರ್ಶಿ ಎ.ಡಿ. ಮೋಹನ್ ಕುಮಾರ್ ನಿಯೋಜಿತ ಅಧ್ಯಕ್ಷ ಶುಭ, ಸದಸ್ಯರಾದ ವಸಂತಕುಮಾರ್, ಅರವಿಂದ್, ಸಾಗರ್ ಚಂದನ್, ಶ್ವೇತಾ, ಬೀನಾ, ವನಿತಾ, ಪುಷ್ಪಾ, ಸೋಮವಾರಪೇಟೆ ಹಾಗೂ ಕುಶಾಲನಗರ ರೋಟರಿ ಅಧ್ಯಕ್ಷರುಗಳು, ಸದಸ್ಯರು, ಜಿ.ಎಸ್.ಆರ್. ನಾಗೇಶ್, ಡಾ. ಪ್ರಶಾಂತ್, ವಿಶ್ವನಾಥ್, ಪಿ.ಕೆ. ರವಿ ಉಪಸ್ಥಿತರಿದ್ದರು.