ಹೆಬ್ಬಾಲೆ, ಏ. 12: ಸೋಮವಾರಪೇಟೆ ತಾಲೂಕಿನ ಹೆಬ್ಬಾಲೆ ಗ್ರಾಮದಲ್ಲಿ ಯುಗಾದಿ ಹಬ್ಬದ ಹೊಸ ಸಂವತ್ಸರದ ಅಂಗವಾಗಿ ಆಯೋಜಿಸಿದ್ದ ರೈತರ ಜನಪದ ಸಂಸ್ಕೃತಿಯ ಪ್ರತೀಕವಾದ ಹೊನ್ನಾರು ಉತ್ಸವ (ಚಿನ್ನದ ಉಳುಮೆ) ಮೇಳೈಸಿತು.
ರೈತರು ತಮ್ಮ ಎತ್ತು, ಕರುಗಳು, ರಾಸುಗಳನ್ನು ವಸ್ತ್ರಾಂಲಕಾರದಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಿ ಕೃಷಿ ಪರಿಕರಗಳಾದ ನೇಗಿಲು, ನೊಗ, ಎತ್ತಿನಗಾಡಿ ಇತ್ಯಾದಿ ಹತ್ಯಾರುಗಳಿಗೆ ಪೂಜೆ ಸಲ್ಲಿಸಿದರು.
ಹೆಬ್ಬಾಲೆ ಗ್ರಾಮದ ಬಸವೇಶ್ವರ ಯುವಕ ಸಂಘ ಮತ್ತು ಬನಶಂಕರಿ ದೇವಸ್ಥಾನ ಸಮಿತಿ ಆಶ್ರಯದಲ್ಲಿ ನಡೆದ ಉತ್ಸವದಲ್ಲಿ ಗ್ರಾಮದ ಬಸವೇಶ್ವರ ದೇವಸ್ಥಾನದ ಬಳಿ ಜಾನುವಾರುಗಳಿಗೆ ಅರ್ಚಕ ಜಗದೀಶ್ ಸಾಮೂಹಿಕ ಪೂಜೆ ಸಲ್ಲಿಸಿದರು. ನಂತರ ಹೊಸ ಪಂಚಾಂಗದಂತೆ ಗ್ರಾಮದ ರೈತ ಹೆಚ್.ಜೆ. ಸುದರ್ಶನ್ ಅವರು ನೇಗಿಲು ಮತ್ತು ಭೂಮಿಗೆ ಪೂಜೆ ಸಲ್ಲಿಸಿ ‘ಹೊನ್ನಾರು’ (ಚಿನ್ನದ ಉಳುಮೆ) ಹೂಡಿ ವರ್ಷಧಾರೆ ಉಳುಮೆಗೆ ಚಾಲನೆ ನೀಡಿದರು.
ಬಸವೇಶ್ವರ ದೇವಸ್ಥಾನದಿಂದ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಹೊರಟ ಹೊನ್ನಾರುಗಳು ಗ್ರಾಮದ ಬನಶಂಕರಿ ದೇವಿಗೆ ಪ್ರದಕ್ಷಿಣೆ ಹಾಕಿ ಉಳುಮೆ ಆರಂಭಿಸಿದರು. ನಂತರ ರೈತರು ತಮ್ಮ ತಮ್ಮ ಜಮೀನಿಗೆ ತೆರಳಿ ಉಳುಮೆ ಆರಂಭಿಸಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಹೆಚ್.ಎನ್. ಬಸವರಾಜ್, ಕಾರ್ಯದರ್ಶಿ ಹೆಚ್.ಪಿ. ರಾಜಪ್ಪ, ಖಜಾಂಚಿ ಹೆಚ್.ಎಸ್. ಬಸಪ್ಪ, ಉಪಾಧ್ಯಕ್ಷ ರಮೇಶ್, ಸೋಮಣ್ಣ, ಕಾಂತರಾಜ್, ಶಶಿಧರ್, ಸ್ವಾಮಿ, ಚಂದ್ರಪ್ಪ, ಲೋಕೇಶ್ , ಜಿ.ಪಂ. ಸದಸ್ಯ ಎಚ್.ಆರ್. ಶ್ರೀನಿವಾಸ್, ಗ್ರಾ.ಪಂ. ಅಧ್ಯಕ್ಷೆ ಲತಾ ಸತೀಶ್ ಹಾಗೂ ಪಂಚಾಯಿತಿ ಸದಸ್ಯರು, ದೇವಸ್ಥಾನ ಸಮಿತಿ ಸದಸ್ಯರು ಹಾಜರಿದ್ದರು.
ಬಹುಮಾನ ವಿತರಣೆ : ಹೊನ್ನಾರು ಉತ್ಸವದಲ್ಲಿ ಜಾನುವಾರುಗಳಿಗೆ ಉತ್ತಮವಾಗಿ ಅಲಂಕಾರ ಮಾಡಿಕೊಂಡು ಪಾಲ್ಗೊಂಡಿದ್ದ ರೈತರಾದ ಹಳಗೋಟೆ ಜಗದೀಶ್‍ಗೆ ಪ್ರಥಮ ಬಹುಮಾನ, ಚಿಕ್ಕಹಳ್ಳಿ ಬೀದಿ ಚನ್ನರಾಜು ದ್ವಿತೀಯ, ಮರೂರು ಶಿವಕುಮಾರ್‍ಗೆ ತೃತೀಯ ಬಹುಮಾನವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಹೆಚ್.ಎಸ್. ಯುವರಾಜ್ ವಿತರಿಸಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜು ಹಾಗೂ ಪದಾಧಿಕಾರಿಗಳು ಇದ್ದರು.ವೀರಾಜಪೇಟೆ: ಯುಗಾದಿ ಹಬ್ಬದ ಆಚರಣೆಯಲ್ಲಿ ಹಿಂದೂ ಪರ ಸಂಘಟನೆಗಳಿಂದ ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮಾಚಂದ್ರನ ಭವ್ಯ ದೇಗುಲ ಶೀಘ್ರ ನಿರ್ಮಾಣದ ಸಂಕಲ್ಪ ದಿನ ಆಚರಿಸಲಾಯಿತು.
