ಸೋಮವಾರಪೇಟೆ, ಏ. 13: ಹಿಂದೂ ಮಲಯಾಳ ಸಮಾಜದ ವತಿಯಿಂದ ತಾ. 20 ರಿಂದ 22 ರವರೆಗೆ ವಿಶು ಹಬ್ಬದ ಪ್ರಯುಕ್ತ ಸಮುದಾಯ ಬಾಂಧವರಿಗೆ ಸಮೀಪದ ಮಾದಾಪುರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜಿಲ್ಲಾ ಮಟ್ಟದ ಕ್ರಿಕೆಟ್ ಹಾಗೂ ಮಹಿಳೆಯರಿಗೆ ಹಗ್ಗಜಗ್ಗಾಟ ಸ್ಪರ್ಧೆ ಆಯೋಜಿಸಲಾಗಿದೆ.

ವಿಜೇತ ತಂಡಗಳಿಗೆ ಪ್ರಥಮ ಬಹುಮಾನವಾಗಿ 22,222 ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನವಾಗಿ 15,555 ಮತ್ತು ಟ್ರೋಫಿ ಸೇರಿದಂತೆ ವೈಯುಕ್ತಿಕ ವಿಭಾಗದಲ್ಲೂ ಬಹುಮಾನ ನೀಡಲಾಗುವದು. ಎಲ್ಲಾ ಬಹುಮಾನಗಳನ್ನು ಮಲಯಾಳ ಸಂಘದ ಅಧ್ಯಕ್ಷರಾದ ವಿಜಯನ್ ಅವರು ಪ್ರಾಯೋಜಿಸಿದ್ದಾರೆ ಎಂದು ಕ್ರೀಡಾಕೂಟದ ಆಯೋಜಕರಾದ ಸುನಿಲ್ ತಿಳಿಸಿದ್ದಾರೆ.

ಮಲಯಾಳ ಬಾಂಧವರಲ್ಲಿ ಕ್ರೀಡಾ ಸ್ಪೂರ್ತಿ, ಪರಸ್ಪರ ಬಾಂಧವ್ಯ ಬೆಸೆಯುವ ಉದ್ದೇಶದಿಂದ ಪಂದ್ಯಾವಳಿ ಆಯೋಜಿಸಿದ್ದು, ತಾ. 15ರ ಒಳಗೆ ತಂಡಗಳನ್ನು ಮೊ:9741954126, 9916722468 ಸಂಖ್ಯೆಗಳ ಮೂಲಕ ನೊಂದಾಯಿಸಿ ಕೊಳ್ಳಬೇಕೆಂದು ಆಯೋಜಕರು ಮಾಹಿತಿ ನೀಡಿದ್ದಾರೆ.