ವೀರಾಜಪೇಟೆ ತಾಲೂಕು ವಿಶ್ವ ಹಿಂದೂ ಪರಿಷತ್, ಭಜರಂಗದಳದ ಸಂಯುಕ್ತ ಆಶ್ರಯದಲ್ಲಿ ನಗರದ ಅಪ್ಪಯ್ಯ ಸ್ವಾಮಿ ರಸ್ತೆಯ ಶ್ರೀ ಬಾಲಾಂಜನೇಯ ದೇಗುಲದಲ್ಲಿ 108 ರಾಮ ಜಪ ಪಾರಾಯಣ ಮಾಡಲಾಯಿತು.
ಭಜರಂಗದಳದ ತಾಲೂಕು ಕಾರ್ಯವಾಹಕ ವಿವೇಕ್ ರೈ, ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ಪೊನ್ನಪ್ಪ ರೈ, ಹಿಂದೂ ಜಾಗರಣ ವೇದಿಕೆಯ ಪದ್ಮನಾಭ, ಪುರುಷೋತ್ತಮ ಕುಂದಾರ್, ಹೇಮಂತ್, ರದೀಶ್, ಸೀತಾರಾಂ ಭಟ್ ಮತ್ತು ವಿವಿಧೆಡೆಗಳಿಂದ ಆಗಮಿಸಿದ ಕಾರ್ಯಕರ್ತರು ಉಪಸ್ಥಿತರಿದ್ದರು.
ಮಡಿಕೇರಿ: ಜಿಲ್ಲಾ ಮೊಗೇರ ಸೇವಾ ಸಮಾಜದ ವತಿಯಿಂದ ಯುಗಾದಿ ಹಬ್ಬದ ಸಂತೋಷಕೂಟ ನಗರದಲ್ಲಿ ನಡೆಯಿತು.
ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುಗಾದಿ ಹಬ್ಬದ ಪ್ರಾಮುಖ್ಯತೆ ಮತ್ತು ಮಹತ್ವದ ಕುರಿತು ಸಮಾಜದ ಗೌರವಾಧ್ಯಕ್ಷ ಪಿ.ಎಂ. ರವಿ ಮಾತನಾಡಿ, ಮೊಗೇರ ಸಮಾಜ ಸಂಘಟನೆಯ ಬಲವರ್ಧನೆಗೆ ಕೈಜೋಡಿಸುವಂತೆ ಕರೆ ನೀಡಿದರು.
ಸಮಾಜದ ಜಿಲ್ಲಾಧ್ಯಕ್ಷ ಬಿ. ಶಿವಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು ಎಂದು ತಿಳಿಸಿದರು.
ಮೊಗೇರ ಸಮಾಜದ ತಾಲೂಕು ಅಧ್ಯಕ್ಷ ಪಿ.ಬಿ. ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಜಿ. ಚಂದ್ರ, ಜಿಲ್ಲಾ ಸಂಚಾಲಕ ಪಿ.ಬಿ. ಜನಾರ್ಧನ, ಹಿರಿಯರಾದ ಪಿ.ಪಿ. ಸೋಮಯ್ಯ, ಮೊಗೇರ ಸ್ಪೋಟ್ರ್ಸ್ ಕ್ಲಬ್ ಕಾರ್ಯದರ್ಶಿ ಮಹೇಶ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಪಿ.ಜಿ. ರಮೇಶ್ ನಿರೂಪಿಸಿ, ವಂದಿಸಿದರು.
ಸೋಮವಾರಪೇಟೆ: ಇಲ್ಲಿನ ಚೌಡ್ಲು ಗ್ರಾಮದ ಶ್ರೀ ದೊಡ್ಡ ಮಾರಿಯಮ್ಮ ದೇವಾಲಯದಲ್ಲಿ ತಾ. 23 ಮತ್ತು 24 ರಂದು ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಾಲಯ ಸಮಿತಿ ಕಾರ್ಯದರ್ಶಿ ಪ್ರವೀಣ್‍ಕುಮಾರ್ ತಿಳಿಸಿದ್ದಾರೆ.
ಶ್ರೀ ಆದಿಶಕ್ತಿ ಅಮ್ಮನವರ ಸನ್ನಿದಿಯಲ್ಲಿ ತಾ. 23ರಂದು ಬೆಳಿಗ್ಗೆ 4 ಗಂಟೆಗೆ ಹೋಮ, 9 ಗಂಟೆಗೆ ಚಪ್ಪರ ಪೂಜೆ, ಸಂಜೆ 5 ರಿಂದ ಊರಿನ ಪ್ರಮುಖ ಬೀದಿಗಳಲ್ಲಿ ದೇವಿಯ ವಿಗ್ರಹದ ಮೆರವಣಿಗೆ ನಡೆಯಲಿದೆ.
ತಾ. 24 ರಂದು ಬೆಳಿಗ್ಗೆ 11 ಗಂಟೆಗೆ ಜ್ಯೋತಿ ಕಾರ್ಯಕ್ರಮ, ಮಧ್ಯಾಹ್ನ 1 ರಿಂದ ಅನ್ನದಾನ, ತಾ. 26 ರಂದು ಸಂಜೆ 5 ರಿಂದ ಶಾಂತಿ ಪೂಜೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ 9480845261 ಸಂಪರ್ಕಿಸಬಹುದು. ಕೊಟ್ಟೋಳಿ: ವೀರಾಜಪೇಟೆ ಶ್ರೀ ಭದ್ರಕಾಳಿ ದೇವಿಯ ವಾರ್ಷಿಕ ಮಹೋತ್ಸವವನ್ನು ಆಚರಿಸಲಾಯಿತು. ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ಕೊಟ್ಟೋಳಿ ಗ್ರಾಮದ ಶ್ರೀ ಭದ್ರಕಾಳಿ ವಾರ್ಷಿಕ ಮಹೋತ್ಸವ ಪ್ರಾಥ:ಕಾಲ ದೇವಿಗೆ ಕಳಶಾಭಿಶೇಕ, ಎಳನೀರು ಮತ್ತು ವಿವಿಧ ದ್ರವ್ಯಗಳಿಂದ ಅಭಿಷೇಕಾದಿಗಳು ನಡೆದು ಕನಕಾಭರಣಗಳು ಮತ್ತು ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ ಮಹಾಪೂಜೆ ಸಲ್ಲಿಸಲಾಯಿತು. ದೇಗುಲಕ್ಕೆ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು ಭಕ್ತರು ಶ್ರೀ ದೇವಿಯ ಅನುಗ್ರಹ ಪಡೆದು ಪುನೀತರಾದರು.
ನಾಲ್ಕೇರಿ: ಕುಂಜಿಲ- ನಾಲ್ಕೇರಿ ಶ್ರೀ ಭಗವತಿ ದೇವಿಯ ವಾರ್ಷಿಕೋತ್ಸವವು ತಾ. 5 ರಿಂದ 8 ರವರೆಗೆ ನಡೆಯಿತು.
ತಾ. 5 ರಂದು ಸಂಜೆ ದೀಪಾರಾಧನೆ, ದೇವರ ಬಲಿ, 6 ರಂದು ಕೊಟ್ಟೋಳಿ: ವೀರಾಜಪೇಟೆ ಶ್ರೀ ಭದ್ರಕಾಳಿ ದೇವಿಯ ವಾರ್ಷಿಕ ಮಹೋತ್ಸವವನ್ನು ಆಚರಿಸಲಾಯಿತು. ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ಕೊಟ್ಟೋಳಿ ಗ್ರಾಮದ ಶ್ರೀ ಭದ್ರಕಾಳಿ ವಾರ್ಷಿಕ ಮಹೋತ್ಸವ ಪ್ರಾಥ:ಕಾಲ ದೇವಿಗೆ ಕಳಶಾಭಿಶೇಕ, ಎಳನೀರು ಮತ್ತು ವಿವಿಧ ದ್ರವ್ಯಗಳಿಂದ ಅಭಿಷೇಕಾದಿಗಳು ನಡೆದು ಕನಕಾಭರಣಗಳು ಮತ್ತು ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ ಮಹಾಪೂಜೆ ಸಲ್ಲಿಸಲಾಯಿತು. ದೇಗುಲಕ್ಕೆ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು ಭಕ್ತರು ಶ್ರೀ ದೇವಿಯ ಅನುಗ್ರಹ ಪಡೆದು ಪುನೀತರಾದರು.
ನಾಲ್ಕೇರಿ: ಕುಂಜಿಲ- ನಾಲ್ಕೇರಿ ಶ್ರೀ ಭಗವತಿ ದೇವಿಯ ವಾರ್ಷಿಕೋತ್ಸವವು ತಾ. 5 ರಿಂದ 8 ರವರೆಗೆ ನಡೆಯಿತು.
ತಾ. 5 ರಂದು ಸಂಜೆ ದೀಪಾರಾಧನೆ, ದೇವರ ಬಲಿ, 6 ರಂದು ಬಂಧು-ಬಳಗ, ಸ್ನೇಹಿತರು, ಆತ್ಮೀಯರಿಗೆಲ್ಲ ಬೇವು-ಬೆಲ್ಲ ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡರು. ಹಿರಿಯರಿಗೆ ನಮಸ್ಕರಿಸಿದರು.
ಮನೆ ಮನೆಗಳಲ್ಲಿ ಮಾವಿನ ಕಾಯಿ ಚಿತ್ರನ್ನ, ಮೊಸರನ್ನ, ಒಬ್ಬಟ್ಟು, ಪಾಯಸ, ಹೋಳಿಗೆ ಸಾಂಬಾರು, ಕೋಸಂಬರಿ, ವಡೆ ಇತ್ಯಾದಿ ವಿಶೇಷ ಭಕ್ಷ್ಯಗಳನ್ನು ತಯಾರಿಸಿ ಸಹಭೋಜನ ಮಾಡಿ ಸಂಭ್ರಮಿಸಿದರು.
ಪಟ್ಟಣದ ಗಣಪತಿ-ಚಂದ್ರಮೌಳೇಶ್ವರ-ಪಾರ್ವತಿ ಮುಖ್ಯ ದೇವಾಲಯದಲ್ಲಿ ಯುಗಾದಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಪೂಜಾ ವಿಧಿಗಳನ್ನು ನೆರವೇರಿಸಿದ ಅರ್ಚಕರಾದ ಮಾಲತೇಶ್ ಭಟ್, ಮಲ್ಲೇಶ್ ಭಕ್ತರಿಗೆ ಬೇವು-ಬೆಲ್ಲ, ಪ್ರಸಾದ ಹಂಚಿ ಆಶೀರ್ವದಿಸಿದರು. ಅರ್ಚಕ ವಲ್ಲೀಶ್ ಭಟ್ ಪಂಚಾಂಗ ಶ್ರವಣ ಮಾಡಿದರು. ಬೀರಲಿಂಗೇಶ್ವರ-ಪ್ರಬಲ ಭೈರವಿ ಗ್ರಾಮ ದೇವತೆಗಳ ಗುಡಿ, ಶ್ರೀ ರಾಮಮಂದಿರ ಹಾಗೂ ವಿಜಯ ವಿನಾಯಕ ದೇವಾಲಯಗಳಲ್ಲೂ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ವಿಧಿಗಳನ್ನು ನೆರವೇರಿಸಿ, ಪಂಚಾಂಗ ಶ್ರವಣ ಮಾಡಲಾಯಿತು.
ಗುಡ್ಡೆಹೊಸೂರು : ರಂಗಸಮುದ್ರ ಗ್ರಾಮದ ಶ್ರೀ ಜೋಡಿ ಬಸವೇಶ್ವರ ವಾರ್ಷಿಕೋತ್ಸವವು ತಾ. 8 ಮತ್ತು 9ರಂದು ನಡೆಯಿತು. ಇಲ್ಲಿನ ಚಿಕ್ಲಿಹೋಳೆ ಮತ್ತು ಕಾವೇರಿ ನದಿಯ ಸಂಗಮದಲ್ಲಿ ಗಂಗಾಪೂಜೆ ನಡೆಸಿ ಅಲಂಕೃತಗೊಂಡ ದೇವರ ಪಲ್ಲಕ್ಕಿಯಲ್ಲಿ ಮೆರವಣಿಗೆ ಸಾಗಿ ದೇವಸ್ಥಾನದ ಆವರಣದಲ್ಲಿ ಕೊಂಡಹಾಯ್ದು ನಂತರ ಮಹಾಮಂಗಳಾರತಿ ನಡೆಯಿತು. ದೇವಸ್ಥಾನ ಸಮಿತಿಯ ಅಧ್ಯಕ್ಷ ಎನ್.ಪಿ. ಕುಶಾಲಪ್ಪ ಮತ್ತು ಕಾರ್ಯದರ್ಶಿ ಕೆ.ಟಿ. ಧನಂಜಯ ಸಹಿತ ಗ್ರಾಮಸ್ಥರು ಶ್ರದ್ಧಾಭಕ್ತಿಭಾವದಿಂದ ಭಾಗವಹಿಸಿದ್ದರು.ನಾಪೋಕ್ಲು: ಇಲ್ಲಿಗೆ ಸಮೀಪದ ಕಕ್ಕುಂದಕಾಡು ವೆಂಕಟೇಶ್ವರ ವಾರ್ಷಿಕ ಜಾತ್ರೋತ್ಸವ ಎರಡು ದಿನ ವಿಜೃಂಭಣೆಯಿಂದ ಜರುಗಿತು. ಉತ್ಸವದ ಅಂಗವಾಗಿ ಮಂಗಳವಾರ ದೇವರ ದರ್ಶನ ನೃತ್ಯ ಹಾಗೂ ವಿಶೇಷ ಸೇವೆಗಳು ಜರುಗಿದವು. ಮಧ್ಯಾಹ್ನ ಮಹಾಪೂಜೆಯ ಬಳಿಕ ದೇವರ ನೃತ್ಯಬಲಿ ಜರುಗಿತು. ಅಧಿಕ ಸಂಖ್ಯೆಯ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ದೇವರ ಉತ್ಸವ ಮೂರ್ತಿಯನ್ನು ವಾದ್ಯಗೋಷ್ಠಿಗಳೊಂದಿಗೆ ನಾಪೋಕ್ಲು ಪೇಟೆಯ ಮುಖ್ಯಬೀದಿಯಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ಕಾವೇರಿನದಿಯಲ್ಲಿ ತೀರ್ಥಸ್ನಾನ ಕೈಗೊಳ್ಳಲಾಯಿತು. ರಾತ್ರಿ ವಸಂತ ಪೂಜೆಯೊಂದಿಗೆ ಉತ್ಸವ ಸಂಪನ್ನಗೊಂಡಿತು.
ಸೋಮವಾರಪೇಟೆ: ಅರಸಿನಕುಪ್ಪೆ ಸಿದ್ದಲಿಂಗಪುರದ ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರದಲ್ಲಿ ಪಂಚಮಿ ಪೂಜೆ ಶ್ರದ್ಧಾಭಕ್ತಿಯಿಂದ ನಡೆಯಿತು.
ಕ್ಷೇತ್ರದ ಶ್ರೀ ನಾಗ ಸನ್ನಿಧಿಯಲ್ಲಿ ಬೆಳಗ್ಗಿನಿಂದಲೇ ವಿವಿಧ ಅಭಿಷೇಕ, ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಮಧ್ಯಾಹ್ನ ಮಹಾಮಂಗಳಾರತಿ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ದೇವಾಲಯದ ಶ್ರೀ ರಾಜೇಶ್‍ನಾಥ್ ಗುರೂಜಿ, ಅರ್ಚಕರುಗಳಾದ ಜಗದೀಶ್ ಉಡುಪ, ವಾದಿರಾಜ್ ಭಟ್, ಮಣಿಕಂಠನ್ ನಂಬೂದರಿ, ಕಿರಣ್ ಅವರುಗಳ ಪೌರೋಹಿತ್ವದಲ್ಲಿ ಪಂಚಮಿ ಪೂಜೆ ನಡೆದವು. ನೂರಾರು ಭಕ್ತರು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.
ಹೊದ್ದೂರು: ಹೊದ್ದೂರಿನ ಅಯ್ಯಪ್ಪ ಕಾಲೋನಿಯಲ್ಲಿ ಪಾಷಾಣಮೂರ್ತಿ ಮತ್ತು ಇತರ ದೈವಗಳ ವಾರ್ಷಿಕ ನೇಮೋತ್ಸವ ತಾ. 18 ಮತ್ತು 19 ರಂದು ನಡೆಯಲಿದೆ.
ತಾ. 18 ರಂದು ಬೆಳಿಗ್ಗೆ 6 ಗÀಂಟೆಗೆ ಸ್ಥಳ ಶುದ್ಧಿ, 7 ರಿಂದ ಗಣಪತಿ ಹವನ, 8 ರಿಂದ ವಿಶೇಷ ಪೂಜೆ, ದೈವದರ್ಶನ ನಡೆಯಲಿದೆ. ಮಧ್ಯಾಹ್ನ 12ಕ್ಕೆ ದೈವ ನರ್ತಕರ ಆಗಮನ, 1 ಗÀಂಟೆಯ ನಂತರ ದಾನಿಗಳ ಪ್ರಾಯೋಜಿತ ಸಾಮೂಹಿಕ ಅನ್ನದಾನ ನಡೆಯಲಿದೆ.
ಸಂಜೆ 7 ಗಂಟೆಗೆ ಭಂಡಾರ ತೆಗೆಯುವದು, ರಾತ್ರಿ 8 ಗಂಟೆಯ ನಂತರ ಅನ್ನದಾನ, 9 ಗಂಟೆಯಿಂದ ಶ್ರೀಧರ್ಮದೈವ ಪಂಜುರ್ಲಿಯ ನೇಮೋತ್ಸವ, 11 ಗಂಟೆಯ ನಂತರ ಕಲ್ಕುಡ ದೈವದ ನೇಮೋತ್ಸವ, ತಾ. 19ರ ಮುಂಜಾನೆ 1 ಗಂಟೆಯ ನಂತರ ಪಾಷಾಣಮೂರ್ತಿ ದೈವದ ನೇಮೋತ್ಸವ, ಹರಕೆ ಸೇವೆಗಳು ನೆರವೇರಲಿವೆ.
ನಾಪೋಕ್ಲು: ಇಲ್ಲಿಗೆ ಸಮೀಪದ ಕಕ್ಕುಂದಕಾಡು ವೆಂಕಟೇಶ್ವರ ವಾರ್ಷಿಕ ಜಾತ್ರೋತ್ಸವ ಎರಡು ದಿನ ವಿಜೃಂಭಣೆಯಿಂದ ಜರುಗಿತು. ಉತ್ಸವದ ಅಂಗವಾಗಿ ಮಂಗಳವಾರ ದೇವರ ದರ್ಶನ ನೃತ್ಯ ಹಾಗೂ ವಿಶೇಷ ಸೇವೆಗಳು ಜರುಗಿದವು. ಮಧ್ಯಾಹ್ನ ಮಹಾಪೂಜೆಯ ಬಳಿಕ ದೇವರ ನೃತ್ಯಬಲಿ ಜರುಗಿತು. ಅಧಿಕ ಸಂಖ್ಯೆಯ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ದೇವರ ಉತ್ಸವ ಮೂರ್ತಿಯನ್ನು ವಾದ್ಯಗೋಷ್ಠಿಗಳೊಂದಿಗೆ ನಾಪೋಕ್ಲು ಪೇಟೆಯ ಮುಖ್ಯಬೀದಿಯಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ಕಾವೇರಿನದಿಯಲ್ಲಿ ತೀರ್ಥಸ್ನಾನ ಕೈಗೊಳ್ಳಲಾಯಿತು. ರಾತ್ರಿ ವಸಂತ ಪೂಜೆಯೊಂದಿಗೆ ಉತ್ಸವ ಸಂಪನ್ನಗೊಂಡಿತು.
ಸೋಮವಾರಪೇಟೆ: ಅರಸಿನಕುಪ್ಪೆ ಸಿದ್ದಲಿಂಗಪುರದ ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರದಲ್ಲಿ ಪಂಚಮಿ ಪೂಜೆ ಶ್ರದ್ಧಾಭಕ್ತಿಯಿಂದ ನಡೆಯಿತು.
ಕ್ಷೇತ್ರದ ಶ್ರೀ ನಾಗ ಸನ್ನಿಧಿಯಲ್ಲಿ ಬೆಳಗ್ಗಿನಿಂದಲೇ ವಿವಿಧ ಅಭಿಷೇಕ, ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಮಧ್ಯಾಹ್ನ ಮಹಾಮಂಗಳಾರತಿ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ದೇವಾಲಯದ ಶ್ರೀ ರಾಜೇಶ್‍ನಾಥ್ ಗುರೂಜಿ, ಅರ್ಚಕರುಗಳಾದ ಜಗದೀಶ್ ಉಡುಪ, ವಾದಿರಾಜ್ ಭಟ್, ಮಣಿಕಂಠನ್ ನಂಬೂದರಿ, ಕಿರಣ್ ಅವರುಗಳ ಪೌರೋಹಿತ್ವದಲ್ಲಿ ಪಂಚಮಿ ಪೂಜೆ ನಡೆದವು. ನೂರಾರು ಭಕ್ತರು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.
ಹೊದ್ದೂರು: ಹೊದ್ದೂರಿನ ಅಯ್ಯಪ್ಪ ಕಾಲೋನಿಯಲ್ಲಿ ಪಾಷಾಣಮೂರ್ತಿ ಮತ್ತು ಇತರ ದೈವಗಳ ವಾರ್ಷಿಕ ನೇಮೋತ್ಸವ ತಾ. 18 ಮತ್ತು 19 ರಂದು ನಡೆಯಲಿದೆ.
ತಾ. 18 ರಂದು ಬೆಳಿಗ್ಗೆ 6 ಗÀಂಟೆಗೆ ಸ್ಥಳ ಶುದ್ಧಿ, 7 ರಿಂದ ಗಣಪತಿ ಹವನ, 8 ರಿಂದ ವಿಶೇಷ ಪೂಜೆ, ದೈವದರ್ಶನ ನಡೆಯಲಿದೆ. ಮಧ್ಯಾಹ್ನ 12ಕ್ಕೆ ದೈವ ನರ್ತಕರ ಆಗಮನ, 1 ಗÀಂಟೆಯ ನಂತರ ದಾನಿಗಳ ಪ್ರಾಯೋಜಿತ ಸಾಮೂಹಿಕ ಅನ್ನದಾನ ನಡೆಯಲಿದೆ.
ಸಂಜೆ 7 ಗಂಟೆಗೆ ಭಂಡಾರ ತೆಗೆಯುವದು, ರಾತ್ರಿ 8 ಗಂಟೆಯ ನಂತರ ಅನ್ನದಾನ, 9 ಗಂಟೆಯಿಂದ ಶ್ರೀಧರ್ಮದೈವ ಪಂಜುರ್ಲಿಯ ನೇಮೋತ್ಸವ, 11 ಗಂಟೆಯ ನಂತರ ಕಲ್ಕುಡ ದೈವದ ನೇಮೋತ್ಸವ, ತಾ. 19ರ ಮುಂಜಾನೆ 1 ಗಂಟೆಯ ನಂತರ ಪಾಷಾಣಮೂರ್ತಿ ದೈವದ ನೇಮೋತ್ಸವ, ಹರಕೆ ಸೇವೆಗಳು ನೆರವೇರಲಿವೆ.ಮಡಿಕೇರಿ: ಕೊಡವ ಮಕ್ಕಡ ಕೂಟವು ತಾ. 14 ರಂದು ಕೊಡವರ ಹೊಸ ವರ್ಷಾಚರಣೆ ಎಡಮ್ಯಾರ್ ಒಂದನ್ನು ಈ ವರ್ಷದ ದಕ್ಷಿಣ ಕೊಡಗಿನ ಟಿ. ಶೆಟ್ಟಿಗೇರಿ ಗ್ರಾಮದ ಕಾಯಂಕೊಲ್ಲಿಯಲ್ಲಿ ನಡೆಸಲಾಗುವದೆಂದು ಕೂಟದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ತಿಳಿಸಿದ್ದಾರೆ.
ಈ ವರ್ಷ ತಾ. 14 ರ ಭಾನುವಾರ ಕಾಯಂಕೊಲ್ಲಿಯ ಮಚ್ಚಮಾಡ ರಮೇಶ್ ಮನೆಯಲ್ಲಿ ಪೂರ್ವಾಹ್ನ 7 ಗಂಟೆಗೆ ನೆಲ್ಲಕ್ಕಿ ನಡುಬಾಡೆಯಲ್ಲಿ ಅಕ್ಕಿ ಹಾಕಿ ಹಿರಿಯರ ಆಶೀರ್ವಾದ ಪಡೆದು ಪೂರ್ವಾಹ್ನ 8 ಗಂಟೆಗೆ ತಳಿಯಕ್ಕಿ ಬೊಳ್‍ಚ ದುಡಿಕೊಟ್ಟು ಹಾಡಿನೊಂದಿಗೆ ರಮೇಶ್ ಅವರ ಗದ್ದೆಗೆ ತೆರಳಿ ಉಳುಮೆ ಮಾಡುವ ಮೂಲಕ ಎಡಮ್ಯಾರ್ 1ರ ಸಾಂಪ್ರದಾಯದ ಆಚರಣೆಯನ್ನು ಮಾಡಲಾಗುವದು.
ಪೂರ್ವಾಹ್ನ 10 ಗಂಟೆಗೆ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಟಿ. ಶೆಟ್ಟಿಗೇರಿಯ ಕಾಫಿ ಬೆಳೆಗಾರ ಮಚ್ಚಮಾಡ ಸೋಮಯ್ಯ, ಕೊಡಗು ಪ್ರೆಸ್ಸ್‍ಕ್ಲಬ್‍ನ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕಾರ್ಯಕ್ರಮದ ಸಂಚಾಲಕ ಹಾಗೂ ಕೊಡವ ಮಕ್ಕಡ ಕೂಟದ ಉಪಾಧ್ಯಕ್ಷ ಚೆಪ್ಪುಡಿರ ರಾಕೇಶ್ ದೇವಯ್ಯ, ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ಬರಹಾಗಾರ್ತಿ ಉಳುವಂಗಡ ಕಾವೇರಿ ಉದಯ ಭಾಗವಹಿಸಲಿರುವರು. ಈ ವೇಳೆ ಕೊಡಗ್‍ರ ಸಿಪಾಯಿ, ಚಿಗರೆಲೆಗಳು ಪುಸ್ತಕ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಮಡಿಕೇರಿ: ಮೂರ್ನಾಡು-ಕಾಂತೂರು ಶ್ರೀ ಪನ್ನಂಗಾಲ ತಾಯಿ ವಾರ್ಷಿಕ ಉತ್ಸವವು ತಾ. 18 ಹಾಗೂ ತಾ. 19 ರಂದು ನೆರವೇರಲಿದೆ.
ತಾ. 18 ರಂದು ದೇವರ ಶುದ್ಧ ಕಳಸ, ಕೆರೆಮನೆಯಿಂದ ಭಂಡಾರ ತರುವದು, ಎತ್ತು ಪೋರಾಟ, ದೇವರ ದರ್ಶನ, ರಾತ್ರಿ 7.30ಕ್ಕೆ ಕುರುಂದ ಭಾರಣಿ, ದೇವರ ದರ್ಶನ ನಡೆಯಲಿದೆ. ತಾ. 19 ರಂದು ದೇವರ ದರ್ಶನ, ಮಧ್ಯಾಹ್ನ ಅನ್ನದಾನದ ಬಳಿಕ ಚಾಮುಂಡಿ ಉತ್ಸವ, ಕುರುಂದಾಟ, ದೇವರ ಜಳಕ ನಡೆಯಲಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷರು, ತಕ್ಕ ಮುಖ್ಯಸ್ಥರು ತಿಳಿಸಿದ್ದಾರೆ.
ಸೂರ್ಲಬ್ಬಿ: ಸೂರ್ಲಬ್ಬಿ ನಾಡಿನ ಶ್ರೀ ಕಾಳತಮ್ಮೆ ಹಾಗೂ ಕ್ಷೇತ್ರಪಾಲ ದೇವರ ವಾರ್ಷಿಕ ಉತ್ಸವವು ತಾ. 9 ರಂದು ಪಟ್ಟಣಿಯೊಂದಿಗೆ ಆರಂಭಗೊಂಡಿತು. ಗೌಡಂಡ ಕುಟುಂಬದ ತಕ್ಕರ ಮನೆಯಿಂದ ಭಂಡಾರ ತರುವ ಮೂಲಕ ವಾರ್ಷಿಕ ಉತ್ಸವ ಚಾಲನೆಗೊಂಡಿದ್ದು, ನಿತ್ಯ ಇರುಬೊಳಕು ನಡೆಯಲಿದೆ. ತಾ. 15ರ ಮಧ್ಯರಾತ್ರಿ ಹಾಗೂ ತಾ. 16ರಂದು ಬೆಳಗ್ಗಿನ ಜಾವ ದೊಡ್ಡ ಹಬ್ಬ ಜರುಗಲಿದೆ. ಅಂದು ಬೆಳಿಗ್ಗೆ ಇತರ ದೈವಿಕ ಕೈಂಕರ್ಯ, ಹರಕೆ ಬಳಿಕ ತಾ. 17ರಂದು ಭಂಡಾರ ಹಿಂತೆರಳುವದರೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ.
ಒಡೆಯನಪುರ: ಸಮೀಪದ ಗೋಪಾಲಪುರ ಶ್ರೀ ಬನಶಂಕರಿ ಅಮ್ಮನವರ 21ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ ತಾ. 16 ಮತ್ತು 17 ರಂದು ನಡೆಯಲಿದೆ ಎಂದು ಗೋಪಾಲಪುರ ಶ್ರೀ ಬನಶಂಕರಿ ಅಮ್ಮನವರ ದೇವಾಸ್ಥಾನ ಮತ್ತು ದೇವಾಂಗ ಸಂಘದ ಪ್ರಕಟಣೆ ತಿಳಿಸಿದೆ.
ತಾ. 16 ರಂದು ಬೆಳಿಗ್ಗೆ 8 ಗಂಟೆಗೆ ಶ್ರೀ ಬನಶಂಕರಿ ಅಮ್ಮನವರ ದೇವಾಸ್ಥಾನದಲ್ಲಿ ಮಹಾಗಣಪತಿ ಪೂಜೆ, ಶ್ರೀ ವೀರಭದ್ರೇಶ್ವರ ಪೂಜೆ, ನವಗ್ರಹ ಪೂಜಾ ಪೂರ್ವಕ ಶ್ರೀ ಅಮ್ಮನವರಿಗೆ ಫಲ ಪಂಚಾಮೃತ ಅಭಿಷೇಕ, ದುರ್ಗಾಸೂಕ್ತ, ಶ್ರೀ ಸೂಕ್ತ, ಜಲಾಭಿಷೇಕ ಮತ್ತು ಅಲಂಕಾರ ಸೇವೆ ನಡೆಯುತ್ತದೆ. ಬೆಳಿಗ್ಗೆ 10 ಗಂಟೆಗೆ ಮಹಾಗಣಪತಿ ಹೋಮ, ನವಗ್ರಹ ಹೋಮ, ದುರ್ಗಾವಾಸ್ತು, ಮೃತ್ಯುಂಜಯ, ಬ್ರಹ್ಮ, ವಿಷ್ಣು, ಮಹೇಶ್ವರಾದಿ ಪೂಜಾ ಮತ್ತು ದುರ್ಗಾಹೋಮ, ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ, ಮಹಾಮಂಗಳಾರತಿಯೊಂದಿಗೆ ಪ್ರಸಾದ ವಿನಿಯೋಗವಿರುತ್ತದೆ. ಮಧ್ಯಾಹ್ನ 1 ಗಂಟೆಯಿಂದ ಭಕ್ತಾದಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ರಾತ್ರಿ 8 ಗಂಟೆಗೆ ಶ್ರೀ ದೇವಿಗೆ ಮಹಾಪೂಜೆ ಮತ್ತು ಮಹಾಮಂಗಳಾರತಿ ನಡೆಯಲಿದೆ.
ತಾ. 17 ರಂದು ಮುಂಜಾನೆ 4.30ಕ್ಕೆ ಶ್ರೀ ಬನಶಂಕರಿ ಅಮ್ಮನವರನ್ನು ಅಡ್ಡ ಪಲ್ಲಕ್ಕಿಯಲ್ಲಿ ವಾದ್ಯಗೋಷ್ಠಿ ಸಮೇತ ಗಂಗಾ ಸ್ನಾನಕ್ಕೆ ತರಲಾಗುತ್ತದೆ, ಪಂಚಕಲಶಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆಯಲ್ಲಿ ದೇವಾಸ್ಥಾನಕ್ಕೆ ತರಲಾಗುತ್ತದೆ. ಬೆಳಿಗ್ಗೆ 8.30 ಕ್ಕೆ ಕೆಂಡೋತ್ವವ ಕಾರ್ಯಕ್ರಮ ನಡೆಯುತ್ತದೆ. 9 ಗಂಟೆಗೆ ದೇವಾಲಯ ಪ್ರವೇಶ ನಂತರ ಶ್ರೀ ಅಮ್ಮನವರಿಗೆ ಕುಂಕುಮಾರ್ಚನೆ ಪೂಜೆ ಮತ್ತು ಮಹಾ ಮಂಗಳಾರತಿ ಕಾರ್ಯಕ್ರಮ ಜರುಗಲಿದೆ.
*ಸಿದ್ದಾಪುರ: ನೆಲ್ಲಿಹುದಿಕೇರಿಯ ಶ್ರೀ ಮುತ್ತಪ್ಪ ದೇವರ ವಾರ್ಷಿಕೋತ್ಸವ ವಿಜೃಂಭಣೆಯಿಂದ ನಡೆಯಿತು. ತಾ. 6 ರಂದು ಗಣಪತಿ ಹೋಮ, ಪೂಜಾ ಕೈಂಕರ್ಯಗಳ ನಂತರ ಧ್ವಜಾರೋಹಣವನ್ನು ದೇವಾಲಯ ಸಮಿತಿ ಅಧ್ಯಕ್ಷ ಪಾಲಚಂಡ ಚೀಯಣ್ಣ, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಜಿ.ಪಂ. ಸದಸ್ಯೆ ಸುನಿತಾ ಮಂಜುನಾಥ್ ನೆರವೇರಿಸಿದರು.
ಕಲಶವನ್ನು ರಾಜಪ್ಪ ಅವರ ಮನೆಯಿಂದ ತಂದು ಕಾವೇರಿ ನದಿಯಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ತರಲಾಯಿತು. ಶ್ರೀ ಮುತ್ತಪ್ಪ ತಿರುವಪ್ಪನ ವೆಳ್ಳಾಟಂ, ಗುಳಿಗ ವೆಳ್ಳಾಟಂ ಅನ್ನು ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ವೀಕ್ಷಿಸಿದರು. ಚೆಟ್ಟಿಯಾರ್ ಕುಟುಂಬದವರಿಂದ ಅನ್ನದಾನ ಏರ್ಪಡಿಸಲಾಗಿತ್ತು.
ದೇವಾಲಯ ಸಮಿತಿ ಸದಸ್ಯರುಗಳಾದ ಸುನಿಲ್‍ಕುಮಾರ್, ವಿ.ಕೆ. ಲೋಕೇಶ್, ಮುರುಳೀಧರ್, ಟಿ.ಸಿ. ರಾಮನ್ ಕುಟ್ಟಿ, ಸುಕುಮಾರನ್, ರಾಜಶೇಖರನ್ ಉಪಸ್ಥಿತರಿದ್ದರು.
ಕಗ್ಗೋಡ್ಲು: ಕಗ್ಗೋಡ್ಲು ಶ್ರೀ ಭಗವತಿ ದೇವಸ್ಥಾನದ ವಾರ್ಷಿಕ ಉತ್ಸವ ತಾ. 14 ರಿಂದ 17 ರವರೆಗೆ ನಡೆಯಲಿದೆ. ತಾ. 14 ರಂದು ಬೆಳಿಗ್ಗೆ 9.30 ಗಂಟೆಗೆ ಮಹಾಪೂಜೆ, 10.30 ಗಂಟೆಗೆ ಪಂಚಗವ್ಯ ಯೋಜನೆ, ಪ್ರೋಕ್ಷಣೆ ಪ್ರಾಶನ, ಪುಣ್ಯಾಹ ವಾಚಬ, ಋತ್ವಿತ್ವರಣ, ಮಹಾಗಣಪತಿ ಹೋಮ. ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನೆರವೇರಲಿದೆ. ಸಾಯಂಕಾಲ 6 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಉತ್ಸವ ಆರಂಭ, ಕೊಡಿಮರ ಏರಿಸುವದು, ಪರಿವಾರ ದೇವತಾ ಬಲಿ, ದೇವಿ ದರ್ಶನ, ಮಹಾಪೂಜೆ ನಂತರ ಅನ್ನಸಂತರ್ಪಣೆ.
ತಾ. 15 ರಂದು ಪ್ರಾತಃಕಾಲ 5 ಗಂಟೆಗೆ ದೇವರ ನೃತ್ಯ, ಬೆಳಿಗ್ಗೆ 9 ಗಂಟೆಗೆ ಪ್ರಾತಃಕಾಲ ಮಹಾಪೂಜೆ, 10 ಗಂಟೆಗೆ ನವಗ್ರಹ ವೃಕ್ಷಪೂಜೆ, ಮಧ್ಯಾಹ್ನ 12.30 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪನೆ ನಡೆಯಲಿದೆ.
ತಾ. 16 ರಂದು ಬೆಳಿಗ್ಗೆ 7 ಗಂಟೆಗೆ ಏಕದಶ ರುದ್ರಾಭಿಷೇಕ, 9.30 ಗಂಟೆಗೆ ಪ